More

    ಅಂತರ ಮರೆತವರಿಗೆ ಜಿಲ್ಲಾಧಿಕಾರಿ ಪಾಠ

    ಧಾರವಾಡ: ಕರೊನಾ ಹರಡುವಿಕೆ ತಡೆಗಾಗಿ ಪರಸ್ಪರ ಅಂತರ ಕಾಪಾಡಿ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಾರ್ವಜನಿಕರಿಗೆ ಪಾಠ ಮಾಡಿದ ಘಟನೆ ನಗರದಲ್ಲಿ ಭಾನುವಾರ ನಡೆಯಿತು.

    ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪದ ಬಳಿ ಕಾರ್ಗಿಲ್ ವಿಜಯೋತ್ಸವದ 21ನೇ ವರ್ಷಾಚರಣೆ ಆಯೋಜಿಸಲಾಗಿತ್ತು. ಈ ವೇಳೆ ಭಾನುವಾರದ ಲಾಕ್​ಡೌನ್ ಮಧ್ಯೆಯೂ ಜನ ಗುಂಪಾಗಿ ಸೇರಿದ್ದರು. ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಕೆಗೆ ಆಗಮಿಸಿದ ಡಿಸಿ ನಿತೇಶ್ ಪಾಟೀಲ, ಜನರನ್ನು ನೋಡಿ ಗರಂ ಆದರು. ಎರಡೂ ಕೈಗಳನ್ನು ಭುಜದ ಮಟ್ಟಕ್ಕೆ ಎತ್ತಲು ಹೇಳಿ, ಅಷ್ಟು ಅಂತರದಲ್ಲಿ ನಿಂತು ಪರಸ್ಪರ ಅಂತರ ಕಾಪಾಡುವಂತೆ ಸೂಚಿಸಿದರು.

    ಗೌರವ ಸಲ್ಲಿಕೆ: ಜಿಲ್ಲಾಧಿಕಾರಿ ಕಚೇರಿ ಆವರಣದ ಕಾರ್ಗಿಲ್ ಸ್ತೂಪಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗೌರವ ಸಲ್ಲಿಸಿದರು. ಭಾನುವಾರದ ಲಾಕ್​ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿಜಯ ದಿವಸ್ ಆಚರಿಸಲಾಯಿತು. ನಂತರ ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ತಲಾ ಐವರಂತೆ ತೆರಳಿ ಕಾರ್ಗಿಲ್ ಸ್ತೂಪಕ್ಕೆ ಗೌರವ ಸಲ್ಲಿಸಲು ಅನುಮತಿಸಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts