More

    ಅಂಜಿನಪ್ಪ ಅವರ ಕೃತಿಗಳ ಪ್ರಕಟಣೆಗೆ ಸಿದ್ಧ

    ಚಿತ್ರದುರ್ಗ: ಪ್ರೊ.ಡಿ.ಅಂಜಿನಪ್ಪ ಅವರ ಅಕಾಲಿಕ ನಿಧನದಿಂದ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ ಎಂದು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಎಂ.ಜಯಣ್ಣ ಚಾರಿಟಬಲ್ ಟ್ರಸ್ಟ್, ಅರುಂಧತಿ ಪ್ರಕಾಶನ, ಪ್ರೊ.ಡಿ. ಅಂಜಿನಪ್ಪ ಒಡನಾಡಿಗಳು ಹಾಗೂ ವಿದ್ಯಾರ್ಥಿ ಬಳಗ ನಗರದ ರೋಟರಿ ಬಾಲಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರೊ.ಡಿ. ಅಂಜಿನಪ್ಪ ಜೀವ ಚಿಗುರಿನ ಧ್ಯಾನ ನುಡಿನಮನ, ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
    ಅಂಜಿನಪ್ಪ ಅವರು ಆರು ವರ್ಷಗಳ ಅವಧಿಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿರುವುದು ಸುಲಭದ ಕೆಲಸವಲ್ಲ. ಅನಾರೋಗ್ಯದಿಂದ ಅವರು ಅಗಲಿರುವುದು ದುಃಖ ತಂದಿದೆ. ಅವರ ಅಪ್ರಕಟಿತ ಕೃತಿಗಳನ್ನು ಪ್ರಕಟಿಸಲಾಗುವುದು. ನನ್ನ ಪರಮಾಪ್ತ ಶಿಷ್ಯ ಅಂಜಿನಪ್ಪ ಅವರಲ್ಲಿ ಅದ್ಭುತವಾದ ವ್ಯಕ್ತಿತ್ವವಿತ್ತು ಎಂದು ಹೇಳಿದರು.
    ಸಾಹಿತಿ ಡಾ.ಸಿ. ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿ, ಅಂಜಿನಪ್ಪ ಪ್ರತಿಭಾವಂತರಾಗಿದ್ದರು. ಮಿತ ಭಾಷಿ, ನಿಷ್ಠುರ ಸ್ವಭಾವ ಅವರದ್ದಾಗಿತ್ತು. ಗಮನಾರ್ಹವಾದ ಹೊಸತನದ ವಿಮರ್ಶಕ. ಅವರ ಬರವಣಿಗೆಯಲ್ಲಿ ಶಕ್ತಿ ಇತ್ತು ಎಂದರು.
    ವಿಮರ್ಶಕ ನಿರಂತರ ಅಧ್ಯಯನಶೀಲನಾಗಿರಬೇಕು. ಬರಹಗಾರ ಹಾಗೂ ವಿಮರ್ಶಕರಿಗೆ ಸಾಮಾಜಿಕ ಹೊಣೆಗಾರಿಕೆ, ಸಮಸಮಾಜ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರಬೇಕು ಎಂದರು.
    ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಪ್ರೊ.ಎಚ್. ಲಿಂಗಪ್ಪ ಮಾತನಾಡಿ, ಅಂಜಿನಪ್ಪ ಅಲ್ಪ ಕಾಲದಲ್ಲೇ ಅಗಾಧವಾದ ಬರವಣಿಗೆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು ವಿಮರ್ಶೆ ಮತ್ತು ವೈಚಾರಿಕತೆ ಎಂದರು.
    ದ್ಯಾವರನಹಳ್ಳಿ ಆನಂದ್‌ಕುಮಾರ್ ಅವರ ‘ಮಾರಾಟಕ್ಕಿದೆ’ ಕವನ ಸಂಕಲನ ಬಿಡುಗಡೆ ಮಾಡಲಾಯಿ ತು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಸಾಹಿತಿ ಮೋದೂರು ತೇಜ, ಮಧುಗಿರಿ ಡಿಡಿಪಿಐ ಎಂ.ಆರ್. ಮಂಜುನಾಥ್, ಬಿ.ಎಂ. ಗುರುನಾಥ್ ಮಾತನಾಡಿದರು. ಜಿ.ಎಸ್.ಉಜ್ಜಿನಪ್ಪ, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಲೋಕೇಶ್ ಅಗಸನಕಟ್ಟೆ, ಪ್ರೊ. ಸುರೇಶ್‌ಗುಪ್ತ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts