More

    ಮೊಬೈಲ್​ಫೋನ್ ಬೆಲೆ 12 ಸಾವಿರ, ರುದ್ರಾಕ್ಷಿ ಹಾರ 20 ಸಾವಿರ ರೂ.: ಯೋಗಿ ಆದಿತ್ಯನಾಥ್​ ಆಸ್ತಿ ಘೋಷಣೆ

    ನವದೆಹಲಿ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು ಗೋರಖಪುರ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗೋರಖಪುರ ಲೋಕಸಭಾ ಕ್ಷೇತ್ರದಿಂದ ಐದು ಸಲ ಸ್ಪರ್ಧಿಸಿರುವ ಯೋಗಿ ಇದೇ ಮೊದಲ ಸಲ ಗೋರಖಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

    ಮಾರ್ಚ್​ 3ರಂದು ನಡೆಯಲಿರುವ ಉತ್ತರಪ್ರದೇಶದ ಆರನೇ ಹಂತದ ಚುನಾವಣೆಯಲ್ಲಿ ಅವರು ಗೋರಖಪುರ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಇಂದು ನಾಮಪತ್ರ ಸಲ್ಲಿಸಿದರು. ತಮ್ಮ ಬಳಿ ಒಟ್ಟು 1,54,94,054 ರೂ. ಮೊತ್ತದ ಆಸ್ತಿ ಇರುವುದಾಗಿ ಈ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

    ಆರು ಬ್ಯಾಂಕ್​ ಖಾತೆಗಳಲ್ಲಿರುವ ನಗದು ಹಾಗೂ ಉಳಿತಾಯ ಸೇರಿ ತಮ್ಮ ಬಳಿ ಇರುವ ಇತರ ಬೆಲೆಬಾಳುವ ವಸ್ತುಗಳ ಮೌಲ್ಯವನ್ನೂ ಅವರು ಇದರಲ್ಲಿ ಸೇರಿಸಿದ್ದಾರೆ. ತಮ್ಮ ಬಳಿ 12 ಸಾವಿರ ರೂ. ಮೌಲ್ಯದ ಸ್ಯಾಮ್ಸಂಗ್ ಮೊಬೈಲ್​ಫೋನ್, 1 ಲಕ್ಷ ರೂ. ಮೌಲ್ಯದ ರಿವಾಲ್ವರ್​, 80 ಸಾವಿರ ರೂ. ಮೌಲ್ಯದ ರೈಫಲ್ ಇರುವುದಾಗಿ ತಿಳಿಸಿದ್ದಾರೆ.

    ಅಲ್ಲದೆ ಕಿವಿಯೋಲೆ 20 ಗ್ರಾಂ ತೂಕವಿದ್ದು, ಇದರ ಮೌಲ್ಯ 49 ಸಾವಿರ ರೂ., ಕತ್ತಿನಲ್ಲಿರುವ ರುದ್ರಾಕ್ಷಿ ಹಾರ 10 ಗ್ರಾಂ ತೂಕವಿದ್ದು, ಅದರ ಮೌಲ್ಯ 20 ಸಾವಿರ ರೂಪಾಯಿ. ಇನ್ನು ತಮ್ಮ ವಾರ್ಷಿಕ ಆದಾಯ 2020-21ನೇ ಸಾಲಿನಲ್ಲಿ 13,20,653 ರೂ., 2019-20ನೇ ಸಾಲಿನಲ್ಲಿ 15,68,799 ರೂ., 2018-19ನೇ ಸಾಲಿನಲ್ಲಿ 18,27,639 ರೂ. ಮತ್ತು 2017-18ನೇ ಸಾಲಿನಲ್ಲಿ 14,38,670 ರೂ. ಆಗಿತ್ತು ಎಂದು ಘೋಷಿಸಿಕೊಂಡಿದ್ದಾರೆ.

    ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರ ಜಾತ್ರೆಗೆ ಸಾರ್ವಜನಿಕರಿಗಿಲ್ಲ ಪ್ರವೇಶ: ರಥೋತ್ಸವಕ್ಕೆ ಕರೊನಾ ಕರಿಛಾಯೆ

    ಮದ್ಯದ ಜತೆ ವಿಷ ಬೆರೆಸಿಕೊಂಡು ಆತ್ಮಹತ್ಯೆ: ಪತ್ನಿಯ ಮನೆಯಲ್ಲೇ ವಾಸವಿದ್ದ ಪತಿ, ಕೌಟುಂಬಿಕ ಕಲಹದಿಂದ ನೊಂದು ಸಾವಿಗೆ ಶರಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts