More

    ಅಂಬೇಡ್ಕರ್ ಸಹಕಾರ ಸಂಘಕ್ಕೆ 38.26 ಲಕ್ಷ ರೂ.ಲಾಭ


    ಅರಕಲಗೂಡು: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘ 2021- 22ನೇ ಸಾಲಿನಲ್ಲಿ 38.26 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಡಿ.ರಾಮು ಹೇಳಿದರು.


    ಪಟ್ಟಣದ ದೇವರಾಜು ಅರಸು ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 2021- 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ 1.34 ಕೋಟಿ ರೂ.ವಹಿವಾಟು ನಡೆದಿದ್ದು, ಸಂಘವನ್ನು ಲಾಭದತ್ತ ಕೊಂಡೊಯ್ಯಲು ಶ್ರಮಿಸಲಾಗುತ್ತಿದೆ. ಹಾಗಾಗಿ ಸಂಘಕ್ಕೆ ಹೆಚ್ಚಿನ ಸದಸ್ಯರನ್ನು ಷೇರುದಾರರನ್ನಾಗಿಸಬೇಕು ಎಂದು ಮನವಿ ಮಾಡಿದರು.


    ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೃಥ್ವಿರಾಜ್ ಮಾತನಾಡಿ, ಸಂಘಕ್ಕೆ ನಿವೇಶನ ನೀಡುವ ಸಂಬಂಧ ಪಪಂ ಸಭೆಯಲ್ಲಿ ತೀರ್ಮಾನಿಸಲಾಗುವುದು. ಸಂಘದ ಏಳಿಗೆಗೆ ಕೈಲಾದ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.


    ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿ, ಪ್ರತಿಯೊಬ್ಬರೂ ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವ ಮೂಲಕ ಸಂಘವನ್ನು ಪ್ರಗತಿ ಪಥದತ್ತ ಮುನ್ನಡೆಸಬೇಕು ಎಂದು ತಿಳಿಸಿದರು.


    ಸಂಘದ ಮಾಜಿ ಅಧ್ಯಕ್ಷ ಎಚ್.ಸಿ.ಚನ್ನಯ್ಯ, ನಿರ್ದೇಶಕರಾದ ಡಿ.ವಿ.ಗಣೇಶ್, ವೀರಾಜ್, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ದಸಂಸ ಮುಖಂಡ ಎ.ವಿ.ಲಿಂಗರಾಜು ಮಾತನಾಡಿದರು. ಸಾಲ ಮರುಪಾವತಿ ಅವಧಿ ವಿಸ್ತರಿಸುವಂತೆ ಷೇರುದಾರರು ಸಭೆಯಲ್ಲಿ ಒತ್ತಾಯಿಸಿದರು.


    2021- 22ನೇ ಸಾಲಿನ ಜಮೆ-ಖರ್ಚು ವರದಿಯನ್ನು ಸಂಘದ ಕಾರ್ಯದರ್ಶಿ ಪಿ.ವೆಂಕಟಾಚಲಯ್ಯ ಓದಿದರು. ಸಂಘದ ಉಪಾಧ್ಯಕ್ಷ ಎಚ್.ಈ.ದೇವರಾಜು, ನಿರ್ದೇಶಕರಾದ ದೊರೆಸ್ವಾಮಿ, ಎ.ಸಿ.ಮಂಜುನಾಥ್, ಡಿ.ನಾಗೇಂದ್ರ ಕುಮಾರ್, ಚನ್ನಯ್ಯ, ಬಸವರಾಜು, ಎಂ.ಎಸ್. ರಮೇಶ್, ಕಮಲಮ್ಮ, ಪುಟ್ಟಮ್ಮ, ನಾಮ ನಿರ್ದೇಶಿತ ಸದಸ್ಯ ಕೊಣನೂರು ಚನ್ನಕೇಶವಯ್ಯ, ದಲಿತ ಮುಖಂಡ ಚಂದ್ರು, ವಕೀಲ ಶಂಕರಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts