More

    ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ 2024 ಯುವ ಸಾಧಕರಾದ ಶ್ರೀನಿಧಿ, ರಿಷಿಕಾ ಕುಂದೇಶ್ವರ್‌ಗೆ ಪ್ರದಾನ

    ಮಂಗಳೂರು: ಕಲ್ಬಾವಿ ಪ್ರತಿಷ್ಠಾನ ಮತ್ತು ರೋಟರಿ ಮಂಗಳೂರು ಸಿಟಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ 3ನೇ ವಾರ್ಷಿಕ ಪ್ರತಿಷ್ಠಿತ ರೋಟರಿ ಆನಂತಮಿತ್ರ ಕಲ್ಬಾವಿ ಯುವ ಸಾಧಕ ಪ್ರಶಸ್ತಿ-2024ನ್ನು ಯುವ ಸಾಧಕರಾದ ಶ್ರೀನಿಧಿ ಮತ್ತು ರಿಷಿಕಾ ಕುಂದೇಶ್ವರ್‌ಗೆ ಬುಧವಾರ ನಗರದಲ್ಲಿ ಪ್ರದಾನ ಮಾಡಲಾಯಿತು.


    ರೋಟರಿ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿಯವರು ಅವರ ಪೋಷಕರಾದ ದಿ.ಕಲ್ಬಾವಿ ಅನಂತ ಪದ್ಮನಾಭ ರಾವ್ ಹಾಗೂ ದಿ.ಸುಮಿತ್ರ ರಾವ್ ಸ್ಮರರ್ಣಾರ್ಥ ಈ ಪ್ರಶಸ್ತಿ ಪ್ರಾಯೋಜಿಸಿದ್ದಾರೆ. ಸಂಸ್ಥೆಯ ಯುವಜನ ಸೇವಾ ಯೋಜನೆಯ ಅಂಗವಾಗಿ ಮೊಬೈಲ್ ಶೈಕ್ಷಣಿಕ ಆ್ಯಪ್ ಶೋಧನೆ ಮಾಡಿದ ಶ್ರೀನಿಧಿ ಮತ್ತು ಉದಯೋನ್ಮುಖ ಮತ್ತು ಪ್ರತಿಭಾವಂತೆ ದೃಶ್ಯ ಮಾಧ್ಯಮ ನಾಟಕ ಕಲಾವಿದೆ ರಿಷಿಕಾ ಕುಂದೇಶ್ವರಿಗೆ ಅವರ ಸಾಧನೆಯನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ನಗದು ಬಹುಮಾನ 10,000 ರೂ. ಒಳಗೊಂಡಿದೆ ಎಂದರು.


    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಶಸ್ತಿಯ ಪ್ರಾಯೋಜಕ ರೋಟರಿ ಜಿಲ್ಲಾ ವೃತೀಪರ ಸೇವಾ ಯೋಜನೆಯ ಅಧ್ಯಕ್ಷ ರಾಜೇಂದ್ರ ಕಲ್ಬಾವಿಯವರು ಪ್ರಶಸ್ತಿ ಪ್ರದಾನ ಮಾಡಿ, ಅವರ ಪ್ರತಿಭೆ ಮತ್ತು ಸಾಧನೆಯನ್ನು ಪ್ರಶಂಶಿಸಿ, ಉಜ್ವಲ ಭವಿಷ್ಯ ಹಾರೈಸಿದರು.


    ರೋಟರಿ ಸಂಸ್ಥೆಯ ಸ್ಥಾಪನಾ ಅಧ್ಯಕ್ಷ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ರಂಜನ್ ರಾವ್ ಅವರು ಪ್ರಶಸ್ತಿ ವಿಜೇತರ ಪರಿಚಯ, ಪ್ರತಿಭೆ ಮತ್ತು ಅವರು ಸಾಧಿಸಿದ ಗಮನಾರ್ಹ ಸಾಧನೆಯ ಗುಣಗಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಪ್ರತಿಕ್ರಿಯಿಸಿದ ಪ್ರಶಸ್ತಿ ವಿಜೇತರು ರೋಟರಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.


    ವೇದಿಕೆಯಲ್ಲಿ ರೋಟರಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕಾರದ ಸುಮಿತ್ ರಾವ್ ಮತ್ತು ಯುವಜನ ಸೇವಾ ಸಂಸ್ಥೆಯ ನಿರ್ದೇಶಿಕಿ ಸರಿತಾ ಡಿಸೋಜ, ಚುನಾಯಿತ ಕಾರ್ಯದರ್ಶಿ ಸುದೇಶ್ ಉಪಸ್ಥಿರತಿದ್ದರು. ಕಾರ್ಯದರ್ಶಿ ಗಣೇಶ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts