More

    10 ವರ್ಷದ ಹಿಂದೆ ತಾನೇ ರೂಪಿಸಿದ್ದ ನಿಯಮ ಪಾಲಿಸದೆ ಹತ್ಯೆಯಾದ ಯುವಕ… ಏನದು ನಿಯಮ?

    ಚೆನ್ನೈ; ಅಂದಾಜು 10 ವರ್ಷಗಳ ಹಿಂದೆ ತಮ್ಮ ಗ್ರಾಮದಲ್ಲಿ ಯಾರೇ ಪ್ರೇಮವಿವಾಹವಾದರೂ 1,500 ರೂ. ಜುಲ್ಮಾನೆ ಕೊಡಬೇಕು ಎಂಬ ನಿಯಮವನ್ನು ತಾನೇ ರೂಪಿಸಿದ್ದ. ಆದರೆ, ತನ್ನ ಆ ನಿಯಮ ಪಾಲಿಸಲು ತಾನೇ ವಿಫಲನಾಗಿ ತನ್ನ ಗ್ರಾಮದ ಜನರಿಂದಲೇ ಹತ್ಯೆಯಾಗಿದ್ದಾನೆ.

    ತಮಿಳುನಾಡಿನ ಗೌತಮ್​ಪುರಿ ಗ್ರಾಮದ ನಿವಾಸಿ ರವಿ ಹತನಾದವನು. ಈತನ ಸಹೋದರ ಸಂಬಂಧಿಯೊಬ್ಬರು ಎರಡು ವರ್ಷಗಳ ಹಿಂದೆ ಪ್ರೇಮವಿವಾಹವಾಗಿದ್ದರು. ಈ ಹಿನ್ನೆಲೆಯಲ್ಲಿ 1,500 ರೂ. ಜುಲ್ಮಾನೆ ಭರಿಸುವಂತೆ ರವಿ ಅವರ ಕುಟುಂಬಕ್ಕೆ ಸ್ಥಳೀಯ ಪಂಚಾಯ್ತಿ ಸದಸ್ಯರು ಸೂಚಿಸಿದ್ದರು. ಆದರೆ, ಜುಲ್ಮಾನೆ ಪಾವತಿಸಲು ರವಿ ಪ್ರತಿಬಾರಿಯೂ ನಿರಾಕರಿಸುತ್ತಿದ್ದ ಎನ್ನಲಾಗಿದೆ.

    ಇದನ್ನೂ ಓದಿ: ಟೀಮ್​ ಇಂಡಿಯಾ ಆಲ್ರೌಂಡರ್​ ಹಾರ್ದಿಕ್​ ಪಾಂಡ್ಯಗೆ ಗಂಡು ಮಗು

    ಸಕಾಲದಲ್ಲಿ ಜುಲ್ಮಾನೆ ಪಾವತಿಸದಿರುವ ಕಾರಣ 1 ಲಕ್ಷ ರೂ. ಜುಲ್ಮಾನೆ ಭರಿಸುವಂತೆ ಪಂಚಾಯ್ತಿ ಸದಸ್ಯರು ರವಿಗೆ ತಾಕೀತು ಮಾಡಿದ್ದರು. ಆದರೂ ಆತ ಇದನ್ನು ತನ್ನ ಕಿವಿಗೆ ಹಾಕಿಕೊಂಡಿರಲಿಲ್ಲ. ಇದರಿಂದ ಬೇಸತ್ತ ಪಂಚಾಯ್ತಿ ಸದಸ್ಯರು ರವಿಯ ಮನೆಗೆ ಹೋಗಿ ಜುಲ್ಮಾನೆ ವಸೂಲಿ ಮಾಡಲು ಮುಂದಾಗಿದ್ದರು.
    ಅದರಂತೆ ರವಿ ಮನೆಗೆ ಹೋದ ಅವರು ಜುಲ್ಮಾನೆ ಭರಿಸುವಂತೆ ಆಗ್ರಹಿಸಿದ್ದರು. ಆಗಲೂ ರವಿ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಆ ಸಂದರ್ಭದಲ್ಲಿ ಆತನ ಕುಟುಂಬದವರು ಆತನ ನೆರವಿಗೆ ಧಾವಿಸಿದ್ದರು. ಇದರಿಂದ ಸಿಟ್ಟಿಗೆದ್ದ ಪಂಚಾಯ್ತಿ ಸದಸ್ಯರು ಮತ್ತು ಗ್ರಾಮಸ್ಥರು ರವಿ ಹಾಗೂ ಆತನ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರು.

    ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರವಿಯನ್ನು ಹತ್ತಿರದ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಚಿಕಿತ್ಸೆಗೆ ಸ್ಪಂದಿಸದೆ ಆತ ಮೃತಪಟ್ಟ ಎನ್ನಲಾಗಿದೆ.

    ಅಂಬಾಸಮುದ್ರಂನ ಡಿವೈಎಸ್​ಪಿ ಸುಭಾಷಿಣಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಪಂಚಾಯ್ತಿಯವರು ಜುಲ್ಮಾನೆ ಭರಿಸುವಂತೆ ಒತ್ತಡ ಹೇರಿದಾಗಲೆಲ್ಲಾ ಆತ ದೂರು ಕೊಡುತ್ತಿದ್ದ. ಆದರೆ, ತನಿಖೆಗೆ ಸಹಕರಿಸುತ್ತಿರಲಿಲ್ಲ. ಪ್ರೇಮವಿವಾಹವಾದರೆ 1,500 ರೂ. ಜುಲ್ಮಾನೆ ಪಾವತಿಸುವ ಪದ್ಧತಿ ಸರಿಯಲ್ಲ. ಅದನ್ನು ಕೈಬಿಡುವಂತೆ ಗ್ರಾಮಸ್ಥರಿಗೆ ಸಾಕಷ್ಟು ಬಾರಿ ತಿಳಿ ಹೇಳಿದ್ದೆ. ಆದರೆ ಅವರು ಈ ನಿಯಮವನ್ನು ರದ್ದುಗೊಳಿಸುವ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

    ಸಮತಾ ಪಕ್ಷದ ಮಾಜಿ ಅಧ್ಯಕ್ಷೆ ಜಯಾ ಜೇಟ್ಲಿಗೆ ನಾಲ್ಕು ವರ್ಷ ಜೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts