More

  ಶೂನ್ಯ ದರದ ಬಡ್ಡಿ ಸಾಲ ಪ್ರಮಾಣ ಹೆಚ್ಚಿಸಿ

  ಕಂಪ್ಲಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪ್ರತಿ ರೈತರಿಗೆ ಶೂನ್ಯಬಡ್ಡಿ ದರದಲ್ಲಿ ಕೇವಲ 25,000 ರೂ. ಸಾಲ ನೀಡುತ್ತಿದ್ದು, ಇದನ್ನು ಪ್ರತಿ ಎಕರೆಗೆ 25,000 ರೂ. ಬಡ್ಡಿರಹಿತ ಸಾಲ ನೀಡುವಂತೆ ರೈತರನೇಕರು ಆಗ್ರಹಿಸಿದ್ದಾರೆ.

  ಇದನ್ನೂ ಓದಿ: ಕೃಷಿಕರಿಗೆ ಬೊಮ್ಮಾಯಿ ಬಜೆಟ್ ಖುಷಿ: ಬಡ್ಡಿರಹಿತ ಅಲ್ಪಾವಧಿ ಕೃಷಿ ಸಾಲ ಮಿತಿ 5 ಲಕ್ಷ ರೂ.ಗೆ ಹೆಚ್ಚಳ; ಭೂ ಸಿರಿ, ಜೀವನ್​ಜ್ಯೋತಿ ವಿಮಾ ಘೋಷಣೆ

  ಬೆಳೆ ಆಧಾರದಡಿಯಲ್ಲಿ ಈ ತನಕ ಭತ್ತಕ್ಕೆ ಎಕರೆಗೆ 25,000, ಕಬ್ಬು, ಬಾಳೆ ಎಕರೆಗೆ 30,000 ರೂ. ಸಾಲವನ್ನು ಶೂನ್ಯಬಡ್ಡಿ ದರದಲ್ಲಿ ನೀಡುತ್ತಿದ್ದರು. ಪ್ರಸಕ್ತ ಸಾಲಿನಿಂದ ಮಾತ್ರ ಎಷ್ಟೇ ಎಕರೆ ಭೂಮಿ ಇದ್ದರೂ ಯಾವುದೇ ಬೆಳೆಗೂ 25,000 ರೂ. ಸಾಲ ನೀಡುತ್ತಿದ್ದಾರೆ.

  ಕೃಷಿ ನಿರ್ವಹಣೆ ವೆಚ್ಚ ಅಧಿಕವಾಗಿದ್ದು, ರೈತರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರತಿ ಎಕರೆಗೆ 25,000 ರೂ. ಬಡಿ ್ಡರಹಿತ ಸಾಲ ನೀಡಬೇಕು ಎಂದು ರೈತರಾದ ಪುಟ್ಟಿ ಬಸವನಗೌಡ, ಬಸವರಾಜ, ಕೊಟ್ಟೂರು ರಮೇಶ್, ಬುರೆಡ್ಡಿ ವಿರುಪಾಕ್ಷಿ, ಮೂಲೆಮನೆ ಮಂಜುನಾಥ ಒತ್ತಾಯಿಸಿದ್ದಾರೆ.

  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಚ್.ಈರಣ್ಣ ಪ್ರತಿಕ್ರಿಯಿಸಿ, ಕೇಂದ್ರ ಕಚೇರಿ ನೀತಿಯಂತೆ ವರ್ಷದ ಅವಧಿ ವ್ಯಕ್ತಿಗೆ 25,000 ರೂ. ಶೂನ್ಯ ಬಡ್ಡಿದರದ ಸಾಲ ನೀಡುತ್ತಿದ್ದು, ವರ್ಷದೊಳಗೆ ಪಾವತಿಸಬೇಕಿದ್ದು, ತಪ್ಪಿದಲ್ಲಿ ಶೇ.9ರ ಬಡ್ಡಿ ವಿಧಿಸಲಾಗುವುದು ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts