More

  ರಸ್ತೆ ಅಪಘಾತದಿಂದಾದ ಗಾಯದ ನೋವು ಸಹಿಸದೇ ಸಾವಿನ ನಿರ್ಧಾರ ಕೈಗೊಂಡ ಯುವಕ

  ಬೆಂಗಳೂರು: ಅಪಘಾತದಿಂದ ಉಂಟಾದ ಗಾಯದ ನೋವು ಸಹಿಸದೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯ ಗೌಡನಪಾಳ್ಯದಲ್ಲಿ ಭಾನುವಾರ ನಡೆದಿದೆ.

  ನವೀನ್ (23) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಇಂದು ಬೆಳಗ್ಗೆ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನವೀನ್​ ಮೂಲತಃ ರಾಮನಗರದ ಕನಕಪುರ ತಾಲೂಕಿನ ಬೆಟ್ಟದಹಲಸೂರು ಗ್ರಾಮದ ನಿವಾಸಿ.

  ನವೀನ್​ ಉತ್ತರಹಳ್ಳಿ ಮುಖ್ಯರಸ್ತೆಯ ಮಂಜುನಾಥ್ ಫರ್ನಿಚರ್​ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಅಪಘಾತದಲ್ಲಿ ಕಾಲಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts