More

    ಜೊಮ್ಯಾಟೊದಿಂದ ಇನ್ನುಮುಂದೆ ಈ ಸೇವೆ ಇರುವುದಿಲ್ಲ; ಸೆ.17ರಿಂದಲೇ ಅನ್ವಯ..

    ನವದೆಹಲಿ: ಆಹಾರ ಸರಬರಾಜು ಕ್ಷೇತ್ರದಲ್ಲಿನ ಮುಂಚೂಣಿಯ ಸಂಸ್ಥೆಗಳಲ್ಲಿ ಒಂದಾಗಿರುವ ಜೊಮ್ಯಾಟೊ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ತನ್ನ ಸೇವೆಯಲ್ಲಿ ಒಂದು ವಿಭಾಗವನ್ನೇ ಸ್ಥಗಿತಗೊಳಿಸಲು ನಿರ್ಧರಿಸಿದೆ. ಇದು ಸೆ. 17ರಿಂದಲೇ ಜಾರಿಗೆ ಬರಲಿದೆ.

    ತನ್ನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದ ದಿನಸಿ ರವಾನೆಯನ್ನು ಸ್ಥಗಿತಗೊಳಿಸಲು ಜೊಮ್ಯಾಟೊ ನಿರ್ಧರಿಸಿದೆ. ಗ್ರಾಸರಿ ಡೆಲಿವರಿ ವ್ಯವಸ್ಥೆ ಸ್ಥಗಿತಗೊಳಿಸಿ ಫುಡ್ ಡೆಲಿವರಿಯನ್ನು ಎಂದಿನಂತೆಯೇ ಮುಂದುವರಿಸಲಿದೆ.

    ಇದನ್ನೂ ಓದಿ: ನದಿ ನೀರಿಗೆ ಬಿದ್ದ ಮಗನನ್ನು ರಕ್ಷಿಸಲು ಹೋದ ಅಮ್ಮನೂ ನೀರುಪಾಲು!

    ತನ್ನ ಈ ನಿರ್ಧಾರದ ಕುರಿತು ಸಂಸ್ಥೆಯು ದಿನಸಿ ಪಾಲುದಾರರಿಗೆಲ್ಲರಿಗೂ ಇ-ಮೇಲ್​ ಮೂಲಕ ಮಾಹಿತಿ ನೀಡಿದ್ದು, ದಿನಸಿ ರವಾನೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಮಾತ್ರವಲ್ಲ, ತಮ್ಮ ಈ ಪ್ರಾಯೋಗಿಕ ಸೇವೆಯನ್ನು ಸೆ. 17ರಿಂದಲೇ ನಿಲ್ಲಿಸುವುದಾಗಿ ತಿಳಿಸಿದೆ.

    ಇದನ್ನೂ ಓದಿ: 42 ಸಲ ಸಂಚಾರ ನಿಯಮ ಉಲ್ಲಂಘಿಸಿ ಕೊನೆಗೂ ಸಿಕ್ಕಿಬಿದ್ದ; ಜಂಟಿ ಪೊಲೀಸ್ ಆಯುಕ್ತರ ಅಭಿಮಾನಿ, ಪ್ರೆಸ್​ ಅಂತೆಲ್ಲ ಪೋಸ್ ಕೊಟ್ಟು ತಪ್ಪಿಸಿಕೊಳ್ತಿದ್ದ!

    ಮತ್ತೊಂದೆಡೆ ದಿನಸಿ ವಿತರಣೆ ಸಂಸ್ಥೆಯಾಗಿರುವ ಗ್ರೋಫರ್ಸ್​ನಲ್ಲಿ ಜೊಮ್ಯಾಟೊ ಹೂಡಿಕೆ ಮಾಡಿದ್ದು, ಜೊಮ್ಯಾಟೊದಲ್ಲೇ ದಿನಸಿ ವಿತರಣೆ ವ್ಯವಸ್ಥೆ ನೀಡುವುದಕ್ಕಿಂತ ಈ ಹೊಸ ಹೂಡಿಕೆ ಮೂಲಕ ಅದನ್ನು ಮುಂದುವರಿಸುವುದೇ ಹೆಚ್ಚು ಸೂಕ್ತ ಎಂಬ ನಿಟ್ಟಿನಲ್ಲಿ ಸಂಸ್ಥೆ ಈ ನಿರ್ಧಾರ ತಳೆದಿದೆ ಎನ್ನಲಾಗಿದೆ.

    ಮಹಿಳೆ ಸತ್ತು 4 ತಿಂಗಳಾಗಿತ್ತು; ಮೊನ್ನೆ ಎರಡನೇ ಡೋಸ್ ಲಸಿಕೆಯೂ ಆಯ್ತು, ಪ್ರಮಾಣಪತ್ರವೂ ಬಂತು!

    ಕಡಿಮೆ ಆಗಲಿದೆ ಎಣ್ಣೆ ರೇಟು!; ಅದಕ್ಕೆಂದೇ ಸರ್ಕಾರ ಕಡಿತಗೊಳಿಸಿದೆ ಸೀಮಾ ಸುಂಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts