More

    ಸೀಟ್ ಬೆಲ್ಟ್​​ ಏಕೆ ಧರಿಸಿಲ್ಲ? ಪೊಲೀಸ್​ ವಾಹನ ತಡೆದು ಪ್ರಶ್ನೆ ಮಾಡಿದ ಯುವಕರಿಬ್ಬರ ಬಂಧನ

    ಕಣ್ಣೂರು: ಪೊಲೀಸ್​ ವಾಹನವನ್ನು ತಡೆದು ಸೀಟ್​ ಬೆಲ್ಟ್​ ಯಾಕೆ ಧರಿಸಿಲ್ಲ ಎಂದು ಪ್ರಶ್ನೆ ಮಾಡಿದ ಯುವಕರಿಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಪನೂರ್​​ನಲ್ಲಿ ನಡೆದಿದ್ದು, ಪೊಲೀಸರ ನಡೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಂಧಿತ ಯುವಕರನ್ನು ಫಯಿಜ್ ಮತ್ತು ಸನೂಪ್​ ಎಂದು ಗುರುತಿಸಲಾಗಿದೆ. ಪೊಲೀಸ್​ ಸಿಬ್ಬಂದಿ ಸೀಟ್​ ಬೆಲ್ಟ್​ ಧರಿಸದೇ ಇರುವುದನ್ನು ನೋಡಿದ ಯುವಕರು ತಕ್ಷಣ ಕಾರನ್ನು ತಡೆದು ಪ್ರಶ್ನೆ ಮಾಡಿದ್ದಾರೆ. ಆದರೆ, ಅವರ ವಿರುದ್ಧವೇ ಕಾರು ತಡೆದು ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧನ ಮಾಡಿದ್ದಾರೆ.

    ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಕೆಲವು ವಾರಗಳ ಹಿಂದೆಯೇ ಇಸ್ರೇಲ್ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಹಮಾಸ್, ಫೋಟೋಗಳು ವೈರಲ್

    ಬಂಧಿತ ಯುವಕರು ಹೆಲ್ಮೆಟ್​ ಧರಿಸದೇ ವಾಹನ ಚಲಾಯಿಸುತ್ತಿದ್ದರು. ಹೀಗಾಗಿ ಅವರನ್ನು ತಡೆದು ಪೊಲೀಸರು ದಂಡ ವಿಧಿಸಿದ್ದರು. ಇದಾದ ಬಳಿಕ ಯುವಕರು ಪೊಲೀಸ್​ ವಾಹನವನ್ನು ತಡೆದು ಸೀಟ್​ ಬೆಲ್ಟ್​ ಧರಿಸದಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಕಾನೂನು ಎಲ್ಲರಿಗೂ ಒಂದೇ ಎಂದಿದ್ದಾರೆ. ಈ ವೇಳೆ ಪೊಲೀಸ್​ ಅಧಿಕಾರಿಗೂ ಮತ್ತು ಯುವಕರ ನಡುವೆ ಮಾತಿನ ಚಕಮಕಿಯಾದಾಗ ಸ್ಥಳೀಯರು ಸಹ ಯುವಕರ ನೆರವಿಗೆ ಧಾವಿಸಿದರು. ಪೊಲೀಸ್​ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ಇದಾದ ಬಳಿಕ ಪ್ರಶ್ನೆ ಮಾಡಿದ ಯುವಕರ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಈ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರ ನಡೆಯನ್ನು ನೆಟ್ಟಿಗರು ಖಂಡಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ನೀವೇನು ಪ್ರಶ್ನಾತೀತರೆ ಎಂದು ಪ್ರಶ್ನೆ ಮಾಡಿದ್ದಾರೆ. (ಏಜೆನ್ಸೀಸ್​)

    ಖ್ಯಾತ ಹಿರಿಯ ಪತ್ರಕರ್ತ ಸಚ್ಚಿದಾನಂದ ಮೂರ್ತಿ ವಿಧಿವಶ

    ಟಾಪ್ 10 ಶ್ರೀಮಂತ ಭಾರತೀಯರು: ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ ಅಗ್ರಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts