More

    ನಿವೃತ್ತಿಯಾದ ಎರಡು ವರ್ಷಗಳ ಬಳಿಕ ಮಾಜಿ ಆಲ್ರೌಂಡರ್ ಕಂಬ್ಯಾಕ್?

    ನವದೆಹಲಿ: ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಮುಂದಿನ ಫೆಬ್ರವರಿ ವೇಳೆಗೆ ನಿವೃತ್ತಿಯಿಂದ ವಾಪಸಾಗುವುದಾಗಿ ಘೋಷಿಸಿದ್ದಾರೆ. ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿಯ ಘೋಷಿಸಿ ಎರಡೂ ವರ್ಷಗಳೇ ಕಳೆದಿದ್ದರೂ ಸಾರ್ವಜನಿಕರ ಒತ್ತಾಯದ ಮೇರೆಗೆ ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಈ ಕುರಿತು ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಯುವರಾಜ್ ಸಿಂಗ್, ವೃತ್ತಿ ಕ್ರಿಕೆಟ್‌ಗೆ ವಾಪಸಾಗುವ ಸೂಚನೆ ನೀಡಿದ್ದಾರೆ. ‘ನಮ್ಮ ಹಣೆಬರಹವನ್ನು ದೇವರು ನಿರ್ಧರಿಸುತ್ತಾರೆ. ಸಾರ್ವಜನಿಕರ ಒತ್ತಾಸೆಯ ಮೇರೆಗೆ ಮುಂದಿನ ಫೆಬ್ರವರಿ ವೇಳೆಗೆ ಪಿಚ್‌ಗೆ ವಾಪಸಾಗುವೆ’ ಎಂದು ಯುವರಾಜ್ ಸಿಂಗ್ ಬರೆದುಕೊಂಡಿದ್ದಾರೆ. ಎಲ್ಲರ ಪ್ರೋತ್ಸಾಹಕ್ಕೆ ನಾನು ಚಿರಋಣಿ, ಇಂಥ ಸಮಯದಲ್ಲಿ ಭಾರತ ತಂಡವನ್ನು ಬೆಂಬಲಿಸಿ ಎಂದು ಯುವಿ ಬರೆದುಕೊಂಡಿದ್ದಾರೆ. ಆದರೆ, ಟೀಮ್ ಇಂಡಿಯಾಗೆ ಅಥವಾ ಟಿ20 ಲೀಗ್‌ಗಳಿಗೆ ವಾಪಸಾಗುವ ಕುರಿತು ಯುವಿ ಸ್ಪಷ್ಟಪಡಿಸಿಲ್ಲ.

    39 ವರ್ಷದ ಯುವರಾಜ್ ಸಿಂಗ್ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠರಾಗಿದ್ದರು. 2019ರ ಜೂನ್ ತಿಂಗಳಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಯುವರಾಜ್ ಸಿಂಗ್ 304 ಏಕದಿನ ಪಂದ್ಯಗಳಿಂದ 8701 ರನ್, 111 ವಿಕೆಟ್, 40 ಟೆಸ್ಟ್ ಪಂದ್ಯಗಳಿಂದ 1900 ರನ್, 9 ವಿಕೆಟ್ ಹಾಗೂ 58 ಟಿ20ಪಂದ್ಯಗಳಿಂದ 1177 ರನ್ ಹಾಗೂ 28 ವಿಕೆಟ್ ಕಬಳಿಸಿದ್ದಾರೆ.

    https://www.instagram.com/tv/CVv7NX3DKjg/?utm_source=ig_web_copy_link

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts