More

    ಗುಮ್ಮಟನಗರಿಯಲ್ಲಿ ಕುತೂಹಲಕಾರಿ ಬೆಳವಣಿಗೆ; ಶಾಸಕ ಯತ್ನಾಳರಿಗೆ ಜತೆಯಾಗಿ ನಿಲ್ಲುವೆ ಎಂದ ಸಿ.ಪಿ.ಯೋಗೀಶ್ವರ್

    ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಜೊತೆಗೆ ನಾನು ಸದಾಕಾಲ ಇರುತ್ತೇನೆ. ಅವರ ಧ್ವನಿಗೆ ಧ್ವನಿಯಾಗಿ ಸದಾ ನಿಲ್ಲುವೆ. ಮುಂದಿನ ದಿನಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಅವರಿಗೆ ಒಳ್ಳೆಯ ಅವಕಾಶ ಬರಲಿ. ಅವರ ಸ್ನೇಹಿತನಾಗಿ ಮಾನಸಿಕ ಸ್ಥೈರ್ಯ ತುಂಬುವುದರ ಜೊತೆಗೆ ಅವರೊಂದಿಗೆ ಇರುವೆ. ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಉತ್ತಮ ಅವಕಾಶ ನೀಡುವ ಆಶಾ ಭಾವನೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ ತಿಳಿಸಿದರು.

    ಮಂಗಳವಾರ ಗುಮ್ಮಟ ನಗರಿಯ ಐತಿಹಾಸಿಕ ಭೂತನಾಳ ಕೆರೆ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಲಾಗಿರುವ ತ್ರೀಸ್ಟಾರ್ ಹೋಟೆಲ್ ಉದ್ಘಾಟನೆ ಹಾಗೂ ಪಾರಂಪರಿಕ ಕಟ್ಟಡ ಸಂರಕ್ಷಣಾ ಕಾಮಗಾರಿಗೆ ಚಾಲನೆ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

    ಇದನ್ನೂ ಓದಿ: ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ

    ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪಕ್ಷದ ಪ್ರಮುಖರು ಯಾರೂ ಸ್ವಾಗತಿಸಲಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದರಲ್ಲಿ ಏನೂ ರಾಜಕೀಯ ಇಲ್ಲ. ಕರೊನಾ ಕಾರಣಕ್ಕೆ ಯಾರಿಗೂ ಮಾಹಿತಿ ಕೊಟ್ಟಿರಲಿಲ್ಲ. ಹಾಗಾಗಿ ಯಾರೂ ಬಂದಿರಲಿಲ್ಲ. ಇದರಲ್ಲಿ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಿಎಂ ವಿರುದ್ಧ ರೆಬೆಲ್ ಆದೆ ಅನ್ನೋ ಕಾರಣಕ್ಕೆ ಈ ರೀತಿ ಏನಾಗಿಲ್ಲ ಎಂದರು.

    ಕುತೂಹಲ ಮೂಡಿಸಿದ ಭೇಟಿ: ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪಣ ತೊಟ್ಟಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಸಚಿವ ಸಿ.ಪಿ. ಯೋಗೀಶ್ವರ ಭೇಟಿ ತೀವ್ರ ಕುತೂಹಲ ಮೂಡಿಸಿತು. ಇವರೊಂದಿಗೆ ನಟಿ ಶ್ರುತಿ ಕೂಡ ಕಾಣಿಸಿಕೊಂಡಿದ್ದು ಮತ್ತಷ್ಟು ಕುತೂಹಲ ಹೆಚ್ಚಿಸಿತು.

    ಇದನ್ನೂ ಓದಿ: ಪ್ರಿಯಕರನ ಮೇಲಿನ ಸಿಟ್ಟಿಗೆ ಆತನ ಬೈಕಿಗೇ ಕಿಚ್ಚಿಟ್ಟಳು; ಧಗಧಗನೆ ಹೊತ್ತಿ ಉರಿಯಿತು ಅವಳೇ ಕೊಟ್ಟಿದ್ದ ದುಬಾರಿ ಗಿಫ್ಟ್​!

    ನಗರದ ಖಾಸಗಿ ಹೋಟೆಲ್‌ಗೆ ಬಂದಿಳಿದಿದ್ದ ಸಚಿವ ಸಿ.ಪಿ. ಯೋಗೀಶ್ವರ ಅವರನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಖುದ್ದಾಗಿ ಹೋಗಿ ಕರೆದುಕೊಂಡು ಬಂದರು. ವೇದಿಕೆ ಮೇಲೆ ನಟಿ ಶ್ರುತಿ ಸಹ ಕಾಣಿಸಿಕೊಂಡರು. ಇವರ ಹೊರತಾಗಿ ಜಿಲ್ಲೆಯ ಬಿಜೆಪಿಯ ಪ್ರಮುಖ ನಾಯಕರು ಕಾಣಿಸಿಕೊಳ್ಳದಿರುವುದು ಗಮನಾರ್ಹ. ಸಚಿವರ ಆಗಮನ ಸುದ್ದಿ ಬಿಜೆಪಿ ಕಾರ್ಯಕರ್ತರಿಗೆ, ಪ್ರಮುಖ ನಾಯಕರಿಗೆ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲ. ಕಾರ್ಯಕ್ರಮಕ್ಕೂ ಆಹ್ವಾನಿಸಿಲ್ಲವೆಂಬ ಆರೋಪ ಕೇಳಿ ಬಂದವು.

    ಈ ಕರೊನಾ ಸಂಕಷ್ಟದಲ್ಲೂ 70 ಲಕ್ಷ ರೂ. ಲಾಟರಿ ಹೊಡೆದರೆ ಹೇಗಿರುತ್ತೆ!?; ಬಂಪರ್ ಪ್ರೈಜ್​ ಮಾಹಿತಿ ಇಲ್ಲಿದೆ…

    ಮುಸ್ಲಿಮರಲ್ಲಿನ ಬಡತನ-ಅನಕ್ಷರತೆ ಹೋಗಲಾಡಿಸಲು ‘ಅದನ್ನು ಪಾಲಿಸಿ’ ಎಂದರು ಅಸ್ಸಾಂ ಸಿಎಂ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts