More

    ಬೆಂಗಳೂರಿನ ಯುವಕರು ಸಿರಿಯಾಕ್ಕೆ: ಉಗ್ರರು ಬಹಿರಂಗಗೊಳಿಸಿದ್ರು ಸ್ಫೋಟಕ ಮಾಹಿತಿ

    ಬೆಂಗಳೂರು: ಜಾಗತಿಕ ಉಗ್ರ ಸಂಘಟನೆ ಐಸಿಸ್ ಪರ ಕೆಲಸ ಮಾಡುವುದಕ್ಕಾಗಿ ರಾಜ್ಯ ರಾಜಧಾನಿಯಿಂದ ಯುವಕರನ್ನು ಕಳುಹಿಸಲಾಗುತ್ತಿದೆ. ಇದಕ್ಕಾಗಿ ಖುರಾನ್ ಸರ್ಕಲ್ ರಚಿಸಲಾಗಿದೆ ಎಂಬ ಸ್ಫೋಟಕ ಮಾಹಿತಿಯನ್ನು ನ್ಯಾಷನಲ್ ಇನ್​ವೆಸ್ಟಿಗೇಶನ್ ಏಜೆನ್ಸಿ (ಎನ್​ಐಎ) ವಶದಲ್ಲಿರುವ ನಿಷೇಧಿತ ಹಿಜ್ಬ್​ -ಉತ್​-ತಹ್ರೀರ್​ ಉಗ್ರ ಸಂಘಟನೆಯ ಇಬ್ಬರು ಉಗ್ರರು ನೀಡಿದ್ದಾರೆ.

    ನಿಷೇಧಿತ ಹಿಜ್ಬ್​-ಉತ್​-ತಹ್ರೀರ್ ಉಗ್ರರಾದ ಇರ್ಫಾನ್​ ನಾಸೀರ್ ಮತ್ತು ಅಬ್ದುಲ್ ಅಹ್ಮದ್ ಖಾದರ್ ಎನ್​ಐಎ ವಶದಲ್ಲಿ ವಿಚಾರಣೆಗೊಳಪಟ್ಟಿದ್ದು, ತನಿಖೆಯ ವೇಳೆ ಶಾಕಿಂಗ್ ಮಾಹಿತಿಗಳನ್ನು ಹೊರಗೆಡಹಿದ್ದಾರೆ. ಈ ಉಗ್ರರನ್ನು ಉಗ್ರ ವೈದ್ಯ ಅಬ್ದುರ್ ರೆಹಮಾನ್ ನೀಡಿದ ಮಾಹಿತಿ ಮೇರೆಗೆ ಬಂಧಿಸಲಾಗಿತ್ತು. 2004ರಿಂದೀಚೆಗೆ ಬೆಂಗಳೂರಿಂದ ಸಾಕಷ್ಟು ಯುವಕರು ಸಿರಿಯಾಕ್ಕೆ ತೆರಳಿದ್ದು, ಅವರ ಗುರುತು ಮತ್ತು ಲೆಕ್ಕ ಇನ್ನೂ ಖಾತರಿಯಾಗಿಲ್ಲ. ಹೀಗಾಗಿ ಎನ್​ಐಎ ತನಿಖೆ ಚುರುಕಾಗಿದೆ.

    ಇದನ್ನೂ ಓದಿ: ಗ್ಲಾಸ್​, ಸ್ಮಾರ್ಟ್​ಫೋನ್​ಗಳ ಮೇಲೆ 28 ದಿನ ಜೀವಂತ ಇರುತ್ತೆ ಕರೊನಾ ವೈರಸ್!

    ಲಭ್ಯ ಮಾಹಿತಿ ಪ್ರಕಾರ, 2013-14ನೇ ಸಾಲಿನಲ್ಲಿ ಬೆಂಗಳೂರಿನಿಂದ ಐವರು ಯುವಕರು ಸಿರಿಯಾಕ್ಕೆ ಉಗ್ರ ತರಬೇತಿಗಾಗಿ ತೆರಳಿದ್ದಾರೆ. ಇವರನ್ನು ಖುರಾನ್ ಸರ್ಕಲ್​ ಗ್ರೂಪ್ ಮೂಲಕ ಬಲೆಗೆ ಬೀಳಿಸಿದ್ದರು ನಾಸೀರ್ ಮತ್ತು ಖಾದರ್. ಹೀಗೆ ಹೋದ ಐವರ ಪೈಕಿ ಇಬ್ಬರು ಸಿರಿಯಾದಲ್ಲಿ ಹತ್ಯೆಗೀಡಾಗಿದ್ದಾರೆ. ಮತ್ತೋರ್ವ ಭಾರತಕ್ಕೆ ಹಿಂದಿರುಗಿದ್ದು, ಆತನನ್ನು ಬಂಧಿಸಲಾಗಿದೆ. ಆದರೆ ಇನ್ನಿಬ್ಬರ ಪತ್ತೆ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್)

    ‘ಧರಣಿ ಕುಳಿತಿರುವ ಉಪನ್ಯಾಸಕರೇ… ಆತಂಕ ಬೇಡ’- ಆಸ್ಪತ್ರೆಯಿಂದಲೇ ಶಿಕ್ಷಣ ಸಚಿವರ ಅಭಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts