More

    ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

    ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡ ವಿಚಾರಣೆ ಆಗಮಿಸುವ ವೇಳೆ ಅಳುತ್ತಿದ್ದುದು ಕಂಡು ಬಂದರೆ, ಅತ್ತ ಮೃತ ಯೋಗೀಶ್​ ಗೌಡ ಅವರ ಪತ್ನಿ ಮಲ್ಲಮ್ಮ ಸತತ ವಿಚಾರಣೆ ಎದುರಿಸಿದರೂ ನಗುನಗುತ್ತಲೇ ಸಿಬಿಐ ಕಚೇರಿಯಿಂದ ಹೊರಬಂದರು.

    ಇಂದು ಬೆಳಗ್ಗೆ ಗದಗದಲ್ಲಿ ಬಂಧನಕ್ಕೆ ಒಳಗಾದ ಸೋಮು ನ್ಯಾಮಗೌಡರನ್ನು ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಲಯ ಒಂದು ದಿನದ ಮಟ್ಟಿಗೆ ಸಿಬಿಐ ವಶಕ್ಕೆ ನೀಡಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡರನ್ನು ಇಂದು ಧಾರವಾಡ ಉಪನಗರ ಠಾಣೆಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

    ಇದನ್ನೂ ಓದಿ: ಚಲನ್ ತಿದ್ದಿ ಸರ್ಕಾರಕ್ಕೆ ನಷ್ಟ ಮಾಡಿದ್ದ ಐವರು ಸಬ್ ರಿಜಿಸ್ಟ್ರಾರ್ ಸೇರಿ 9 ಮಂದಿ ಸೇವೆಯಿಂದ ವಜಾ

    ಕೋವಿಡ್ ಪಾಸಿಟಿವ್: ಇಂದು ಬೆಳಗ್ಗೆ ಸೋಮು ನ್ಯಾಮಗೌಡರನ್ನು ಬಂಧಿಸಿದ ಬಳಿಕ, ಸಿಬಿಐ ಅಧಿಕಾರಿಗಳು ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಪರೀಕ್ಷೆಗೆ ಒಳಪಡಿಸಿದ್ದು, ಕೋವಿಡ್​-19 ಪಾಸಿಟಿವ್ ಎಂಬುದು ದೃಢಪಟ್ಟಿದೆ.

    ಮೂರು ಗಂಟೆ ವಿಚಾರಣೆ: ಇನ್ನೊಂದೆಡೆ ಮೃತ ಯೋಗೀಶ್​ ಗೌಡ ಅವರ ಪತ್ನಿ ಮಲ್ಲಮ್ಮ ಧಾರವಾಡ ಉಪನಗರ ಠಾಣೆಯಲ್ಲೇ ಸಿಬಿಐ ವಿಚಾರಣೆ ಎದುರಿಸಿದರು. ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದರೂ ಅವರು ನಗುನಗುತ್ತಲೇ ವಿಚಾರಣಾ ಸ್ಥಳದಿಂದ ಹೊರಬಂದಿದ್ದಾರೆ. ನನ್ನ ಪತಿಯ ಘಟನೆಯ ವಿಷಯವನ್ನಷ್ಟೇ ಕೇಳಿದ್ದಾರೆ, ಅದನ್ನು ಬಿಟ್ಟು ಬೇರೇನೂ ಕೇಳಿಲ್ಲ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಲ್ಲಮ್ಮ, ವಿಚಾರಣೆಯ ಕುರಿತಂತೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿಲ್ಲ.

    ಕರ್ನಾಟಕದ ‘ಸಿಂಗಂ’ ಕೆ. ಅಣ್ಣಾಮಲೈ ಈಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ

    ಗಂಡ ಮಲಗಿದ್ದಾಗಲೇ ಮನೆಯೊಳಗೆ ನಡೆಯಿತು ದುರಂತ; ಬಾಗಿಲು ಒಡೆದು ಕೋಣೆಗೆ ಹೊಕ್ಕವನಿಗೆ ತೀವ್ರ ಆಘಾತ!

    ಮುಂಬರುವ ಈ ತಿಂಗಳಲ್ಲಿ ಎಚ್ಚರಿಕೆಯಿಂದಿರಿ: ಕರೊನಾ ಮೂರನೇ ಅಲೆ ಬಗ್ಗೆ ಹೊರಬಿತ್ತು ಆತಂಕಕಾರಿ ಅಂಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts