More

    ಪಿಯು ಪರೀಕ್ಷೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾಸ್!​

    ಚಿಕ್ಕಬಳ್ಳಾಪುರ: ಓದಿಗೆ ವಯಸ್ಸಿನ ಅಂತರವಿಲ್ಲ, ಮಕ್ಕಳ ಜತೆಯಲ್ಲೇ ತಂದೆ-ತಾಯಿ, ಮೊಮ್ಮಕ್ಕಳೊಂದಿಗೆ ಅಜ್ಜಿ ಪರೀಕ್ಷೆ ಬರೆದ ಅಪರೂಪದ ಕ್ಷಣಕ್ಕೆ ಎಸ್​ಎಸ್​ಎಲ್​ಸಿ, ಪಿಯುಸಿ, ಪದವಿ ಪರೀಕ್ಷೆಗಳು ಹಲವು ಬಾರಿ ಸಾಕ್ಷಿಯಾಗಿವೆ. ಇದೀಗ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರು ದ್ವಿತೀಯ ಪರೀಕ್ಷೆ ಬರೆದು ಮೊದಲ ಯತ್ನದಲ್ಲೇ ಪಾಸ್​ ಆಗಿದ್ದಾರೆ.

    ನಿರಂತರ ರಾಜಕೀಯ ಚಟುವಟಿಕೆ, ಜನಸೇವೆಯ ಒತ್ತಡದ ನಡುವೆಯೂ ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಕ್ಷೇತ್ರದ ಜಿಪಂನ ಜೆಡಿಎಸ್ ಸದಸ್ಯೆ ಬಿ.ಸಿ. ತನುಜಾ ರಘು ಅವರು 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಖಾಸಗಿಯಾಗಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡು ಮೊದಲ ಪ್ರಯತ್ನದಲ್ಲಿಯೇ ಪಾಸ್ ಆಗಿರುವುದು ವಿಶೇಷ. ಇದನ್ನೂ ಓದಿರಿ ದ್ವಿತೀಯ ಪಿಯು ರಿಸಲ್ಟ್; ಹೆಣ್ಮಕ್ಳೇ ಸ್ಟ್ರಾಂಗ್​, ಉಡುಪಿ-ದಕ್ಷಿಣ ಕನ್ನಡ ಫಸ್ಟ್

    ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯ ಕೃಷಿಕ ಕುಟುಂಬಕ್ಕೆ ಸೇರಿದ ತನುಜಾ ರಘು ಎಸ್​ಎಸ್​ಎಲ್​ಸಿ ಪರೀಕ್ಷೆ ಉತ್ತೀರ್ಣಗೊಂಡ ಬಳಿಕ, ಪಕ್ಕದ ತಾದೂರಿನ ರಘು ಅವರನ್ನು ವಿವಾಹವಾಗಿದ್ದರು. ಬಳಿಕ ಮಳಮಾಚನಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯೆಯಾಗಿದ್ದರು. ರಾಜಕೀಯ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದರಿಂದ ಓದಿನತ್ತ ಗಮನಹರಿಸಿರಲಿಲ್ಲ. ಪ್ರಸ್ತುತ ಜಿಪಂ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ರಾಜಕೀಯದಲ್ಲಿದ್ದು ಹೆಚ್ಚಿನ ವಿದ್ಯಾರ್ಹತೆ ಹೊಂದಿರದಿದ್ದರೆ ಹೇಗೆ ಎಂಬ ಭಾವನೆ ಮೂಡಿತ್ತು.

    ತನುಜಾರಲ್ಲಿದ್ದ ಓದುವ ಉತ್ಸಾಹವನ್ನು ಅರಿತ ಪತಿ ರಘು ಮತ್ತು ಕುಟುಂಬಸ್ಥರು ಬೆಂಬಲಿಸಿದರು. ಉತ್ಸಾಹದಿಂದ ಪರೀಕ್ಷೆ ಬರೆದ ತನುಜಾ 338 ಅಂಕ ಪಡೆಯುವ ಮೂಲಕ ಉತ್ತೀರ್ಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪದವಿ ಪರೀಕ್ಷೆ ಎದುರಿಸಲು ಯೋಚಿಸಿದ್ದಾರೆ.

    ಕಲಾ ವಿಭಾಗದಲ್ಲಿ ರೈತನ ಮಗ ಕರಿಗೌಡ ದಾಸನಗೌಡ್ರ ರಾಜ್ಯಕ್ಕೆ ಟಾಪರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts