More

    ಯುವಕರೇ ಈ ಮಂಗನ ಸ್ನೇಹಿತರು! ಬೈಕ್​ನಲ್ಲಿ ಬಿಂದಾಸ್​ ಸವಾರಿ, ಹೋಟೆಲ್​ನಲ್ಲಿ ತಿಂಡಿ ತಿನ್ನುವ ವಾನರ…

    ಕೊಡೇಕಲ್​: ಮನುಷ್ಯರನ್ನು ಕಂಡಾಕ್ಷಣ ಮಂಗಗಳು ಚಕ್ಕನೆ ಬೇರೆಡೆ ಜಂಪ್​ ಮಾಡುವುದು ಸಾಮಾನ್ಯ. ಆದರೆ ಕೊಡೇಕಲ್​ನಲ್ಲಿರುವ ಈ ಮಂಗ (ಕೋಡಂಗಿ) ಮನುಷ್ಯರ ಸ್ನೇಹ ಬೆಳೆಸಿ ಅವರೊಂದಿಗೆ ಬೈಕ್​ ಸವಾರಿ ಮಾಡುತ್ತಾ, ತಿಂಡಿ (ಉಪಾಹಾರ) ತಿನ್ನುತ್ತ ನಿಭಿರ್ಡೆಯಿಂದ ಓಡಾಡಿಕೊಂಡಿದೆ.

    15 ದಿನಗಳಿಂದ ಗ್ರಾಮದಲ್ಲಿ ಓಡಾಡಿಕೊಂಡಿರುವ ಮಂಗ ಬೈಕ್​ನಲ್ಲಿ ಹೋಗುವರ ಜತೆ ತಾನೂ ಸವಾರಿ ಮಾಡುತ್ತಾ ಹಲವು ಹೋಟೆಲ್​ಗಳಿಗೆ ಹೋಗಿ ತಿಂಡಿ ತಿನ್ನುತ್ತಾ ಯುವಕರ ಪಾಲಿಗೆ ಬೆಸ್ಟ್​ ಫ್ರೆಂಡ್​ ಆಗಿ ಸಖ್ಯ ಬೆಳೆಸಿಕೊಂಡಿದೆ.

    ಊರಿಗೆ ಬಂದಿದ್ದ ಮಂಗಗಳ ಹಿಂಡಿನಿಂದ ತಪ್ಪಿಸಿಕೊಂಡಿದ್ದು, ಮರಳಿ ತನ್ನ ಬಳಗವನ್ನು ಸೇರಿಕೊಳ್ಳಲಾಗದೆ ಪ್ರೌಢಶಾಲೆ ಆವರಣದ ಮರಗಳಲ್ಲಿ ಕಾಲ ಕಳೆಯುತ್ತಿದೆ. ಶಾಳಾ ಮೈದಾನದಲ್ಲಿ ನಿತ್ಯ ಆಟವಾಡಲು ಹೋಗುವ ಯುವಕರ ಕಣ್ಣಿಗೆ ಬಿದ್ದದೆ. ಯುವಕರು ಮಂಗಕ್ಕೆ ತಿಂಡಿ ನೀಡಿದ್ದಾರೆ. ಮೊದಮೊದಲು ಆತಂಕದಲ್ಲೇ ತಿನಿಸುಗಳನ್ನು ಪಡೆದ ಮಂಗ, ಕ್ರಮೇಣ ಅವರೊಂದಿಗೆ ಸ್ನೇಹ ಬೆಳೆಸಿ ಬಿಂದಾಸ್ ಆಗಿ​ ಓಡಾಡುತ್ತಿದೆ.

    ಯುವಕರು ಹೋಟೆಲ್​ ಒಳಗಡೆ ಹೋದರೆ ತಾನು ಸಹ ಅವರೊಂದಿಗೆ ಹೋಗಿ ತಿಂಡಿ ತಿನ್ನುತ್ತಾ ಯಾರಿಗೂ ತೊಂದರೆ ಕೊಡುತ್ತಿಲ್ಲ. ಸಂಜೆಯಾಗುತ್ತಲೇ ಶಾಲಾ ಆವರಣದಲ್ಲಿನ ಗಿಡಗಳನ್ನೇರಿ ಕುಳಿತುಕೊಳ್ಳುತ್ತದೆ. ಬೆಳಗಾದ ತಕ್ಷಣ ಪರಿಚಯ ಮಾಡಿಕೊಂಡಿರುವವರನ್ನು ಹುಡುಕುತ್ತಾ ರಸ್ತೆ ಬಳಿ ನಿಲ್ಲುತ್ತದೆ. ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಯಾವುದೇ ರೀತಿಯ ತೊಂದರೆ ನೀಡದೆ ಯುವಕರು ಕೈ ಮಾಡಿ ಕರೆದರೆ ಸಾಕು, ಹಾರಿ ಬೈಕ್​ ಹತ್ತಿ ಸವಾರಿ ಮಾಡುತ್ತಾ ಊರವರ ಪ್ರೀತಿಗೆ ಪಾತ್ರವಾಗಿದೆ.

    ಆದರೂ ಮಂಗನ ಕೈಯಲ್ಲಿ ಮಾಣಿಕ್ಯ ಎಂಬ ಗಾದೆಯಂತೆ ಯಾವ ಸಮಯದಲ್ಲಿ ಹೇಗೆ ವರ್ತಿಸುತ್ತದೆಯೋ ತಿಳಿಯದು. ಹೀಗಾಗಿ ಸಾಧ್ಯವಾದಷ್ಟು ಎಚ್ಚರದಿಂದ ಇರಿ ಎಂದು ಹಿರಿಯರು ಯುವಕರಿಗೆ ತಿಳಿಹೇಳುತ್ತಿದ್ದಾರೆ.

    ಉಡುಪಿಯಲ್ಲಿ ದುರಂತ: ಮದ್ವೆ ಮುನ್ನಾ ದಿನದ ರೋಸ್ ಕಾರ್ಯಕ್ರಮದಲ್ಲಿ ಕುಸಿದು ಬಿದ್ದ ಯುವತಿ ಸಾವು!

    ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹ: ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತ ಸಂಘ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts