More

    ಇನ್​ಸ್ಟಾಗ್ರಾಂ ಸ್ನೇಹಿತನಿಂದ ರೇಪ್​, ಬ್ಲ್ಯಾಕ್​ಮೇಲ್​ಗೆ ಒಳಗಾದ ಯುವತಿ

    ಅಹಮದಾಬಾದ್: ಇನ್​ಸ್ಟಾಗ್ರಾಂನಲ್ಲಿ ಬೆಳೆದ ಸ್ನೇಹವು ಅಪರಾಧಿಕ ತಿರುವು ಪಡೆದುಕೊಂಡಿರುವ ಪ್ರಸಂಗವೊಂದು ಗುಜರಾತಿನಿಂದ ವರದಿಯಾಗಿದೆ. ಏರ್​ ಹೋಸ್ಟೆಸ್​ ತರಬೇತಿ ಪಡೆಯುತ್ತಿರುವ ಯುವತಿಯೊಬ್ಬಳನ್ನು ಅಹಮದಾಬಾದಿನ ವೇಜಲ್​ಪುರದ ಇಂಜಿನಿಯರಿಂಗ್​ ವಿದ್ಯಾರ್ಥಿ ರೇಪ್​ ಮಾಡಿ, ಆ ವಿಡಿಯೋ ಕ್ಲಿಪ್ಪನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡುತ್ತಾ ಮತ್ತೆ ಮತ್ತೆ ಶೋಷಿಸಿರುವ ಆರೋಪ ಕೇಳಿಬಂದಿದೆ.

    22 ವರ್ಷದ ಸಂತ್ರಸ್ತೆಯು 7 ತಿಂಗಳ ಹಿಂದೆ ಇನ್​ಸ್ಟಾಗ್ರಾಂನಲ್ಲಿ ಅಜಿತ್​ ತ್ರಿವೇದಿ ಎಂಬ ಇಂಜಿನಿಯರಿಂಗ್​ ವಿದ್ಯಾರ್ಥಿಯನ್ನು ಭೇಟಿ ಮಾಡಿದಳು. ಚ್ಯಾಟ್​ ಮಾಡುತ್ತಾ ಸ್ನೇಹ ಬೆಳೆಸಿಕೊಂಡ ಮೇಲೆ ಇಬ್ಬರೂ ಫೋನ್​ ನಂಬರ್​ ಬದಲಾಯಿಸಿಕೊಂಡು ಮುಖತಃ ಭೇಟಿಯಾಗುವ ಯೋಜನೆ ಮಾಡಿದರು. ಕಳೆದ ಏಪ್ರಿಲ್​ನಲ್ಲಿ ಆಕೆಯನ್ನು ತನ್ನ ಮನೆಗೆ ಆಹ್ವಾನಿಸಿದ ಅಜಿತ್​, ಕೋಲ್ಡ್​ ಡ್ರಿಂಕ್​ನಲ್ಲಿ ಮತ್ತು ತರಿಸುವ ಔಷಧಿ ಸೇರಿಸಿದ. ಅದನ್ನು ಕುಡಿದು ಆಕೆ ಪ್ರಜ್ಞೆ ತಪ್ಪಿದಾಗ, ಲೈಂಗಿಕ ಅತ್ಯಾಚಾರ ನಡೆಸಿದ ಎನ್ನಲಾಗಿದೆ.

    ಇದನ್ನೂ ಓದಿ: ಡ್ರಾಪ್ ಕೊಡ್ತೇನೆ ಅಂತ ಹೇಳಿ ಕರ್ಕೊಂಡು ಹೋಗಿ ರೇಪ್ ಮಾಡ್ದ; ಎರಡು ತಿಂಗಳ ಬಳಿಕ ದೂರು ಕೊಟ್ಟ ಮಹಿಳೆ

    ತನ್ನ ಹೇಯಕೃತ್ಯವನ್ನು ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಯುವಕ, ಬ್ಲ್ಯಾಕ್​ಮೇಲ್​ ಮಾಡುತ್ತಾ ಮತ್ತೆ ಮತ್ತೆ ಆಕೆಯನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅವಳು ನಿರಾಕರಿಸಿದರೆ ಚೆನ್ನಾಗಿ ಥಳಿಸುತ್ತಿದ್ದ ಎಂದೂ ಸಹ ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ. ಪೊಲೀಸರು ಆರೋಪಿ ಅಜಿತ್​ ತ್ರಿವೇದಿಯನ್ನು ಆತನ ವೇಜಲ್​ಪುರದ ಮನೆಯಿಂದ ಬಂಧಿಸಿದ್ದಾರೆ. (ಏಜೆನ್ಸೀಸ್)

    ‘ಈಸ್ಟ್​ ಇಂಡಿಯಾ ಕಂಪೆನಿ ಪ್ರವೃತ್ತಿ ಬಿಡಿ’: ಇನ್​ಸ್ಟಾಗ್ರಾಂ ಮೇಲೆ ಕಂಗನಾ ಗರಂ!

    ಅಂಡರ್​ವೇರ್​ನಲ್ಲಿ ಓಡಾಡಿದ್ದ MLA: ‘ಹೆಂಡ ಕುಡಿದಿದ್ರು, ನನ್ನ ಒಡವೆ ಕಿತ್ಕೊಂಡ್ರು’ ಅಂತ ಸಹಪ್ರಯಾಣಿಕನ ದೂರು!

    ಕೆಎಸ್ಆರ್​ಟಿಸಿಗೆ 60 ವರ್ಷ ಪೂರೈಸಿದ ಸಂಭ್ರಮ: ರಾಜಧಾನಿಯಲ್ಲಿ ಅದ್ಧೂರಿ ಆಚರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts