More

    ಅಂತಿಮ ಹಂತದಲ್ಲಿ ಇಕೋ ಬೀಚ್ ಕಾಮಗಾರಿ

    ಕಾರವಾರ: ಜಾಗತಿಕ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆಯಲು ಹೊನ್ನಾವರದ ಕಾಸರಕೋಡು ಇಕೋ ಬೀಚ್​ನಲ್ಲಿ ಕಾಮಗಾರಿಗಳು ಅಂತಿಮ ಹಂತ ತಲುಪಿವೆ.

    ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಭಾನುವಾರ ಸ್ಥಳ ಪರಿಶೀಲನೆ ನಡೆಸಿ ಸಲಹೆ, ಸೂಚನೆಗಳನ್ನು ನೀಡಿದರು. ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪ ನಿರ್ದೇಶಕ ಪುರುಷೋತ್ತಮ. ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಮುಲ್ಲಾ ಇದ್ದರು.

    ಏನಿದು ಬ್ಲೂ ಫ್ಲ್ಯಾಗ್..?: ಶುದ್ಧ ನೀರು, ಹಾಗೂ ಪರಿಸರ ಸ್ನೇಹಿ ವಾತಾವರಣವಿರುವ ಕಡಲ ತೀರಗಳಿಗೆ ಡೆನ್ಮಾರ್ಕ್ ದೇಶದ ಸರ್ಕಾರೇತರ ಸಂಘಟನೆಯೊಂದು ಜಾಗತಿಕ ಮಟ್ಟದ ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್ ನೀಡುತ್ತದೆ. ಈ ಪ್ರಮಾಣಪತ್ರ ಪಡೆದ ಕಡಲ ತೀರ ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಾಗುತ್ತದೆ. ದೇಶದ 13 ಕಡಲ ತೀರಗಳಿಗೆ ಇದೇ ಮೊದಲ ಬಾರಿಗೆ ಈ ಪ್ರಮಾಣಪತ್ರ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, 2019ರಲ್ಲಿ ನೋಟಿಫಿಕೇಶನ್ ಜಾರಿ ಮಾಡಿದೆ. ಅದರಲ್ಲಿ ಹೊನ್ನಾವರ ಕಾಸರಕೋಡು ಕಡಲ ತೀರವೂ ಸೇರಿದೆ. ಅಲ್ಲಿ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಕರಾವಳಿ ನಿಯಂತ್ರಣ ವಲಯ ಕಾಯ್ದೆಯಲ್ಲಿ ರಿಯಾಯಿತಿ ನೀಡಿದೆ.

    ಒಟ್ಟಾರೆ 5.6 ಕಿಮೀ ಉದ್ದ ಹೊಂದಿರುವ ಕಡಲ ತೀರದಲ್ಲಿ 750 ಮೀಟರ್ ತೀರದಲ್ಲಿ ಅಭಿವೃದ್ಧಿ ಮಾಡಲು 8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳೆದ ಐದಾರು ತಿಂಗಳಿಂದ ವಿವಿಧ ಕಾಮಗಾರಿಗಳು ನಡೆದಿವೆ. ಕಾಮಗಾರಿ ಮುಕ್ತಾಯವಾದ ನಂತರ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಯಾರಿ ಕೈಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts