More

    ಅಂಗಡಿ ತೆರೆದರೆ ಕಠಿಣ ಕ್ರಮ

    ಮುಳಗುಂದ: ದಿನಸಿ ಅಂಗಡಿ, ಮೆಡಿಕಲ್ ಶಾಪ್, ತರಕಾರಿ ಅಂಗಡಿ ಹೊರತುಪಡಿಸಿ ಬೇರೆ ಯಾವುದಾದರೂ ಅಂಗಡಿಗಳನ್ನು ತೆರೆದರೆ ನಿಮ್ಮ ವಿರುದ್ಧ ಪ್ರಕರಣ ದಾಖಲಿಸಿ ಉಗ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗದಗ ಗ್ರಾಮೀಣ ವಲಯದ ವೃತ್ತ ನಿರೀಕ್ಷಕ ರವಿ ಕಪ್ಪತ್ತನವರ ಅಂಗಡಿಗಳ ಮಾಲೀಕರಿಗೆ ಎಚ್ಚರಿಸಿದರು.

    ಪಟ್ಟಣಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸ್ಟೇಶನರಿ, ಬಟ್ಟೆ, ಮೊಬೈಲ್​ಫೋನ್, ಜೆರಾಕ್ಸ್ ಸೆಂಟರ್, ಹಾರ್ಡ್​ವೇರ್ ಇನ್ನಿತರ ಅಂಗಡಿಗಳು ತೆರೆದಿದ್ದವು. ಅದನ್ನು ಕಂಡು ಗರಂ ಆದ ರವಿ ಕಪ್ಪತ್ತನವರ, ತಕ್ಷಣ ಅಂಗಡಿಗಳಿಗೆ ಬೀಗ ಹಾಕಿ ಹೋಗಿ ಎಂದು ಸೂಚಿಸಿದರು.

    ಸದ್ಯ ಲಾಕ್​ಡೌನ್​ನ ಎರಡನೇ ಹಂತ ಪ್ರಾರಂಭವಾಗಿದೆ. ಇಂಥ ಸಮಯದಲ್ಲಿ ದಿನಸಿ ಅಂಗಡಿಗಳು ನಿಯಮಿತ ಅವಧಿಗೆ ಹಾಗೂ ಔಷಧ ಅಂಗಡಿಗಳು ದಿನಪೂರ್ತಿ ತೆರೆಯಲು ಮಾತ್ರ ಅವಕಾಶವಿದೆ. ಆದರೆ, ಅಂತಹ ಸಮಯದಲ್ಲಿ ಇತರ ಅಂಗಡಿಗಳನ್ನು ತೆರೆಯಬಾರದು ಎಂಬ ನಿಯಮವಿದ್ದರೂ ನೀವು ಬಾಗಿಲು ತೆರೆದಿರುವುದು ಅಪರಾಧ. ಲಾಕ್​ಡೌನ್ ಮುಗಿಯುವವರೆಗೆ ಯಾರಾದರೂ ಬೀಗ ತೆಗೆದರೆ ಅಂಥವರ ಮೇಲೆ ಕಾನೂನು ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು. ಅನವಶ್ಯಕವಾಗಿ ಬೈಕ್​ನಲ್ಲಿ ಸಂಚರಿಸಿದರೆ ಅಂಥವರ ಬೈಕ್ ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುವುದು. ಗುಂಪು-ಗುಂಪಾಗಿ ಕುಳಿತುಕೊಳ್ಳುವುದು ಕಂಡರೆ ಅವರ ಮೇಲೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಪಟ್ಟಣದ ಮಾರುಕಟ್ಟೆ ಸುತ್ತ ಬೈಕ್​ಗಳು ಸಂಚರಿಸದಂತೆ ಕಟ್ಟಿಗೆಯನ್ನಿಟ್ಟು ಸಂಪೂರ್ಣ ಬಂದ್ ಮಾಡಲಾಯಿತು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts