ಸಾಂಬಾರ್​ಗೆ​ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ!

salt
Published on

ಲಕ್ನೋ: ತನ್ನ ಮನೆಯಲ್ಲಿ ಮಾಡಿರುವ ಅಡುಗಗೆ ಉಪ್ಪಿನ ಅಂಶ ಹೆಚ್ಚಾಯಿತೆಂದು ಸಿಟ್ಟಿಗೆದ್ದ ಯುವಕನೊಬ್ಬ ತನ್ನನ್ನು ನಾನು ಶೂಟ್ ಮಾಡಿಕೊಂಡ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನೀಲಮಠ ಪ್ರದೇಶದ ಪುರನ್ ಶಂಕರ್ ದುಬೆ (22) ಮೃತ. ಶನಿವಾರ (ಏಪ್ರಿಲ್ 29) ರಾತ್ರಿ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕ ಪೈಲ್ಸ್‌ನಿಂದ ಬಳಲುತ್ತಿದ್ದನು. ಹೀಗಾಗಿ ಹೆಚ್ಚು ಉಪ್ಪು ಮತ್ತು ಮಸಾಲೆಯುಕ್ತ ಆಹಾರವನ್ನು ತ್ಯಜಿಸಿದ್ದ. ಶನಿವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದನು. ಈ ವೇಳೆ ಉಪ್ಪು ಹೆಚ್ಚಿದ ಸಾಂಬಾರ್​​ ರುಚಿ ನೋಡಿದ ಬಳಿಕ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಆತ ಗನ್ ನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

ಗನ್​ ಸದ್ದು ಕೇಳಿ ಕೂಡಲೇ ನಾವೆಲ್ಲ ಆತನ ರೂಮಿಗೆ ಓಡಿದೆವು. ಈ ವೇಳೆ ಆತನ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದು ಯುವಕ ತಂದೆ ಹೇಳಿದ್ದಾರೆ.

ಪುರನ್ ತನ್ನ ಕೋಣೆಯೊಳಗೆ ತೆರಳಿ ತನ್ನ ಎದೆಗೆ ಶೂಟ್ ಮಾಡಿಕೊಂಡಿದ್ದಾನೆ. ಆದರೆ ಪುರನ್​ಗೆ ಈ ಗನ್ ಎಲ್ಲಿ ಸಿಕ್ಕಿತ್ತು ಎಂಬುದರ ಬಗ್ಗೆ ತನಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net