More

    ಹಾವು ಕಡಿತಕ್ಕೊಳಗಾದ ಬಾಲಕ ಹೆಬ್ಬಾವಿನ ತಲೆ ಮೇಲೆ ಕಾಲಿಟ್ಟು ನಿಂತ! ಮುಂದೇನಾಯ್ತು?

    ಮಂಗಳೂರು: ಹಾವು ಅಂದ್ರೆ ಸಾಕು ಓಡುವ ಜನರೇ ಹೆಚ್ಚು. ಇನ್ನು ಬೃಹತ್​ ಗಾತ್ರದ ಹಾವು ಕಂಡರೆ ಮುಗಿದೇ ಹೋಯ್ತು… ಜೀವ ಬಾಯಿಗೆ ಬಂದಂತೆ ಒದ್ದಾಡುತ್ತಾರೆ. ಅಂತಹದ್ದರಲ್ಲಿ ಇಲ್ಲೊಬ್ಬ ಬಾಲಕ ತನ್ನ ಕಾಲಿಗೆ ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಅದರ ತಲೆ ಮೇಲೆ ಕಾಲಿಟ್ಟು ಎಲ್ಲಿಗೂ ಹೋಗದಂತೆ ಕೆಲಕಾಲ ತಡೆದಿದ್ದಾನೆ!

    ಹೌದು, ಇಂತಹದ್ದೊಂದು ಘಟನೆ ಮಂಗಳೂರಿನ ಮಣ್ಣಗುಡ್ಡೆ ಬಳಿ ಅ.7ರಂದು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹಾವಿನಿಂದ ಕಡಿತಕ್ಕೆ ಒಳಗಾದದ್ದು ಮಣ್ಣಗುಡ್ಡೆ ಸಮೀಪದ ವಾದಿರಾಜ ನಗರದ ಬಿ. ಗೋಪಾಲ ಕೃಷ್ಣ ಪೈ ಅವರ ಪುತ್ರ ಸಂಕಲ್ಪ ಜಿ ಪೈ.

    ಹಾವು ಕಡಿತಕ್ಕೊಳಗಾದ ಬಾಲಕ ಹೆಬ್ಬಾವಿನ ತಲೆ ಮೇಲೆ ಕಾಲಿಟ್ಟು ನಿಂತ! ಮುಂದೇನಾಯ್ತು?ಬಾಲಕನೋರ್ವನಿಗೆ ಹೆಬ್ಬಾವು ಕಚ್ಚಿ ಗಾಯಗೊಳಿಸಿದರೂ ವಿಚಲಿತನಾಗದೆ ಕೂಡಲೇ ಅದರ ತಲೆಯ ಮೇಲೆ ಕಾಲಿಟ್ಟು, ನಂತರ ಹಿಡಿಯಲು ಸಹಾಯ ಮಾಡಿದ ಘಟನೆ ಮಂಗಳೂರಿನ ಮಣ್ಣಗುಡ್ಡೆ ಬಳಿ ನಡೆದಿದೆ.

    ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಮನೆ ಸಮೀಪದ ದೇವಸ್ಥಾನದಲ್ಲಿ ಪೂಜೆಗೆಂದು ಬಾಲಕ ಸಂಕಲ್ಪ ಹೋಗುತ್ತಿದ್ದ. ಈ ವೇಳೆ ಮನೆ ಹಿಂಭಾಗದ ಚರಂಡಿ ಬಳಿಯಿದ್ದ ಸುಮಾರು ಎರಡು ಮೀಟರ್​ ಉದ್ದದ ಹೆಬ್ಬಾವು ಈತನ ಕಾಲಿಗೆ ಬಾಯಿ ಹಾಕಿದೆ. ಕೂಡಲೇ ಇನ್ನೊಂದು ಕಾಲಿನಿಂದ ಹಾವಿನ ತಲೆ ಮೇಲೆ ಗಟ್ಟಿಯಾಗಿ ತುಳಿದ ಕಾರಣ ಹಾವು ಅಲ್ಲಿಯೇ ಇದ್ದ ಚರಂಡಿ ಪೈಪಿನ ಒಳಕ್ಕೆ ನುಗ್ಗಿತು. ಹಾವು.. ಹಾವು.. ಎಂದು ಆತ ಜೋರಾಗಿ ಚೀರಾಡುತ್ತಿದ್ದಂತೆ ಸ್ಥಳಕ್ಕೆ ಅಕ್ಕ ಪಕ್ಕದ ಜನರು ಬಂದರು. ಸ್ಥಳೀಯರು ಹಾವನ್ನು ಹಿಡಿದು ಪಿಲಿಕುಳ ನಿಸರ್ಗಧಾಮಕ್ಕೆ ಬಿಟ್ಟರು. ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಂಡಿದ್ದಾನೆ.

    ಬಸ್​ನಲ್ಲಿ ಒಂಟಿ ಮಹಿಳೆ ಪಕ್ಕದಲ್ಲಿ ಕೂರ್ತಾರೆ… ಕ್ಷಣಾರ್ಧದಲ್ಲಿ ಮಾಡಬಾರದ್ದನ್ನು ಮಾಡಿ ಎಸ್ಕೇಪ್ ಆಗ್ತಾರೆ ಹುಷಾರ್​​!

    ದೇವಸ್ಥಾನದ ಪೂಜಾರಿಗೆ ಬೆಂಕಿ ಇಟ್ಟು ಭೀಕರವಾಗಿ ಕೊಂದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts