More

    ಅಂಕಲಗಿ ಅಡವಿ ಸಿದ್ಧೇಶ್ವರ ರಥೋತ್ಸವ

    ಕಲಘಟಗಿ: ಹರಹರ ಮಹಾದೇವ…ಅಂಕಲಗಿ ಅಡವಿ ಸಿದ್ಧೇಶ್ವರ ಮಹಾರಾಜ ಕೀ ಜೈ…ಎನ್ನುವ ಜಯಘೊಷಗಳ ಮಧ್ಯೆ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ ಸೋಮವಾರ ವಿಜೃಂಭಣೆಯಿಂದ ಜರುಗಿತು.

    ಗ್ರಾಮ ಸೇರಿದಂತೆ ಬೇರೆ ಬೇರೆ ಪ್ರದೇಶದಿಂದ ಆಗಮಿಸಿದ್ದ ಭಕ್ತರು ರಥೊತ್ಸವಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಮೆರೆದರು. ಮಠದಿಂದ ಆರಂಭವಾದ ರಥೋತ್ಸವ ಗ್ರಾಮದ ರಥ ಬೀದಿಯಲ್ಲಿ ಸಂಚರಿಸಿ ಮಠಕ್ಕೆ ಮರಳಿ ಸಂಪನ್ನಗೊಂಡಿತು. ತರಹೇವಾರಿ ಪುಷ್ಪಮಾಲೆಗಳಿಂದ ಕಂಗೊಳಿಸಿದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ಬೆಳಗ್ಗೆಯಿಂದಲೆ ಶ್ರೀ ಮಠದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ಶಾಸ್ತ್ರೋಕ್ತ ವಾಗಿ ನೆರವೇರಿದವು.

    ಜೀವನಕ್ಕೆ ಆಧ್ಯಾತ್ಮ ಅತ್ಯಗತ್ಯ: ರಥೋತ್ಸವಕ್ಕೂ ಮುನ್ನ ನಡೆದ ಧರ್ಮ ಸಭೆಯ ಸಾನ್ನಿಧ್ಯವನ್ನು ಮಂಟೂರು ಮತ್ತು ಬಮ್ಮಿಗಟ್ಟಿ ಗ್ರಾಮದ ಅಂಕಲಗಿ ಅಡವಿ ಸಿದ್ಧೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ನಂತರ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಮಾರ್ಗವನ್ನು ಬಿಟ್ಟು ನಡೆಯಬಾರದು. ಜೀವನಕ್ಕೆ ಅಧ್ಯಾತ್ಮ ಅಂತ್ಯತ ಅವಶ್ಯ. ಜೀವನವೆಂಬ ಮೊಬೈಲ್ ಪೋನ್​ಗೆ ಆಧ್ಯಾತ್ಮದ ಚಾರ್ಜರ್ ಬೇಕಿದೆ ಎಂದರು. ಸಿದ್ಧಾರೂಢ ಮಠದ ಶ್ರೀ ದಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸೇವೆ ಸಲ್ಲಿಸಿದ ಭಕ್ತರನ್ನು ಇದೇ ವೇಳೆ ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts