More

    ಬಗೆಹರಿಯದ ಸಮಸ್ಯೆ: ಗನ್​ ಪಾಯಿಂಟ್​ನಲ್ಲಿ ಸರ್ಕಾರಿ ಉದ್ಯೋಗಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಯುವಕ!

    ತಿರುವನಂತಪುರಂ: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸದಿದ್ದಕ್ಕೆ ಯುವಕನೊಬ್ಬ ಗ್ರಾಮ ಪಂಚಾಯಿತಿ ಸರ್ಕಾರಿ ಉದ್ಯೋಗಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡ ಘಟನೆ ಕೇರಳದ ವೆಂಗನೂರ್​ ಗ್ರಾಮದಲ್ಲಿ ನಡೆದಿದೆ.

    ಅಮರಾವಿಲಾ ಮೂಲದ ಮುರುಕನ್​ (33) ಗನ್​ನೊಂದಿಗೆ ಪಂಚಾಯಿತಿ ಕಚೇರಿಗೆ ಬಂದು ಎಲ್ಲರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ನಮಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ದೂರಿದ ಯುವಕ ಸಮಸ್ಯೆ ಬಗೆಹರಿಸದಿದ್ದರೆ ಫೈರಿಂಗ್​ ಮಾಡುವುದಾಗಿ ಗನ್​ ತೋರಿಸಿ ಬೆದರಿಕೆ ಹಾಕಿದನು. ಬಳಿಕ ಉದ್ಯೋಗಿಗಳನ್ನು ಕಚೇರಿ ಒಳಗೆ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಬಂದ್​ ಮಾಡಿದನು.

    ಇದನ್ನೂ ಓದಿ: ಪ್ಯಾಕ್ಸ್ ನೌಕರರಿಗೆ ದೊರೆಯದ ಸೇವಾ ಭದ್ರತೆ: ಅಧಿವೇಶನದಲ್ಲಿ ಚರ್ಚೆಗೆ ಬಾರದ ಕಾನೂನು ತಿದ್ದುಪಡಿ ವಿಚಾರ

    ನಿನ್ನೆ (ಫೆ.21) ಬೆಳಗ್ಗೆ 11 ಗಂಟೆ ಸುಮಾರಿಗೆ ಮುರುಕನ್​ ಗನ್​ ಹಿಡಿದು ಕಚೇರಿಗೆ ಬಂದನು. ಕಾಲುವೆಯಿಂದ ಕುಡಿಯುವ ನೀರು ಸಿಗುತ್ತಿಲ್ಲ ಎಂಬುದು ಆತನ ದೂರು ಆಗಿತ್ತು. ಗನ್​ ಮಾತ್ರವಲ್ಲದೆ, ನೀರನ್ನು ಬಿಡುಗಡೆ ಮಾಡದ ಪಂಚಾಯಿತಿಯನ್ನು ಮುಚ್ಚಿ ಎಂಬ ಬರಹ ಇರುವ ಭಿತ್ತಿ ಫಲಕದೊಂದಿಗೆ ಕಚೇರಿಗೆ ಆಗಮಿಸಿದ್ದನು.

    ಮುರುಕನ್ ಮಾತನಾಡಿ, ವೆಂಗನೂರು ಪಂಚಾಯಿತಿಗೆ ಕಾಲುವೆ ನೀರು ಬರದೇ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ನಂತರ ಪ್ರತಿಭಟನೆಗೆ ಬಂದ ಮುರುಕನ್ ಪಂಚಾಯಿತಿ ಕಚೇರಿಯ ಗೇಟ್‌ಗೆ ಬೀಗ ಹಾಕಿದರು. ಉದ್ಯೋಗಿಗಳನ್ನು ಕೂಡಿ ಹಾಕಿ ಗನ್​ನಿಂದ ಬೆದರಿಕೆ ಹಾಕಿದರು. ಬಳಿಕ ಮಾಹತಿ ತಿಳಿದು ಪೊಲೀಸರು ಆಗಮಿಸಿ ಆತನಿಂದ ಬಂದೂಕನ್ನು ವಶಪಡಿಸಿಕೊಂಡು ಒತ್ತೆಯಾಳಾಗಿದ್ದ ನೌಕರರನ್ನು ಬಿಡುಗಡೆಗೊಳಿಸಿದರು. ಬಳಿಕ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. (ಏಜೆನ್ಸೀಸ್​)

    ಇಂಥವರೂ ಇರ್ತಾರಾ? ಮಗುವಿನ ಚಿಕಿತ್ಸೆಗೆ 11 ಕೋಟಿ ರೂ. ನೆರವು ನೀಡಿದ ಅಪರಿಚಿತ, ಮಗುವಿನ ತಂದೆ ಭಾವುಕ

    ರಾಜ್ಯದಲ್ಲಿ ತ್ರಿಮೂರ್ತಿ ಸಂಚಲನ: ಮೋದಿ ಮ್ಯಾಜಿಕ್, ಷಾ ಕಾರ್ಯತಂತ್ರ, ನಡ್ಡಾ ಸಂಘಟನಾತ್ಮಕ ಗಮನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts