More

    ಅಕಾಲಿಕ ಮಳೆ, ಈರುಳ್ಳಿ ಬೆಳವಣಿಗೆ ಕುಂಠಿತ

    ವಿಜಯವಾಣಿ ಸುದ್ದಿಜಾಲ ಕುಮಟಾ: ಕೆಲ ದಿನದ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ಈರುಳ್ಳಿ ಸಸಿಗಳ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಅಲ್ಲದೆ, ಶೇಂಗಾ ಹಾಗೂ ಕಲ್ಲಂಗಡಿ ಬೆಳೆದವರಿಗೂ ಸಂಕಟ ಎದುರಾಗಿದೆ.

    ತಾಲೂಕಿನಲ್ಲಿ ವನ್ನಳ್ಳಿ ಭಾಗದಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಸಿಹಿ ಈರುಳ್ಳಿ ಬೀಜ ಬಿತ್ತನೆ ಮಾಡಲಾಗುತ್ತದೆ. ಹಾಗೆಯೇ ಉತ್ತಮ ದರದ ನಿರೀಕ್ಷೆಯಲ್ಲಿ ಕಲ್ಲಂಗಡಿಯನ್ನು ನಿಗದಿತ ಕಾಲಮಾನಕ್ಕಿಂತ ಮುಂಚೆಯೇ ಬಿತ್ತನೆ ಮಾಡಲಾಗಿದೆ. ಇದರೊಂದಿಗೆ ತಾಲೂಕಿನಲ್ಲಿ ಒಟ್ಟು ಸುಮಾರು 322 ಹೆಕ್ಟೇರ್ ಶೇಂಗಾ ಬೆಳೆದರೆ 40 ಹೆಕ್ಟೇರ್​ನಷ್ಟು ಇನ್ನುಳಿದ ದ್ವಿದಳ ಧಾನ್ಯ ಬಿತ್ತನೆ ಮಾಡಲಾಗಿದೆ. ಈಗ ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

    ಈ ಕುರಿತು ಮಾಧ್ಯಮದೊಂದಿಗೆ ತಮ್ಮ ಕಷ್ಟವನ್ನು ಹಂಚಿಕೊಂಡ ದೇವಗಿರಿಯ ರೈತರಾದ ನಾರಾಯಣ ಗಣಪಯ್ಯ ಪಟಗಾರ ಹಾಗೂ ದತ್ತಾತ್ರೇಯ ಭಂಡಾರಿ ಅವರು, ಹಿಂದಿನ ವರ್ಷ ಹಾವುಸುಳಿ ರೋಗದಿಂದ ಇಳುವರಿ ಹಾಳಾಗಿದ್ದರಿಂದ ಈ ಬಾರಿ ಅಳ್ವೇಕೊಡಿ, ಹಂದಿಗೋಣ, ಕಡೇಕೊಡಿ ಭಾಗಗಳಲ್ಲಿ ಈರುಳ್ಳಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ದೇವಗಿರಿ ಭಾಗದಲ್ಲೇ ಹೆಚ್ಚು ಪ್ರಮಾಣದಲ್ಲಿ ಬೀಜ ಬಿತ್ತನೆ ಮಾಡಲಾಗಿದೆ. ಕೆಲ ದಿನದ ಹಿಂದೆ ಸುರಿದ ಮಳೆಯಿಂದ ಗದ್ದೆಯಲ್ಲಿ ನೀರು ನಿಂತು ಸಸಿ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿದೆ. ಸುಳಿಗಳು ಕೆಂಪಾಗುತ್ತಿವೆ. ಗದ್ದೆಯ ತೇವಾಂಶ ಬಳಸಿಕೊಂಡು ಪುನಃ ಬಿತ್ತನೆ ಮಾಡಲು ನಮ್ಮ ಬಳಿ ಬೀಜವಿಲ್ಲ. ಶೇಂಗಾ ಬೆಳೆಗೂ ಇದೇ ಸಮಸ್ಯೆ ಅಂಟಿದೆ. ಇತ್ತೀಚೆಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದೆ ಎಂದಿದ್ದಾರೆ.

    ಸಂಬಂಧಪಟ್ಟ ಇಲಾಖೆಯವರು ಬಂದು ರೈತನ ಸಮಸ್ಯೆ ಆಲಿಸಿ ಸೂಕ್ತ ಪರಿಹಾರೋಪಾಯ ನೀಡುವ ಜತೆಗೆ ಸಸಿ ಹಾನಿಗೆ ಪರಿಹಾರ ಕೊಡಿಸುವ ಬಗ್ಗೆಯೂ ಪರಿಶೀಲಿಸಬೇಕು ಎಂದು ರೈತರು ವಿನಂತಿಸಿದ್ದಾರೆ.

    ಕುಮಟಾ ತಾಲೂಕಿನಲ್ಲಿ ಕಲ್ಲಂಗಡಿ, ಶೇಂಗಾ ಅಥವಾ ಸಿಹಿ ಈರುಳ್ಳಿ ಬೆಳೆಗಳಿಗೆ ಮಳೆಯಿಂದ ಹಾನಿಯಾದ ಬಗ್ಗೆ ಒಬ್ಬ ರೈತನೂ ಈವರೆಗೆ ನಮ್ಮನ್ನು ಸಂರ್ಪಸಿ ಮಾಹಿತಿ ನೀಡಿಲ್ಲ. ಆದರೂ ಕಾಲಕಾಲಕ್ಕೆ ನಾವು ಸಾಧ್ಯವಾದಷ್ಟು ಪ್ರಮುಖ ರೈತರನ್ನು ಸಂರ್ಪಸಿ ಸಮಸ್ಯೆಗಳ ಬಗ್ಗೆ ರ್ಚಚಿಸುತ್ತೇವೆ. ಮೊನ್ನೆ ಸುರಿದ ಮಳೆಗೆ ಹಾನಿ ಸಂಭವ ಕಡಿಮೆ ಇದೆ. ಆದರೂ, ಸಮಸ್ಯೆಯಾಗಿದ್ದರೆ ಸೂಕ್ತ ಔಷಧೋಪಚಾರದಿಂದ ಹಾನಿ ತಗ್ಗಿಸಬಹುದಾಗಿದೆ. ಕಳೆದ ವರ್ಷ ಹಾನಿಯಾಗಿದ್ದ ಎಲ್ಲ ಈರುಳ್ಳಿ ಬೆಳೆಗಾರರ ಖಾತೆಗೆ ನೇರವಾಗಿ ಪರಿಹಾರದ ಹಣ ಸಂದಾಯವಾಗಿದೆ. | ಚೇತನ ನಾಯ್ಕ ತೋಟಗಾರಿಕೆ ಸಹಾಯಕ ನಿರ್ದೇಶಕ, ಕುಮಟಾ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts