More

    ಅಕ್ಕಿ ನಾಪತ್ತೆ ಪ್ರಕರಣ ಸಿಐಡಿಗೆ ವಹಿಸಿ


    ಯಾದಗಿರಿ: ಶಹಾಪುರದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಉಗ್ರಾಣದಲ್ಲಿ ನಾಪತ್ತೆಯಾದ ಆರು ಸಾವಿರ ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ಪ್ರಕರಣವನ್ನು ಸಕರ್ಾರ ಸಿಐಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಬಡವರ ತುತ್ತಿನ ಚೀಲ ತುಂಬಿಸಲು ಸಕರ್ಾರ ಅನ್ನಭಾಗ್ಯ ಯೋಜನೆ ಮೂಲಕ ಮುಂದಾಗಿದೆ. ಆದರೆ ಅಧಿಕಾರಿ ವರ್ಗ ಹಣದಾಸೆಗಾಗಿ ಬಡವರಿಗೆ ತಲುಪಿಸದೆ ಕಾಳಸಂತೆಯಲ್ಲಿ ಮಾರಾಟ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ. ಸುಮಾರು 2 ಕೋಟಿ ರೂ.ಅಕ್ರಮ ನಡೆದಿದ್ದು ಸಾವಿರಾರು ಕ್ವಿಂಟಾಲ್ ಅಕ್ಕಿ ಮೂಟೆಗಳು ಎಲ್ಲಿಗೆ ಸಾಗಾಟ ಮಾಡಲಾಗಿದೆ ಎಂಬ ಬಗ್ಗೆ ಸಕರ್ಾರ ಪತ್ತೆ ಹಚ್ಚಬೇಕಿದೆ ಎಂದು ಪದಾಧಿಕಾರಿಗಳು ಆಗ್ರಹಿಸಿದರು.

    ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿಯ ತನಿಖಾ ತಂಡ ರಚಿಸಿದರೂ ಯಾವುದೇ ಪ್ರಯೋಜನವಾಗಲ್ಲ, ಇದರ ಹಿಂದೆ ಎಷ್ಟೇ ಪ್ರಭಾವಿ ರಾಜಕಾರಣಿಗಳು ಇರಲಿ, ಯಾವುದೇ ಶಕ್ತಿ ಇದ್ದರೂ ಸಕರ್ಾರ ಕಠಿಣ ಕ್ರಮ ಕೈಗೊಳ್ಳಬೇಕಿದೆ. ರಾಜಕಾರಣಿಗಳ ಕುಮ್ಮಕ್ಕಿಲ್ಲದೇ ಇಂಥ ಹಗರಣ ನಡೆಯಲು ಸಾಧ್ಯವಿಲ್ಲ. ನಿಷ್ಪಕ್ಷಪಾತವಾಗಿ ಈ ಎರಡು ಪ್ರಕರಣವನ್ನು ಜಿಲ್ಲಾಡಳಿತ ಸಿಐಡಿ ತನಿಖೆಗೆ ವಹಿಸಿ, ಅಕ್ರಮ ಹಗರಣ ಬಯಲಿಗೆ ಎಳೆದು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts