More

    ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆ ನೀಡಿ

    ಚಿತ್ತಾಪುರ: ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಕೊಲೆಗೈದವ ಕಿರಾತಕನನ್ನು ಗಲ್ಲಿಗೇರಿಸಬೇಕು. ಯುವತಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರದೇಶ ತಾಲೂಕು ಯುವ ಕೋಲಿ ಸಮಾಜ ಗೌರವ ಅಧ್ಯಕ್ಷ ಶಿವುಕುಮಾರ ಸುಣ್ಣಗಾರ ಒತ್ತಾಯಿಸಿದರು.

    ತಹಸಿಲ್ ಕಚೇರಿಯಲ್ಲಿ ಕರ್ನಾಟಕ ಪ್ರದೇಶ ತಾಲೂಕು ಯುವ ಕೋಲಿ ಸಮಾಜದಿಂದ ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ಗ್ರೇಡ್-೨ ತಹಸೀಲ್ದಾರ್ ರಾಜಕುಮಾರ ಮರತೂರಕರ್ ಅವರಿಗೆ ಶನಿವಾರ ಸಲ್ಲಿಸಿ ಮಾತನಾಡಿ, ಅಂಜಲಿ ಕೊಲೆ ಖಂಡನೀಯ. ನೇಹಾ ಹತ್ಯೆ ಮರೆಮಾಸುವ ಮುನ್ನವೇ ಮತ್ತೊಬ್ಬಳು ಬಲಿಯಾಗಿದ್ದಾಳೆ. ಪ್ರೀತಿ ನಿರಾಕರಿಸಿರುವುದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ಹೇಳಿದ್ದು, ಇದು ಇಡೀ ರಾಜ್ಯದ ಜನರಲ್ಲಿ ಭೀತಿ ಉಂಟು ಮಾಡಿದೆ. ಮಹಿಳೆಯರು ಹಾಗೂ ಯುವತಿಯರು ನಿರ್ಭಿತಿಯಿಂದ ತಿರುಗಾಡಲು ಭಯಪಡುತ್ತಿದ್ದಾರೆ ಎಂದು ಹೇಳಿದರು.

    ಆರೋಪಿ ಮೊದಲೇ ಯುವತಿಗೆ ಕೊಲೆ ಬೆದರಿಕೆ ಹಾಕಿದ್ದ, ಪೊಲೀಸರಿಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ಪದೇ ಪದೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಮೌನ ವಹಿಸುತ್ತಿದೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎಚ್ಚೆತ್ತುಕೊಳ್ಳಬೇಕು, ರಾಜ್ಯದಲ್ಲಿ ಯುವತಿಯರ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

    ಯುವ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಮಹೇಶ ಸಾತನೂರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಲ್ಲೂರಕರ್ ಮಾತನಾಡಿದರು.
    ಪ್ರಮುಖರಾದ ಪ್ರಭು ಹಲಕರ್ಟಿ, ತಿಪ್ಪಣ್ಣ ಇವಣಿ, ನಾಗೂ ಸಣ್ಣೂರಕರ್, ಮಲ್ಲಿಕಾರ್ಜುನ ತಳವಾರ, ಸಾಬಣ್ಣ ದಂಡೋತಿ, ಶರಣು ಹಲಕಟ್ಟಿ, ಅಂಬು ಹೋಳಿಕಟ್ಟಿ, ಗೂಳಿ ಡಿಗ್ಗಿ, ದುರ್ಗಣ್ಣ ವಿಜಾಪುರಕರ್, ಬಾಬು ಜೀವಣಗಿ, ಆನಂದ ಯರಗಲ್, ಭೀಮು ಹೋಳಿಕಟ್ಟಿ, ನರಹರಿ ಕುಲಕರ್ಣಿ, ಚಂದ್ರು ಪಾಟೀಲ್ ಇಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts