ನವದೆಹಲಿ: ಆಲ್ ಸ್ಟಾಕ್ ಡೀಲ್ ಮೂಲಕ ಉಬರ್ ಈಟ್ಸ್ನ ವ್ಯವಹಾರವನ್ನು ಭಾರತದಲ್ಲಿ ಸಂಪೂರ್ಣವಾಗಿ ಸ್ವಾಧೀನ ಪಡಿಸಿಕೊಂಡಿರುವುದಾಗಿ ಜೊಮ್ಯಾಟೋ ಮಂಗಳವಾರ ಘೋಷಿಸಿದೆ. ಈ ಮೂಲಕ ಉಬರ್ ಈಟ್ಸ್ ಪಾಲಾಗಿದ್ದ ಭಾರತದ ಫುಡ್ ಡೆಲಿವರಿ ಮತ್ತು ರೆಸ್ಟೋರಂಟ್ ಡಿಸ್ಕವರಿ ಪ್ಲಾಟ್ಫಾರಂನ ಶೇಕಡ 9.9 ಮಾರುಕಟ್ಟೆ ವಹಿವಾಟು ಇನ್ನು ಜೊಮ್ಯಾಟೋದ್ದಾಗಲಿದೆ.
ಈ ವಹಿವಾಟಿನೊಂದಿಗೆ ಉಬರ್ ಈಟ್ಸ್ ಭಾರತೀಯ ಮಾರುಕಟ್ಟೆಯಿಂದ ಹಿಂದೆ ಸರಿದಿದೆ. 35 ದಶಲಕ್ಷ ಡಾಲರ್ (ಅಂದಾಜು 2,492 ಕೋಟಿ ರೂಪಾಯಿ) ನ ವಹಿವಾಟು ಇದಾಗಿದೆ. ಉಬರ್ ಈಟ್ಸ್ನ ಆ್ಯಪ್ ಇನ್ನು ಜೊಮ್ಯಾಟೋ ಆ್ಯಪ್ ಜತೆಗೆ ವಿಲೀನವಾಗಲಿದ್ದು, ಗ್ರಾಹಕರು ಜೊಮ್ಯಾಟೋ ಆ್ಯಪ್ನಲ್ಲಿ ಸ್ಥಾನಪಡೆಯಲಿದ್ದಾರೆ. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ಈ ಬಗ್ಗೆ ದಾಖಲೆ ಸಲ್ಲಿಸಿರುವ ಜೊಮ್ಯಾಟೋದ ಪಾಲುದಾರ ಕಂಪನಿ ಇನ್ಫೋ ಎಡ್ಜ್(ಇಂಡಿಯಾ), ಜೊಮ್ಯಾಟೋದಲ್ಲಿ ತನ್ನ ಪಾಲುಯ ಶೇಕಡ 22.71ಕ್ಕೆ ಇಳಿಕೆಯಾಗಿದೆ ಎಂದು ಹೇಳಿಕೊಂಡಿದೆ.
ಈ ನಡುವೆ, ಜೊಮ್ಯಾಟೋ ಕಂಪನಿಯ ಅಲಿಬಾಬಾದ ಅಧೀನ ಸಂಸ್ಥೆ ಆ್ಯಂಟ್ ಫಿನಾನ್ಶಿಯಲ್ ನಿಂದ 150 ದಶಲಕ್ಷ ಡಾಲರ್ ಹೂಡಿಕೆ ಮಾಡಿಸಿಕೊಂಡ ಕೆಲವೇ ದಿನದಲ್ಲಿ ಉಬರ್ ಈಟ್ಸ್ ಜತೆಗಿನ ಡೀಲ್ ಕುದುರಿದೆ.ಉಬರ್ ಈಟ್ಸ್ ವ್ಯವಹಾರ ಭಾರತದಲ್ಲಿ 2017ರಲ್ಲಿ ಆರಂಭವಾಗಿದ್ದು, 41 ನಗರಗಳಲ್ಲಿ 26,000 ರೆಸ್ಟೋರೆಂಟ್ಗಳು ಪಟ್ಟಿ ಸೇರಿಕೊಂಡಿದ್ದವು. (ಏಜೆನ್ಸೀಸ್)