More

    ಸ್ಟುವರ್ಟ್ ಬ್ರಾಡ್‌ಗೆ ಲೆಜೆಂಡ್ ಎಂದು ಯುವಿ ಹೇಳಿದ್ಯಾಕೆ..?

    ನವದೆಹಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 7ನೇ ಬೌಲರ್ ಎನಿಸಿಕೊಂಡ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರನ್ನು ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಲೆಜೆಂಡ್ ಎಂದು ಕರೆದಿದ್ದಾರೆ. 13 ವರ್ಷಗಳ ಹಿಂದೆ ನಡೆದ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಎಸೆದ ಓವರ್‌ನ ಆರು ಎಸೆತಗಳಲ್ಲೂ ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದರು. ‘ಸ್ಟುವರ್ಟ್ ಬ್ರಾಡ್ ಸಾಧನೆಯನ್ನು ಕೊಂಡಾಡಿರುವ ಯುವಿ, ಕಠಿಣ ಶ್ರಮವೇ ನಿಮ್ಮ ಸಾಧನೆಗೆ ಕಾರಣ. ನನ್ನ ಮತ್ತು ಬ್ರಾಡ್ ನೆನೆಸಿಕೊಂಡರೆ ಎಲ್ಲರೂ 6 ಸಿಕ್ಸರ್‌ಗಳನ್ನೇ ಮೆಲುಕು ಹಾಕುತ್ತಾರೆ. ನನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ, ಪ್ರತಿಯೊಬ್ಬರು ಬ್ರಾಡ್ ಸಾಧನೆಯನ್ನು ಶ್ಲಾಸಿ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಬ್ರಾಡಿ ಯುಆರ್ ಎ ಲೆಜೆಂಡ್, ಹ್ಯಾಟ್ಸ್ ಆ್ ಎಂದು ಯುವರಾಜ್ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಅಯ್ಯೋ… ಈ ಕ್ರಿಕೆಟಿಗನ ಜತೆ ನನಗೆ ಸೆಲ್ಫಿ ಬೇಕಿತ್ತಾ ಎಂದಿದ್ದೇಕೆ ಅಭಿಮಾನಿ?

    ಸ್ಟುವರ್ಟ್ ಬ್ರಾಡ್‌ಗೆ ಲೆಜೆಂಡ್ ಎಂದು ಯುವಿ ಹೇಳಿದ್ಯಾಕೆ..?2007ರಲ್ಲಿ ದಕ್ಷಿಣ ಆಫ್ರಿಕಾ ಡರ್ಬಾನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಎಸೆದ 19ನೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ವರ್ಷದಲ್ಲಿ ಆಡುತ್ತಿದ್ದ ಬ್ರಾಡ್, ಈ ಪಂದ್ಯದ ಬಳಿಕ ಮಾನಸಿಕವಾಗಿ ಸಾಕಷ್ಟು ನೊಂದಿದ್ದರು. ಬಳಿಕ ಬ್ರಾಡ್ ಅವರನ್ನು ಯುವರಾಜ್ ಸಿಂಗ್‌ರಿಂದ ಸಿಕ್ಸರ್ ಹೊಡೆಸಿಕೊಂಡ ಬೌಲರ್ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದ್ದರು. ಆದರೆ, ಮಾನಸಿಕವಾಗಿ ಕುಗ್ಗದ ಬ್ರಾಡ್, ಇಂಗ್ಲೆಂಡ್‌ನ ಪ್ರಮುಖ ವೇಗಿಯಾಗಿ ಬೆಳೆದರು. ಇಂಗ್ಲೆಂಡ್ ಪರ 140 ಟೆಸ್ಟ್, 121 ಏಕದಿನ ಹಾಗೂ 56 ಏಕದಿ ಪಂದ್ಯಗಳಿಂದ 744 ವಿಕೆಟ್ ಕಬಳಿಸಿದ್ದಾರೆ.

    ಇದನ್ನೂ ಓದಿ: ಆಗಸ್ಟ್ 2 ರಂದು ಐಪಿಎಲ್ ಆಡಳಿತ ಮಂಡಳಿ ಸಭೆ

    ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ, ನಿವೃತ್ತಿ ಜೀವನ ಎಂಜಾಯ್ ಮಾಡಿ ಎಂದು ಬ್ರಾಡ್ ಟ್ವೀಟ್ ಮಾಡಿದ್ದರು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ವಿಶ್ವದ 7ನೇ ಹಾಗೂ ಇಂಗ್ಲೆಂಡ್‌ನ 2ನೇ ಬೌಲರ್ ಎನಿಸಿಕೊಂಡಿದ್ದಾರೆ.

    ಕ್ರಿಕೆಟ್‌ಗೆ ವಾಪಸಾಗಲು ಸಚಿನ್ ಮಾತುಗಳೇ ಪ್ರೇರಣೆ ಎಂದ ಯುವರಾಜ್ ಸಿಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts