More

    ಮನೆ ಬಾಗಿಲಿಗೆ ಹೋದ ಟಿವಿ ರಿಪೋರ್ಟರ್​ಗೆ ಗೆಟ್​ ಔಟ್​ ಎನ್ನುತ್ತ ಹಲ್ಲೆ ಮಾಡಿದ ಡ್ರಗ್​ ಪೆಡ್ಲರ್ ಅಪ್ಪ

    ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಸಿಬಿ ಡ್ರಗ್​ ಪೆಡ್ಲರ್​ ಜೈದ್​ ವಿಲಾತ್ರನನ್ನು ಎನ್​ಸಿಬಿ ಮಂಗಳವಾರ ಬಂಧಿಸಿದೆ.

    ರಿಯಾ ಚಕ್ರವರ್ತಿ ಸಹೋದರ ಶೋವಿಕ್​​ನೊಂದಿಗೆ ಸಂಪರ್ಕದಲ್ಲಿದ್ದ ಮಾದಕ ವಸ್ತುಗಳ ಮಾರಾಟಗಾರರಾದ ಬಸಿತ್​ ಪರಿಹಾರ್​ ಮತ್ತು ಸೂರ್ಯದೀಪ್​ ಮಲಹೋತ್ರಾ ಜತೆ ಜೈದ್​ ವಿಲಾತ್ರ್​ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈತನನ್ನೂ ಬಂಧಿಸಲಾಗಿದೆ.

    ಡ್ರಗ್​​ ಜಾಲದಲ್ಲಿ ಜೈದ್​ ಕೈವಾಡವಿದೆ ಎಂಬುದು ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಹಿಂದಿ ನ್ಯೂಸ್​ ಚಾನಲ್​ವೊಂದರ ರಿಪೋರ್ಟರ್​ ಜೈದ್​ ಮನೆಗೆ ಹೋಗಿದ್ದಾನೆ. ಆತನ ಬಂಧನದ ಬಗ್ಗೆ ತಂದೆಯ ಅಭಿಪ್ರಾಯ ಕೇಳುವುದಕ್ಕೋಸ್ಕರ ಬಾಗಿಲು ಬಡಿದು, ಕ್ಯಾಮರಾ ಎದುರು ಬಂದು ಮಾತನಾಡುವಂತೆ ಮನವಿ ಮಾಡಿದ್ದಾನೆ. ಇದನ್ನೂ ಓದಿ: ದೇಶದಲ್ಲಿ ಒಂದೇ ದಿನದಲ್ಲಿ 83,883 ಹೊಸ ಕರೊನಾ ಪ್ರಕರಣ; ಚೇತರಿಕೆ ಪ್ರಮಾಣದಲ್ಲೂ ಏರಿಕೆ

    ಆದರೆ ಜೈದ್​ ತಂದೆ ಆ ಪತ್ರಕರ್ತನನ್ನು ಕೆಟ್ಟದಾಗಿ ನಿಂದಿಸಿದ್ದಾನೆ. ಕ್ಯಾಮರಾ ಎದುರಿಗೇ ಆತನಿಗೆ ಬೆದರಿಕೆಯನ್ನೂ ಹಾಕಿದ್ದು ಲೈವ್​ ಪ್ರಸಾರವಾಗಿದೆ.  ಅಂಗಿಯನ್ನೂ ಹಾಕಿಕೊಳ್ಳದೆ ಹೊರಬಂದ ಜೈದ್​ ತಂದೆ ಮೊದಲು ರಿಪೋರ್ಟರ್​ಗೆ ಅಶ್ಲೀಲ ಶಬ್ದಗಳಿಂದ ಬೈದಿದ್ದಾನೆ. ಗೆಟ್​ ಔಟ್​ ಎಂದು ತಳ್ಳಿದ್ದಾನೆ. ಆತನ ಬಳಿಯಿದ್ದ ಲೋಗೋ ಕಿತ್ತುಕೊಂಡಿದ್ದಲ್ಲದೆ, ಹಲ್ಲೆಯನ್ನೂ ಮಾಡಿದ್ದಾನೆ. ಇದೆಲ್ಲವನ್ನೂ ಆ ಹಿಂದಿ ನ್ಯೂಸ್​ ಚಾನಲ್​ ಲೈವ್​ ಪ್ರಸಾರ ಮಾಡಿದೆ. (ಏಜೆನ್ಸೀಸ್​)

    ಫಾಸ್ಟ್​ಫುಡ್​ ಮಳಿಗೆ ಹೊರಗೆ ಲ್ಯಾಪ್​ಟಾಪ್​ ಹಿಡಿದು ಕುಳಿತಿದ್ದ ಬಾಲೆಯರಿಗೆ ಹರಿದು ಬಂತು ಒಂದು ಕೋಟಿ ರೂ. ನೆರವು..! ಏಕೆ ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts