More

    ಅಕ್ರಮವಾಗಿ ನಾಟಾ ಸಾಗಣೆ; ವಾಹನ ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ

    ಸೊರಬ: ಪುರಸಭೆಯ ವಶದಲ್ಲಿದ್ದ ಹಳೇ ನಾಟಾಗಳನ್ನು ಅಕ್ರಮವಾಗಿ ಸಾಗಣೆ ಮಾಡಲು ಸಿದ್ಧವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
    ಪಟ್ಟಣದ ಪುರಸಭೆ ಎದುರು ವಾಣಿಜ್ಯ ಸಂಕೀರ್ಣದ ದಾಸ್ತಾನು ಕೊಠಡಿಯಲ್ಲಿ ಹಳೇ ತಾಲೂಕು ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳ ನಾಟಾವನ್ನು ಸಂಗ್ರಹಿಸಲಾಗಿತ್ತು. ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಎಸಿಎಫ್ ಪ್ರವೀಣ್ ಕುಮಾರ್ ಬಸ್ರೂರ್ ಅವರ ತಂಡ ದಾಳಿ ನಡೆಸಿ, ಸಾಗಣೆಗೆ ಸಿದ್ಧವಾಗಿದ್ದ ಹಳೇ ನಾಟಾ ಮತ್ತು ವಾಹನವನ್ನು ವಶಕ್ಕೆ ಪಡೆದ್ದಾರೆ.
    ಹಳೇ ತಾಲೂಕು ಕಚೇರಿ ಸೇರಿದಂತೆ ಇತರ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಈ ವೇಳೆ ಬೆಲೆ ಬಾಳುವ ಹಳೇ ನಾಟಾವನ್ನು ಪುರಸಭೆಯ ಮುಂಭಾಗದಲ್ಲಿರುವ ಐಡಿಎಸ್‌ಎಂಟಿ ವಾಣಿಜ್ಯ ಮಳಿಗೆಯಲ್ಲಿ ದಾಸ್ತಾನು ಮಾಡಲಾಗಿತ್ತು. ಪುರಸಭೆ ಅಧಿಕಾರಿಗಳು ಈ ಹಳೇ ನಾಟಾ ವಶಕ್ಕೆ ಪಡೆದು 2019ರ ಅಕ್ಟೋಬರ್ 22ರಂದು ಸಾಗರ ಉಪವಿಭಾಗಾಧಿಕಾರಿ, ಸೊರಬ ತಹಸೀಲ್ದಾರ್ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆದರೆ ಯಾವುದೇ ಟೆಂಡರ್ ಪ್ರಕ್ರಿಯೆಗಳು ನಡೆಯದೆ ಮತ್ತು ಸಾಮಾನ್ಯ ಸಭೆಯಲ್ಲಿಯೂ ಚರ್ಚೆ ಮಾಡದೆ ಅಕ್ರಮವಾಗಿ ಕೋಟ್ಯಂತರ ರೂ. ಮೌಲ್ಯದ ನಾಟಾವನ್ನು ಸಾಗಣೆ ಮಾಡಲು ಯತ್ನಿಸಲಾಗಿದೆ. ಈ ನಡುವೆ ಇತ್ತೀಚೆಗೆ ಎರಡ್ಮೂರು ಲೋಡ್ ಕೂಡ ಸಾಗಿಸಲಾಗಿದೆ.
    ಸಾರ್ವಜನಿಕರಿಂದ ಅಕ್ರಮ ಸಾಗಣೆ ಆರೋಪಗಳು ಕೇಳಿ ಬರುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದಾಗ ಪುರಸಭೆ ಮುಖ್ಯಾಧಿಕಾರಿ ಸ್ಪಂದಿಸಿಲ್ಲ. ಇದಕ್ಕೂ ಮೊದಲು ತಹಸೀಲ್ದಾರರು ಮೌಖಿಕವಾಗಿ ತಿಳಿಸಿದ್ದರಿಂದ ಕಟ್ಟಡದ ಬೀಗ ತೆರೆದುಕೊಡಲು ಸೂಚಿಸಿರುವುದಾಗಿ ತಿಳಿಸಿದರು. ಆದರೆ ಪುರಸಭೆ ಮುಖ್ಯಾಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸ್ಪಂದಿಸಲಿಲ್ಲ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts