More

    ಅಂತರ ಜಿಲ್ಲಾ ಕಳ್ಳನ ಬಂಧನ, ಚಿನ್ನಾಭರಣ ವಶ

    ಮುಂಡಗೋಡ: ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಮನೆ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನನ್ನು ಇಲ್ಲಿನ ಪೊಲೀಸರು ಮಂಗಳವಾರ ಕಸ್ಟಡಿಗೆ ಪಡೆದು ಆತನಿಂದ 5 ಲಕ್ಷ ರೂ. ಬೆಲೆಬಾಳುವ ಆಭರಣ ಮತ್ತು ನಗದು ಜಪ್ತಿ ಮಾಡಿದ್ದಾರೆ.

    ಹಾವೇರಿ ಜಿಲ್ಲೆಯ ತಡಸ ಕಮಲಾನಗರದ ಕೃಷ್ಣ ಲಮಾಣಿ ಬಂಧಿತ ಆರೋಪಿ. ಕಳೆದ ಎರಡು ವರ್ಷಗಳಿಂದ ಈತ ರಾತ್ರಿ ವೇಳೆ ಮನೆಯಲ್ಲಿ ಜನರು ಮಲಗಿದ್ದಾಗ ಹಿಂಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ. ಅ. 19ರಂದು ಮೈನಳ್ಳಿ ಗ್ರಾಮದಲ್ಲಿ ಮನೆ ಕಳ್ಳತನ ಮಾಡಿ ಹೋಗುವಾಗ ಮನೆಯವರು ನೋಡಿ ಆರೋಪಿಯನ್ನು ಹಿಡಿಯಲು ಯತ್ನಿಸಿದಾಗ ಬೈಕ್ ಬಿಟ್ಟು ಪರಾರಿಯಾಗಿದ್ದ. ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ವಿಚಾರಣೆ ವೇಳೆ ಈತ ಜಿಲ್ಲೆಯಲ್ಲಿ ಅಲ್ಲದೆ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ.

    ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ಅಂದಾಜು 3.50 ಲಕ್ಷ ರೂ. ಬೆಲೆ ಬಾಳುವ 70 ಗ್ರಾಂ. ಬಂಗಾರ, 15 ಸಾವಿರ ರೂ. ಬೆಲೆಬಾಳುವ 200 ಗ್ರಾಂ. ಬೆಳ್ಳಿ ಹಾಗೂ 31 ಸಾವಿರ ನಗದು ಜಪ್ತಿ ಮಾಡಿದ್ದಾರೆ.

    ಪೊಲೀಸ್ ಅಧೀಕ್ಷಕ ಶಿವಪ್ರಕಾಶ ದೇವರಾಜು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ ನಿರ್ದೇಶನದಲ್ಲಿ ಶಿರಸಿ ಉಪವಿಭಾಗ ಪೊಲೀಸ್ ಉಪ ಅಧೀಕ್ಷಕ ಗೋಪಾಲಕೃಷ್ಣ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಪ್ರಭುಗೌಡ ಡಿ.ಕೆ. ನೇತೃತ್ವದಲ್ಲಿ ಪಿಎಸ್​ಐ ಬಸವರಾಜ ಮಬನೂರ, ಮೋಹಿನಿ ಶೆಟ್ಟಿ, ಎಎಸ್​ಐ ಎಸ್.ವಿ. ಚವ್ಹಾಣ, ಅಶೋಕ ರಾಠೋಡ, ಖೀರಪ್ಪ ಘಟಕಾಂಬಳೆ, ಧರ್ಮರಾಜ ನಾಯ್ಕ, ರಾಘವೇಂದ್ರ ನಾಯ್ಕ, ಭಗವಾನ ಗಾಂವ್ಕರ, ವಿನೋದಕುಮಾರ ಜಿ.ಬಿ., ಅರುಣ ಬಾಗೇವಾಡಿ, ಶರತ ದೇವಳಿ, ತಿರುಪತಿ ಚೌಡಣ್ಣನವರ, ವಿವೇಕ ಪಟಗಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts