More

    ನರೇಂದ್ರ ಮೋದಿ, ಶೇಖ್ ಹಸೀನಾ ಬಗ್ಗೆ ಅಪಹಾಸ್ಯ : ಯುವಕನ ಬಂಧನ

    ಢಾಕಾ : ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಾಂಗ್ಲಾದೇಶದ ಸಹವರ್ತಿ ಶೇಖ್ ಹಸೀನಾ ಅವರನ್ನು ಅಪಹಾಸ್ಯ ಮಾಡುವ ಮ್ಯೂಸಿಕ್ ವಿಡಿಯೋ ತಯಾರಿಸಿದ್ದಕ್ಕಾಗಿ ಬಾಂಗ್ಲಾದೇಶದಲ್ಲಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಕಟ್ಟುನಿಟ್ಟಾದ ಡಿಜಿಟಲ್ ಸೆಕ್ಯುರಿಟಿ ಆಕ್ಟ್, 2018 ರ ಅಡಿ ದೇಶದ ಉತ್ತರ ಭಾಗದ ಪಟ್ಟಣವೊಂದರ ನಿವಾಸಿ ರಬಿಯುಲ್ ಇಸ್ಲಾಂ (19) ಎಂಬುವನನ್ನು ಮಾರ್ಚ್ 31 ರಂದು ಬಂಧಿಸಲಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಆರೋಪಿಯು ಬಾಂಗ್ಲಾದೇಶ ಮತ್ತು ಭಾರತದ ಪ್ರಧಾನಿಗಳ ಫೋಟೋಗಳನ್ನು ಬಳಸಿ ಅವಮಾನಕಾರಿಯಾದ ಮ್ಯೂಸಿಕ್ ವಿಡಿಯೋವನ್ನು ಮಾಡಿ ತನ್ನ ಫೇಸ್​ಬುಕ್ ಟೈಮ್​ಲೈನ್​ನಲ್ಲಿ ಪೋಸ್ಟ್ ಮಾಡಿದ್ದ. ‘ಮಾನನಷ್ಟ ಮತ್ತು ಸರ್ಕಾರದ ಮುಖ್ಯಸ್ಥರ ಚಿತ್ರಣವನ್ನು ಕಳಂಕಿತಗೊಳಿಸಿದ’ ಆರೋಪವನ್ನು ಈ ಯುವಕನ ಮೇಲೆ ಹೊರಿಸಲಾಗಿದ್ದು, 14 ವರ್ಷಗಳವರೆಗಿನ ಜೈಲು ಶಿಕ್ಷೆಯಾಗಬಲ್ಲ ಕೃತ್ಯವಿದಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಅಲ್-ಮಾಮುನ್ ಹೇಳಿದ್ದಾರೆ.

    ಇದನ್ನೂ ಓದಿ: ಮಸ್ಕಿ ಉಪ ಚುನಾವಣೆ ಅಖಾಡಕ್ಕಿಳಿದ ಬಿ.ವೈ. ವಿಜಯೇಂದ್ರ

    ಈ ಘಟನೆಯು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ 50 ನೇ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಢಾಕಾಗೆ ಎರಡು ದಿನಗಳ ಭೇಟಿ ನೀಡಿದ ನಂತರ ಸಂಭವಿಸಿದೆ. ಮೋದಿ ಭೇಟಿಗೆ ಬಾಂಗ್ಲಾದ ಹಲವು ಮೂಲಭೂತವಾದಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಗಳನ್ನೂ ಹಮ್ಮಿಕೊಂಡಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

    ‘ಮಹಾರಾಷ್ಟ್ರ ಸಿಎಂ ಠಾಕ್ರೆ ಮಾಡೋ ಕೆಲಸ ಬಿಟ್ಟು, ಜನರಿಗೆ ಲಾಕ್​ಡೌನ್ ಭೂತ ತೋರಿಸುತ್ತಿದ್ದಾರೆ’

    ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!

    “ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts