More

    ಯುವ ಕಾಂಗ್ರೆಸ್ ಸಮಿತಿ ಚುನಾವಣೆ ನಾಳೆ

    ಹಾವೇರಿ: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಜ. 12ರಂದು ಆನ್​ಲೈನ್ ಮೂಲಕ ಮತದಾನ ನಡೆಯಲಿದೆ.

    ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ಮತದಾನ ನಡೆಯಲಿದ್ದು, ಅತಿ ಹೆಚ್ಚು ಮತ ಪಡೆದವರು ಜಿಲ್ಲಾಧ್ಯಕ್ಷರಾಗಿ ಹಾಗೂ ಎರಡನೇ ಅತಿ ಹೆಚ್ಚು ಮತ ಪಡೆದವರು ಉಪಾಧ್ಯಕ್ಷ, ಮೂರನೇ ಅತಿ ಹೆಚ್ಚು ಮತ ಪಡೆದವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಲಿದ್ದಾರೆ. ರಾಜ್ಯದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಸ್ಥಾನಗಳಿಗೂ ಇದೇ ಸಂದರ್ಭದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

    ಜಿಲ್ಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ಹಿರೇಮಠ, ಶಾದಷಾಖಾನ್ ಕುಲಕರ್ಣಿ, ನಾಸೀರ್​ಖಾನ್ ಪಠಾಣ, ಸಮೀಜ್​ಖಾಜಿ ಸ್ಪರ್ಧಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,600 ಮತದಾರರು ಹಕ್ಕು ಚಲಾಯಿಸಲಿದ್ದಾರೆ.

    ಒಟಿಪಿ ಪಡೆದು ಮತ ಹಾಕಿ: ಕರೊನಾ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲಿಗೆ ತಮ್ಮ ಮೊಬೈಲ್​ನಲ್ಲಿ ಗೂಗಲ್ ಪ್ಲೇಸ್ಟೋರ್​ನಲ್ಲಿ ‘ಐವೈಸಿ ಸೆಲ್ಪ್ ವೋಟಿಂಗ್’ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ಮಾಡಬಹುದು.

    ಮತದಾನಕ್ಕಾಗಿ ಸದಸ್ಯತ್ವ ಸ್ವೀಕರಿಸುವಾಗ ನೀಡಿದ ಮೊಬೈಲ್​ಫೋನ್ ಸಂಖ್ಯೆಗೆ ಒಟಿಪಿ ನೀಡಲಾಗುತ್ತದೆ. ಅದನ್ನು ಬಳಸಿ ನಾಲ್ಕು ಮತಗಳನ್ನು ಹಾಕಬಹುದು. ಇದರಲ್ಲಿ ಒಂದು ಮತ ರಾಜ್ಯ ಘಟಕದ ಅಧ್ಯಕ್ಷ, ಇನ್ನೊಂದು ಪ್ರಧಾನ ಕಾರ್ಯದರ್ಶಿ, ಒಂದು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಕೊನೆಯ ಮತವನ್ನು ಯುವ ಕಾಂಗ್ರೆಸ್ ಬ್ಲಾಕ್ ಘಟಕದ ಅಧ್ಯಕ್ಷರಿಗೆ ಹಾಕಬಹುದು. ಜ. 18ರಂದು ಆಪ್ ಹಾಗೂ ಯೂತ್ ಕಾಂಗ್ರೆಸ್ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

    ಪ್ರಚಾರ ತಂತ್ರ: ಪಕ್ಷದ ಆಂತರಿಕ ಚುನಾವಣೆಯಾಗಿದ್ದರೂ ಮೂಲ ಹುದ್ದೆಗಳಿಗೆ ಇರುವಂತೆ ಯುವ ಕಾಂಗ್ರೆಸ್ ಹುದ್ದೆಗೆ ಭಾರಿ ಪೈಪೋಟಿ ನಡೆದಿದೆ. ಪರಸ್ಪರ ಆರೋಪ, ಪ್ರತ್ಯಾರೋಪ, ಕಾಲೆಳೆಯುವಿಕೆ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರದ ಎಲ್ಲ ತಂತ್ರಗಳೂ ನಡೆದಿವೆ. 18ರಿಂದ 36 ವಯೋಮಾನದವರು ಮಾತ್ರ ಯುವ ಕಾಂಗ್ರೆಸ್ ಸದಸ್ಯತ್ವ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ.

    ಜ. 12ರಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಒಟ್ಟು 5,600 ಯುವಕರು ಮತದಾನ ಮಾಡಲಿದ್ದಾರೆ. ಹೆಚ್ಚಿನ ಮತ ಪಡೆದವರು ಜಿಲ್ಲಾಧ್ಯಕ್ಷ ಹಾಗೂ ಅವರಿಗಿಂತ ಕಡಿಮೆ ಮತ ಪಡೆದವರಿಗೆ ಉಪಾಧ್ಯಕ್ಷ, ಕಾರ್ಯದರ್ಶಿ ಸ್ಥಾನ ನೀಡಲಾಗುತ್ತದೆ.

    | ಎಂ.ಎಂ. ಹಿರೇಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts