More

    ಹನುಮಾನ್ ಚಾಲಿಸ ಪಠಿಸುತ್ತ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವತಿ

    ನವದೆಹಲಿ: ನಿಮ್ಮ ದೇಹದ ಒಂದು ಭಾಗವನ್ನೇ ತೆರೆದು ವೈದ್ಯರು ಸರ್ಜರಿ ಮಾಡುತ್ತಿದ್ದರೆ ನೀವೇನು ಮಾಡುತ್ತೀರಿ? ಆ ಭಾಗದಲ್ಲಿ ಏನಾಗುತ್ತಿದೆ ಎನ್ನುವ ಅರಿವಾಗದಂತೆ ಅರಿವಳಿಕೆ ಇಂಜೆಕ್ಷನ್ ಕೊಟ್ಟಿದ್ದರೂ ಭಯ ನಿಮ್ಮನ್ನು ಬಿಟ್ಟಿರುವುದಿಲ್ಲ ಅಲ್ಲವೇ?

    ಆದರೆ ಈ ಯುವತಿಯ ಕಥೆ ಕೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಯುಕ್ತಿ ಅಗರ್ವಾಲ್ (24) ಹೆಸರಿನ ಯುವತಿಗೆ ಇತ್ತೀಚೆಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬ್ರೇನ್ ಸರ್ಜರಿ ಮಾಡಲಾಗಿದೆ. ಸಾಮಾನ್ಯವಾಗಿ ಬ್ರೇನ್ ಸರ್ಜರಿ ಮಾಡುವಾಗ ಅವರಿಗೆ ಸಂಪೂರ್ಣವಾಗಿ ಎಚ್ಚರ ತಪ್ಪುವಂತೆ ಅರಿವಳಿಕೆ ಚುಚ್ಚುಮದ್ದು ನೀಡಲಾಗುವುದಿಲ್ಲ. ನೋವು ಗೊತ್ತಾಗದಿರುವಂತೆ ಆ ಸ್ಥಳಕ್ಕೆ ಮಾತ್ರ ಚುಚ್ಚು ಮದ್ದು ಕೊಡಲಾಗುತ್ತದೆ. ಯುಕ್ತಿಗೂ ಅದೇ ರೀತಿ ಚುಚ್ಚು ಮದ್ದು ಕೊಟ್ಟು ಆಪರೇಷನ್ ಮಾಡಲಾಗಿದೆ.

    ಸತತವಾಗಿ ಮೂರು ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಈ ಸಮಯದಲ್ಲಿ ಸುಮ್ಮನಿರದ ಯುಕ್ತಿ ಸಂಪೂರ್ಣ ಸಮಯವನ್ನು ಹನುಮಾನ್ ಚಾಲಿಸ ಪಠಿಸುವ ಮೂಲಕ ಕಳೆದಿದ್ದಾಳಂತೆ. ಮಧ್ಯದಲ್ಲಿ ಒಮ್ಮೆ ವೈದ್ಯರೊಂದಿಗೂ ಮಾತನಾಡಿದ್ದಾಳಂತೆ. ಯುಕ್ತಿಯ ಧೈರ್ಯದ ಬಗ್ಗೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತೊಯ್ದ ಗ್ರಾಮಸ್ಥರು!

    ‘ಹೌ ನಾಟ್​ ಟು ಮೇಕ್​ ಮನಿ’ ರಾಜ್​ ಕುಂದ್ರ ಬರೆದಿರುವ ಕಾದಂಬರಿ ಈಗ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts