More

    ರಂಜಾನ್ ಪ್ರಯುಕ್ತ ದಿನಸಿ ಕಿಟ್ ವಿತರಣೆ

    ಚಿಕ್ಕಮಗಳೂರು: ರಂಜಾನ್ ಹಬ್ಬದ ಪ್ರಯುಕ್ತ ಗೌರಿ ಕಾಲುವೆಯ ಬಡ ಕುಟುಂಬಗಳಿಗೆ ನೂರಾನಿ ನೌಜವಾನ್ ಸಮಿತಿಯಿಂದ ಶನಿವಾರ ರಾತ್ರಿ ಉಚಿತವಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು.

    ಈ ವೇಳೆ ಕೆಪಿಸಿಸಿ ಕಿಸಾಲ್ ಸೆಲ್ ಘಟಕದ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ, ರಂಜಾನ್ ಹಬ್ಬವು ದಾನ, ಧರ್ಮದ ಸಂಕೇತ. ಅದನ್ನು ಯಾವುದೇ ಜಾತಿ, ಧರ್ಮಕ್ಕೆ ಹೊಲಿಸದೆ ಮಾನವ ಧರ್ಮ ಒಂದೇ ಎಂಬ ಉದ್ದೇಶದಿಂದ ಎಲ್ಲ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
    ರಂಜಾನ್ ಹಬ್ಬದ ಸಂದರ್ಭದಲ್ಲಿ ಸಮುದಾಯದ ಯಾರೊಬ್ಬರು ಸಹ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಸಾಮಾಜಿಕ ಸೇವೆಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲವು ಮಂದಿ ಆರ್ಥಿಕವಾಗಿ ಸದೃಢರಾಗಿರದ ಕುಟುಂಬಗಳಿಗೆ ಹಬ್ಬ ಆಚರಣೆಗಾಗಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
    ಸಮಿತಿಯ ಅಧ್ಯಕ್ಷ ನೂರ್‌ಮೊಹಮ್ಮದ್ ಮಾತನಾಡಿ, ಬಡ ಕುಟುಂಬಗಳಿಗೆ ರಂಜಾನ್ ಅಂಗವಾಗಿ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಧವೆಯರು ಹಾಗೂ ನಿರ್ಗತಿಕ ಕುಟುಂಬಸ್ಥರು ಸೇರಿದಂತೆ ಸಮಾಜದ ಎಲ್ಲ ಭಾಂದವರು ಸಂಭ್ರಮ ಸಡಗರದೊಂದಿಗೆ ಅರ್ಥಪೂರ್ಣವಾಗಿ ರಂಜಾನ್ ಹಬ್ಬವನ್ನು ಆಚರಣೆ ಮಾಡಬೇಕು ಎಂದು ತಿಳಿಸಿದರು.
    ಪ್ರತಿವರ್ಷ ರಂಜಾನ್ ಹಬ್ಬದ ಪ್ರಯುಕ್ತ ಕಮಿಟಿಯಿಂದ ಉಚಿತವಾಗಿ ಹಬ್ಬದ ಕಿಟ್ ವಿತರಿಸಲಾಗುತ್ತಿದೆ. ಈ ಬಾರಿಯು ವಾರ್ಡಿನ ಸುಮಾರು 450ಕ್ಕೂ ಹೆಚ್ಚು ಕುಟುಂಬಗಳಿಗೆ ಕಿಟ್ ವಿತರಿಸಿ ಕಾಳಜಿ ತೋರಲಾಗಿದೆ. ಅದಲ್ಲದೇ ಕಮಿಟಿಯಿಂದ ಆರೋಗ್ಯ ತಪಾಸಣೆ ಸೇರಿದಂತೆ ಸಾಮಾಜಿಕ ಕಾರ್ಯಕ್ರಮ ನಡೆಸಲಾಗಿದೆ ಎಂದರು.
    ಈ ಸಂದರ್ಭದಲ್ಲಿ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮುಂತೀಕ್, ಉಪಾಧ್ಯಕ್ಷ ನೂರ್, ಕಾರ್ಯದರ್ಶಿ ಅಜ್ಗರ್, ಖಜಾಂಚಿಗಳಾದ ಆಲಿ, ಶಕೀಲ್ ಅಹ್ಮದ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts