More

    ಅಕ್ಕಮಹಾದೇವಿ ಮನುಕುಲಕ್ಕೆ ಮಾದರಿ

    ಭಾಲ್ಕಿ: ಶಿವಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲದೆ ಮಾನವ ಕುಲಕ್ಕೆ ಮಾದರಿಯಾಗಿದ್ದಾರೆ ಎಂದು ಹಿರಿಯ ಚಿಂತಕ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಬಣ್ಣಿಸಿದರು.

    ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ವಚನ ಜಾತ್ರೆ, ಅಕ್ಕಮಹಾದೇವಿ ಜಯಂತಿ ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ೨೫ನೇ ಸ್ಮರಣೋತ್ಸವ ನಿಮಿತ್ತ ಶುಕ್ರವಾರ ರಾತ್ರಿ ಆಯೋಜಿಸಿದ್ದ ಅಕ್ಕನ ವಚನೇತರ ಸಾಹಿತ್ಯ ಗೋಷ್ಠಿ ಉದ್ಘಾಟಿಸಿದ ಅವರು, ವೈರಾಗ್ಯಕ್ಕೆ ಮತ್ತೊಂದು ಹೆಸರೇ ಅಕ್ಕಮಹಾದೇವಿ. ಎಲ್ಲರೂ ಸುಖ, ಸಂಪತ್ತು ಅರಸುತ್ತ ಹೋಗುತ್ತೇವೆ. ಆದರೆ ಅಕ್ಕ ಮಹಾದೇವಿ ಅದನ್ನು ಧಿಕ್ಕರಿಸಿ ಅಧ್ಯಾತ್ಮದ ಕಡೆ ಬಂದರು. ವಿಶ್ವಗುರು ಬಸವಣ್ಣ, ಅಲ್ಲಮಪ್ರಭು ಅವರಂತೆ ಅಕ್ಕಮಹಾದೇವಿ ಅವರ ವಿಚಾರಧಾರೆ, ಚಿಂತನೆಗಳು ಜಾಗತಿಕ ಚಿಂತಕರ ಗಮನ ಸೆಳೆದಿವೆ ಎಂದರು.

    ಬಸವಾದಿ ಶರಣರ ವಚನಗಳಲ್ಲಿ ಬಹುಪಾಲು ವಚನ ಅಕ್ಕಮಹಾದೇವಿ ಅವರದಾಗಿವೆ. ೪೩೪ ವಚನ ಸಿಕ್ಕಿದ್ದು, ೫೦ಕ್ಕೂ ಹೆಚ್ಚು ಇಂಗ್ಲಿಷ್, ೨೨೦ಕ್ಕೂ ಅಧಿಕ ವಚನಗಳು ತೆಲುಗು ಭಾಷೆಗೆ ಅನುವಾದಗೊಂಡಿವೆ. ೧೫೦೦ಕ್ಕೂ ಹೆಚ್ಚು ಪ್ರಬಂಧ ಪ್ರಕಟಗೊಂಡಿವೆ. ಸಹಸ್ರ ಉಪನ್ಯಾಸ, ಗೋಷ್ಠಿ, ನಾಟಕ, ನೃತ್ಯ ನಡೆದಿವೆ. ಆದರೆ ಇದುವರೆಗೂ ಅಕ್ಕಮಹಾದೇವಿ ಅವರ ಪರಿಪೂರ್ಣತೆ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
    ಅಕ್ಕನ ಬದುಕನ್ನು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಅಕ್ಕನ ವೈರಾಗ್ಯ ಮತ್ತು ಆತ್ಮಪ್ರಜ್ಞೆ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎನ್ನುವುದಕ್ಕೆ ಅವರ ವಚನಗಳ ಸಂದೇಶವೇ ಸಾಕ್ಷಿ. ಅಕ್ಕನವರು ವಚನಗಳಲ್ಲದೆ ವಚನೇತರ ಸಾಹಿತ್ಯಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

    ಹಿರೇಮಠ ಸಂಸ್ಥಾನ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಹಿರಿಯ ಸಾಹಿತಿ ಡಾ.ಕಲ್ಯಾಣರಾವ ಪಾಟೀಲ್ ಅನುಭಾವ ನೀಡಿದರು. ರೋಟರಿ ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಬಸವಗುರು ಪೂಜೆ ನೆರವೇರಿಸಿದರು.
    ರಾಷ್ಟ್ರೀಯ ಬಸವದಳ ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್ ಗಾದಗಿ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ ಪಾಟೀಲ್, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ, ಬಸವಕಲ್ಯಾಣ ಅನುಭವ ಮಂಟಪ ದಾಸೋಹ ಸಮಿತಿ ಅಧ್ಯಕ್ಷ ಸಿದ್ದಯ್ಯ ಕಾವಡಿಮಠ, ಉದ್ಯಮಿ ಕಂಟೆಪ್ಪ ಗಂದಿಗುಡೆ, ದಿಲೀಪ ಮಡಿವಾಳ, ನಂದಕುಮಾರ ಹಡಪದ, ಏಕನಾಥ ಪಂಚಾಳ, ಬಸವರಾಜ ಚಂದಾ, ಮನೋಹರ ಕಾವಳೆ ಇತರರಿದ್ದರು.

    ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಹಲ್ಮಂಡಗೆ, ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಡದಾಳೆ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಬಸವರಾಜ ಮರೆ, ಪ್ರಮುಖರಾದ ಶಿವರಾಜ ಮಲ್ಲೇಶಿ, ಧನರಾಜ ರಾಗಾ, ಆನಂದ ದೇವಪ್ಪ, ಪ್ರಕಾಶ ಘೂಳೆ, ಕಿರಣ ಖಂಡ್ರೆ, ವಿಜಯಕುಮಾರ ಶೆಡೋಳೆ, ಬಾಬುರಾವ ಸೋನಕಾಂಬಳೆ, ಅಶೋಕ ಅಂಬಿಗಾರ, ಸುಧಾಕರ ಸೂರ್ಯವಂಶಿ, ರಾಜಕುಮಾರ ಶಿಂಧೆ, ಪುಟ್ಟರಾಜ ನೇಳಗೆ ಇತರರಿದ್ದರು.

    ಡಾ.ಫ.ಗು. ಹಳಕಟ್ಟಿ ಸಂಪಾದಿಸಿದ ೫ನೇ ಮುದ್ರಣದ ವಿಶ್ವಗುರು ಬಸವಣ್ಣನವರ ವಚನಗಳ ಗ್ರಂಥ ಬಿಡುಗಡೆಗೊಳಿಸಲಾಯಿತು. ವಚನಶ್ರೀ ಚನ್ನಬಸಪ್ಪ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ಡಾ.ಬಸವಜ್ಯೋತಿ ಗುಂಡಪ್ಪ ಸಂಗಮಕರ್ ನಿರೂಪಣೆ ಮಾಡಿದರು. ಪಾರ್ವತಿ ಧೂಮ್ಮನಸೂರೆ ವಂದಿಸಿದರು. ಕಲಬುರಗಿ ಸಹಾಯಕ ಅಭಿಯಂತರ ಬಸವರಾಜ ಬಿಜ್ಜಲವಾಡೆ, ದಿಲೀಕುಮಾರ ಡೊಂಗರಗೆ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಆಶೀರ್ವದಿಸಲಾಯಿತು.

    ಯೋಗಾಂಗ ತ್ರಿವಿಧಿ ಗೋಷ್ಠಿ ಇಂದು: ಶನಿವಾರ ಸಂಜೆ ೬ಕ್ಕೆ ಅಕ್ಕನ ಯೋಗಾಂಗ ತ್ರಿವಿಧಿ ಗೋಷ್ಠಿ ನಡೆಯಲಿದೆ. ಕೌಠಾ(ಬಿ) ಬಸವಯೋಗಾಶ್ರಮದ ಶ್ರೀ ಡಾ.ಸಿದ್ದರಾಮ ಶರಣರು ಬೆಲ್ದಾಳ ಸಾನ್ನಿಧ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಅಧ್ಯಕ್ಷತೆಯಲ್ಲಿ ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಬಸವಗುರು ಪೂಜೆ ನೆರವೇರಿಸುವರು. ಹರನಾಳ ಗ್ರಾಮದ ರಾಜಕುಮಾರ ಪಾಟೀಲ್ ಆನಂದವಾಡೆ ಮತ್ತು ಭಾಲ್ಕಿಯ ನಿವೃತ್ತ ಉಪನ್ಯಾಸಕಿ ವಿಜಯಲಕ್ಷ್ಮೀ ಗಡ್ಡೆ ಅವರನ್ನು ಸನ್ಮಾನಿಸಲಾಗುತ್ತದೆ.

    ಗಡಿ ಭಾಗದಲ್ಲಿ ಲಿಂಗೈಕ್ಯ ಶ್ರೀ ಡಾ.ಚನ್ನಬಸವ ಪಟ್ಟದ್ದೇವರು ಶರಣಪ್ರಜ್ಞೆಯೊಂದಿಗೆ ಎಲ್ಲರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಅವರನ್ನು ಎಷ್ಟು ನೆನದರೂ ಕಡಿಮೆಯೇ. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಅವಿರತ ಪ್ರಯತ್ನದಿಂದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಸರ್ಕಾರ ಘೋಷಿಸಿರುವುದು ಹೆಮ್ಮೆ ತರಿಸಿದೆ.
    | ಗೊ.ರು.ಚನ್ನಬಸಪ್ಪ ಹಿರಿಯ ಚಿಂತಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts