More

    ಅಕ್ರಮ ಆಸ್ತಿ ಸಾಬೀತು ಮಾಡಲಿ: ಪಟ್ಟಣಶೆಟ್ಟಿ

    ವಿಜಯಪುರ: ಎಲ್ಲಾ ನಾನೇ, ನನ್ನಿಂದಲೇ ಎಲ್ಲಾ ಎಂಬ ಧೋರಣೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರಿಗೆ ಇದೆ. ಮೊದಲು ಅವರು ಅದನ್ನು ಬಿಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಎಚ್ಚರಿಕೆ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾನು ಸಿಸಿ ರೋಡ್ ಮಾಡಿಸಿದ್ದೇನೆ, ನಾನು ಅಷ್ಟು ಅನುದಾನ ತಂದಿದ್ದೇನೆ ಎಂದು ಯತ್ನಾಳ ಹೇಳುತ್ತಾರೆ. ನಾನು ಕೂಡ ಶಾಸಕನಿದ್ದಾಗ ಆಗಿನ ಸಮಯದಲ್ಲಿ ವಿಜಯಪುರಕ್ಕೆ 120 ಕೋಟಿ ರೂಪಾಯಿ ಅನುದಾನ ತಂದಿದ್ದು, ಒಳಚರಂಡಿ ಮಾಡಿಸಿದ್ದೇನೆ. ಅಲ್ಲದೆ 82ಕೋಟಿ ರೂಪಾಯಿ ಅನುದಾನ ತಂದು ನಗರಕ್ಕೆ ಕುಡಿಯುವ ನೀರು, ಓವರ್ ಹೆಡ್ ಟ್ಯಾಂಕ್ ಮಾಡಿಸಲಾಗಿದೆ ಎಂದು ತಾವು ವಿಜಯಪುರಕ್ಕೆ ನೀಡಿದ್ದ ಕೊಡುಗೆಯನ್ನು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ಮರಿಸಿದ್ರು. ಆವಾಗಲೇ ಮೂರು ಹಂತದಲ್ಲಿ 24×7 ಕುಡಿಯುವ ನೀರಿನ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಲಾಗಿತ್ತು.
    ಜನಪ್ರತಿನಿಧಿ ಆದವರ ಕೆಲಸ ಅಭಿವೃದ್ದಿ ಮಾಡುವುದು, ಅದನ್ನು ಅವರು ಮಾಡಬೇಕು. ನಾನೇ ಮಾಡಿದ್ದೇನೆ, ಅನ್ನೋದು ಬಿಡಬೇಕು. ನಾವು ಅಭಿವೃದ್ಧಿ ಮಾಡಿದ್ದು ಎಲ್ಲೂ ಹೇಳಿಕೊಂಡಿಲ್ಲ. ನಾನು ಹಣ ತಿಂದಿದ್ದೇನೆ ಎಂದು ಯತ್ನಾಳ ಭಾಷಣ ಮಾಡ್ತಾರೆ, ನಾನು ಹಣ ತಿಂದಿದ್ರೆ ಸಾಬೀತು ಪಡಿಸಲಿ. ನಾನು ಅಕ್ರಮ ಆಸ್ತಿ ಮಾಡಿದ್ರೆ ಪ್ರೂವ್ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ರು. ನಾನು ಕಳೆದ ಚುನಾವಣೆ ವೇಳೆ ಪಕ್ಷೇತರರಿಗೆ ಕೆಲಸ ಮಾಡಿದ್ರು ಎಂದು ಆರೋಪಿಸಲಾಗುತ್ತಿದೆ. ನಾನು ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಅವರು ಹೇಳಿದ ಒಂದು ಮಾತಿನಿಂದ ನಾನು ಏನೂ ಮಾಡಿಲ್ಲ. ಒಂದು ವೇಳೆ ನಾವು ಟೈಟ್ ಮಾಡಿದ್ರೆ ಆರಿಸಿ ಬರೋದು ಗೊತ್ತಾಗ್ತಿತ್ತು, ನಾನು ಅದು ಬೇಡ ಎಂದು ಸಡಿಲು ಬಿಟ್ಟಿದ್ದಕ್ಜೆ ಆರಿಸಿ ಬಂದೀರಿ ಎನ್ನುವ ಅರಿವು ಇರಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts