More

    ಯುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಶ್ರೀನಿವಾಸ್​ ವಿಚಾರಣೆ ನಡೆಸಿದ ದೆಹಲಿ ಪೊಲೀಸ್

    ನವದೆಹಲಿ : ಕರೊನಾ ಪರಿಹಾರ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಇಂಡಿಯನ್ ಯೂತ್ ಕಾಂಗ್ರೆಸ್​(ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್​ ಅವರನ್ನು ದೆಹಲಿ ನಗರ ಅಪರಾಧ ವಿಭಾಗದ ಪೊಲೀಸರು ಇಂದು ವಿಚಾರಣೆ ಮಾಡಿದರು. ಕರೊನಾ ಔಷಧಿಗಳ ಕಾನೂನುಬಾಹಿರ ವಿತರಣೆಯ ಆರೋಪದ ಹಿನ್ನೆಲೆಯಲ್ಲಿ ನಗರದ ಐವೈಸಿ ಕಛೇರಿಗೆ ಹೋಗಿ ಶ್ರೀನಿವಾಸ್​ ಅವರಿಗೆ ಪ್ರಶ್ನೆಗಳನ್ನು ಕೇಳಲಾಯಿತು ಎನ್ನಲಾಗಿದೆ.

    “ಡಾ.ದೀಪಕ್​ ಸಿಂಗ್ ಎಂಬುವರು ಕೋವಿಡ್ ಔಷಧಿಗಳ ಕಾನೂನುಬಾಹಿರ ವಿತರಣೆ ಮುಂತಾಗಿ ಸಲ್ಲಿಸಿರುವ ರಿಟ್​ ಅರ್ಜಿಯಲ್ಲಿ ದೆಹಲಿ ಹೈಕೋರ್ಟ್​ ದೆಹಲಿ ಪೊಲೀಸರಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ನ್ಯಾಯಾಲಯದ ಈ ನಿರ್ದೇಶನಗಳ ಪ್ರಕಾರ ಹಲವಾರು ಸಂಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ” ಎಂದು ದೆಹಲಿ ಪೊಲೀಸ್ ವಕ್ತಾರ ಚಿನ್ಮಯ್ ಬಿಸ್ವಲ್ ಹೇಳಿದ್ದಾರೆ.

    ಇದನ್ನೂ ಓದಿ: ಕೆಲಸ ಮಾಡುವವರೇ ತಪ್ಪು ಮಾಡುವುದು : ಅನುಪಂ ಖೇರ್​ ಮಾರ್ಮಿಕ ನುಡಿ

    ಹೃದಯ ಫೌಂಡೇಶನ್ ಎಂಬ ನಾನ್​ಪ್ರಾಫಿಟ್​ ಸಂಸ್ಥೆಯ ಅಧ್ಯಕ್ಷರಾಗಿರುವ ದೀಪಕ್ ಸಿಂಗ್​ ಅವರು, ಮೆಡಿಕಲ್ ಮಾಫಿಯ ಮತ್ತು ರಾಜಕಾರಣಿಗಳ ನಡುವೆ ನಂಟಿದ್ದು, ಕರೊನಾ ಔಷಧಿಗಳ ಅಕ್ರಮ ವಿತರಣೆಯಲ್ಲಿ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ದೂರಿ ಸಿಬಿಐ ತನಿಖೆ ಕೋರಿದ್ದರು. ಮೇ 4 ರಂದು ದೆಹಲಿ ಹೈಕೋರ್ಟ್​, ಈ ಬಗ್ಗೆ ಮೊದಲು ದೆಹಲಿ ಪೊಲೀಸ್ ಕಮಿಷನರ್​ಗೆ ದೂರು ಸಲ್ಲಿಸಬೇಕೆಂದು ಸೂಚಿಸಿತ್ತು ಎನ್ನಲಾಗಿದೆ.

    ನಂತರದಲ್ಲಿ ಸಿಂಗ್​ ಅವರು, ಎಎಪಿ ಶಾಸಕ ದಿಲೀಪ್ ಪಾಂಡೆ, ಐಎನ್​ಸಿಯ ಬಿ.ವಿ.ಶ್ರೀನಿವಾಸ್, ಬಿಜೆಪಿ ಸಂಸದರಾದ ಗೌತಮ್​ ಗಂಭೀರ್​ ಮತ್ತು ಸುಜಯ್ ವೀಖೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ಶಾಸಕ ಮುಕೇಶ್ ಶರ್ಮ ಅವರ ಹೆಸರುಗಳನ್ನು ಬರೆದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೆಹಲಿ ಕಮಿಷನರ್​ ಎಸ್​.ಎನ್​.ಶ್ರೀವಾಸ್ತವ ಅವರು ಅಪರಾಧ ವಿಭಾಗದ ತಂಡವೊಂದಕ್ಕೆ ಈ ವಿಚಾರಣೆಯ ಜವಾಬ್ದಾರಿ ವಹಿಸಿದೆ. ಈ ಮುನ್ನ ಎಎಪಿ ಶಾಸಕ ದಿಲೀಪ್ ಪಾಂಡೆ ಅವರನ್ನು ಪೊಲೀಸ್ ತಂಡ ವಿಚಾರಣೆ ನಡೆಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಸೌದೆಗಾಗಿ ಮರ ಕಡಿಯಲು ಬಿಡೋಲ್ಲ ಎಂದು ಗ್ರಾಮಸ್ಥರ ಪ್ರತಿಭಟನೆ

    ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts