More

    2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇದ್ದರೂ ರಸ್ತೆಯಲ್ಲಿ ನರಳಿ, ನರಳಿ ಸತ್ತ!

    ಬರೇಲಿ: ಆಸ್ಪತ್ರೆ 2 ಕಿ.ಮೀ. ದೂರದಲ್ಲಿದ್ದರೂ ಅಪಘಾತಕ್ಕೆ ಒಳಗಾಗಿದ್ದ 19ರ ಯುವಕ ವಿಲ ವಿಲನೆ ಒದ್ದಾಡುತ್ತಾ, ಸಹಾಯ ಯಾಚಿಸುತ್ತಾ ಪ್ರಾಣಬಿಟ್ಟಿದ್ದಾನೆ. ಈತನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂಬ ಕನಿಷ್ಠ ಕಾಳಜಿಯನ್ನೂ ತೋರದ ಜನರು, ಈತ ವಿಲ ವಿಲ ಒದ್ದಾಡುತ್ತಿದ್ದದ್ದನ್ನು ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿಕೊಂಡು ವಿಕೃತಾನಂದ ಅನುಭವಿಸಿದ್ದಾರೆ.

    ದಿವ್ಯಾಂಶು ದೀಕ್ಷಿತ್​ (19) ಮೃತ ಯುವಕ. ಬರೇಲಿಯ ದೆಹಲಿ-ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಸದ ನಿಮಿತ್ತ ರೋಜಾ ಎಂಬ ಊರಿಗೆ ಬೈಕ್​ನಲ್ಲಿ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಅಪರಿಚಿತ ವಾಹನ ಈತನ ಬೈಕ್​ಗೆ ಡಿಕ್ಕಿ ಹೊಡೆಯಿತು. ಬೈಕ್​ನಿಂದ ಹಾರಿಬಿದ್ದ ಈತನ ತಲೆ ಮತ್ತು ಮೈಕೈಗೆ ಗಂಭೀರ ಗಾಯವಾಗಿ ರಸ್ತೆಯಲ್ಲಿ ಬಿದ್ದಿದ್ದ.

    ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ನೌಕರರು ಟಿ-ಶರ್ಟ್ಸ್​, ಜೀನ್ಸ್​ ಪ್ಯಾಂಟ್​ ಧರಿಸುವಂತಿಲ್ಲ: ಕಾರಣ ಹೀಗಿದೆ ನೋಡಿ!

    ತೀವ್ರ ರಕ್ತಸ್ರಾವವಾಗುತ್ತಿದ್ದರೂ ಜೀವವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಯುವಕ, ತನ್ನನ್ನು ಆಸ್ಪತ್ರೆಗೆ ಕರೆದೊಯ್ಯಿರಿ ಇಲ್ಲವೇ ಆಂಬುಲೆನ್ಸ್​ ಅನ್ನಾದರೂ ವ್ಯವಸ್ಥೆ ಮಾಡುವಂತೆ ಅಪಘಾತ ಸ್ಥಳದಲ್ಲಿ ನೆರೆದಿದ್ದ ಜನರನ್ನು ಕೇಳಿಕೊಳ್ಳುತ್ತಲೇ ಇದ್ದ. ಆದರೆ, ಯಾರೊಬ್ಬರೂ ಈತನ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಆತ ವಿಲ ವಿಲನೆ ಒದ್ದಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಳ್ಳಲು ಮುಂದಾಗಿದ್ದರು.

    ಸುದ್ದಿ ತಿಳಿದ ಪೊಲೀಸರು ಅರ್ಧ ಗಂಟೆ ಬಿಟ್ಟು ಅಪಘಾತಕ್ಕೆ ಸ್ಥಳಕ್ಕೆ ಬಂದು ದೀಕ್ಷಿತ್​ನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಅಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ಕೇವಲ 2 ಕಿ.ಮೀ. ದೂರದಲ್ಲಿ ಆಸ್ಪತ್ರೆ ಇತ್ತು. ಆತನನ್ನು ತಕ್ಷಣವೇ ಕರೆತಂದಿದ್ದರೆ ಬದುಕುಳಿಸುವ ಸಾಧ್ಯತೆಗಳು ಹೆಚ್ಚಾಗಿದ್ದವು. ಆದರೆ, ಮಾನವೀಯತೆಯನ್ನೇ ಮರೆತ ಜನರು ಆತ ವಿಲ ವಿಲನೆ ಒದ್ದಾಡುತ್ತಾ ಪ್ರಾಣಬಿಡುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವುದರಲ್ಲೇ ವಿಕೃತಾನಂದ ಕಂಡುಕೊಂಡರು ಎಂದು ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

    ‘ತ್ರಿವಿಕ್ರಮ’ನ ಪರಾಕ್ರಮ!: 50 ಲಕ್ಷ ಮೊತ್ತಕ್ಕೆ ಆಡಿಯೋ ಹಕ್ಕುಗಳ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts