More

    ಮೊಬೈಲ್ ಆ್ಯಪ್‌ನಲ್ಲಿ ಪಡೆದ ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

    ಕುಂದಾಪುರ: ಮೊಬೈಲ್ ಆ್ಯಪ್‌ನಲ್ಲಿ ಮಾಡಿದ ಸಾಲ ತೀರಿಸಲಾಗದೆ ಡತ್‌ನೋಟ್ ಬರೆದಿಟ್ಟು ಹೆಮ್ಮಾಡಿ ಹರೆಗೋಡು ನಿವಾಸಿ ಕೊಳಹಿತ್ಲು ನಿವಾಸಿ ವಿಘ್ನೇಶ್ (25) ಎಂಬುವರು ಬುಧವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
    ಹರೆಗೋಡು ಕೊಳಹಿತ್ಲು ಸಂಜೀವ ದೇವಾಡಿಗ ಪುತ್ರ ವಿಘ್ನೇಶ ಮನೆಯಲ್ಲಿ ಊಟ ಮಾಡಿ ಮಲಗಿದ್ದು, ಬೆಳಗ್ಗೆ ತಾಯಿ ಕನಕ ಎದ್ದು ನೋಡಿದಾಗ ಬಾಗಿಲು ತೆರೆದಿತ್ತು. ಹುಡುಕಿದಾಗ ಮಗ ನೇಣುಹಾಕಿಕೊಂಡಿದ್ದು ಬೆಳಕಿಗೆ ಬಂದಿದೆ.
    ವಿಘ್ನೇಶ್ ಬೆಂಗಳೂರು ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೊದಲ ಲಾಕ್‌ಡೌನ್ ಸಮಯದಲ್ಲಿ ಊರಿಗೆ ಮರಳಿದ್ದರು. ಬಳಿಕ ವರ್ಕ್ ಫ್ರಮ್ ಹೋಮ್ ಇದ್ದುದರಿಂದ ಮನೆಯಲ್ಲೇ ಕೆಲಸ ಮಾಡುತ್ತಿದ್ದರು. ವರ್ಷದ ಹಿಂದೆ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್‌ಸೆಲ್ ಮಾರಾಟ ವ್ಯವಹಾರ ಆರಂಭಿಸಿದ್ದರು. ಬಂಡವಾಳಕ್ಕೆ ಮೊಬೈಲ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ. ವ್ಯವಹಾರ ಕೈಹಿಡಿಯದೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಡೆತ್ ನೋಟ್ ಪತ್ತೆ: ವಿಘ್ನೇಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡಿರುವ ಸಾಲ. ಮೊಬೈಲ್ ಆ್ಯಪ್‌ನಲ್ಲಿ ಮಾಡಿಕೊಂಡ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾಲ ಇದೆ ಕಟ್ಟಿ ಎಂದು ಯಾರಾದರೂ ಕರೆ ಮಾಡಿದರೆ ಅವನು ನಮಗೆ ಗೊತ್ತಿಲ್ಲ, ಅಥವಾ ಸತ್ತು ಹೋದ ಎಂದು ಹೇಳಿಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ. ಕೆಳಗಡೆ ಆಫೀಸ್ ಕೆಲಸ ಮಾಡುವವನ ನಂಬರ್ ಇದೆ. ಕಾಲ್ ಮಾಡಿ ತಿಳಿಸಿ ಬಿಡಿ. ಶುಕ್ರವಾರ ಸಂಬಳ ಬರುತ್ತದೆ ಎಂದು ಬರೆದಿದ್ದಾರೆ. ಅಲ್ಲದೆ ಡೆತ್ ನೋಟ್ ಕೆಳಭಾಗದಲ್ಲಿ ಎಟಿಎಂ ಪಾಸ್ ವರ್ಡ್ ಕೂಡ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts