More

    ಐತಿಹಾಸಿಕ ಗೋಳಗುಮ್ಮಟದ ಒಳಗಿಂದ ಹಾರಿಹೋಯ್ತು ಪ್ರಾಣ!; ‘ಸೌಂದರ್ಯ’ ವೀಕ್ಷಿಸುತ್ತಲೇ ಬಿದ್ದ ಯುವತಿ

    ವಿಜಯಪುರ: ಐತಿಹಾಸಿಕ ಗೋಳಗುಮ್ಮಟದ ಒಳಗೆ ವೀಕ್ಷಣೆ ಮಾಡುತ್ತಿರುವಾಗಲೇ ಯುವತಿಯೊಬ್ಬಳು ಕೆಳಕ್ಕೆ ಬಿದ್ದಿದ್ದಾಳೆ. ಪರಿಣಾಮವಾಗಿ, ಗೋಳಗುಮ್ಮಟದೊಳಗಿಂದ ಪ್ರಾಣಪಕ್ಷಿ ಹಾರಿಹೋದಂತಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದ್ದು, ಬೆಂಗಳೂರಿನ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ.

    ಬೆಂಗಳೂರಿನ ಸೌಂದರ್ಯ (19) ಇಂದು ಮಧ್ಯಾಹ್ನ ಗೋಳಗುಮ್ಮಟದ ಒಳಗೆ ವೀಕ್ಷಣೆ ನಡೆಸುತ್ತಿದ್ದಾಗ ಈ ಪ್ರಕರಣ ನಡೆದಿದೆ. ಗೋಳಗುಮ್ಮಟ ವೀಕ್ಷಣೆಗಾಗಿ ಬಂದಿದ್ದ ಸೌಂದರ್ಯ, ಗುಮ್ಮಟದ ಗ್ಯಾಲರಿಯಲ್ಲಿ ಸುತ್ತಾಡಿದ್ದು ಒಳಭಾಗದಿಂದ ಕೆಳಗೆ ಬಿದ್ದು ಅಸುನೀಗಿದ್ದಾಳೆ.

    ಅವಘಡ ಹೇಗೆ ಸಂಭವಿಸಿತು ಎಂಬ ಬಗ್ಗೆ ನಿಖರವಾದ ಕಾರಣ ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಳಗುಮ್ಮಟ ಠಾಣೆ ಪೊಲೀಸರು ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಐತಿಹಾಸಿಕ ಗೋಳಗುಮ್ಮಟದ ಒಳಗಿಂದ ಹಾರಿಹೋಯ್ತು ಪ್ರಾಣ!; 'ಸೌಂದರ್ಯ' ವೀಕ್ಷಿಸುತ್ತಲೇ ಬಿದ್ದ ಯುವತಿ

    ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts