More

    ತುರ್ತು ಸೇವೆಗಳಿಗಾಗಿ 112ಕ್ಕೆ ಕರೆ ಮಾಡಿ

    ಝಳಕಿ: ಇನ್ನು ಮುಂದೆ ಪೊಲೀಸ್, ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ಈ ಎಲ್ಲ ತುರ್ತು ಸೇವೆಗಳ ಸಹಾಯಕ್ಕಾಗಿ 112ಕ್ಕೆ ಕರೆಮಾಡಿ ಎಂದು ಇಂಡಿ ಮತ್ತು ಸಿಂದಗಿ ವಿಭಾಗದ ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
    ಸಮೀಪದ ಜೇವೂರ ಗ್ರಾಮದ ಹಠಯೋಗಿ ರೇವಣಸಿದ್ಧೇಶ್ವರ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಇದು 24×7 ಸೌಲಭ್ಯ ಹೊಂದಿದ್ದು, 15 ಸೆಕೆಂಡುಗಳಲ್ಲಿ ಕರೆ ಸ್ವೀಕಾರ ಮಾಡಿ ತ್ವರಿತವಾಗಿ ಸ್ಪಂದಿಸಲಾಗುವುದು. ಅದಲ್ಲದೆ ತಮ್ಮ ಸ್ಮಾರ್ಟ್ ಫೋನಿನಲ್ಲಿ ಪಾವರ್ ಬಟನ್‌ನ್ನು ಮೂರು ಬಾರಿ ವೇಗವಾಗಿ ಒತ್ತಿದರೆ ಆ ವ್ಯಕ್ತಿ ಅಪಾಯದಲ್ಲಿ ಇದ್ದಾರೆ ಎಂದು ನಮಗೆ ಗೊತ್ತಾಗುತ್ತದೆ. ಡಿಜಿಟಲ್ ನಕ್ಷೆ ಮೂಲಕ ನಿಮ್ಮ ಕರೆಯ ಸ್ಥಳ ಗುರುತಿಸಿ ಹತ್ತಿರದ ತುರ್ತು ಸ್ಪಂದನದ ವಾಹನ ಮೂಲಕ ಘಟನಾಸ್ಥಳಕ್ಕೆ ಆಗಮಿಸಿ ತಮಗೆ ಸೇವೆ ಸಲ್ಲಿಸಲು ನಾವು ಸದಾ ಸಿದ್ಧರೆಂದು ಹೇಳಿದರು.
    ಝಳಕಿ ಪೊಲೀಸ್ ಠಾಣಾಧಿಕಾರಿ ಪರಶುರಾಮ ಮನಗೂಳಿ, ಸಿಬ್ಬಂ.ದಿ ಹಾಗೂಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts