More

    ಯೋಗ ನಮ್ಮ ದೇಶದ ಹಿರಿಮೆ:ಡಾ.ವಿಜಯಮಹಾಂತೇಶ ದಾನಮ್ಮನವರ

    ವಿಜಯಪುರ: ಯೋಗವು ನಮ್ಮ ದೇಶದ ಪರಂಪರೆ, ಸಂಸ್ಕೃತಿ ಮತ್ತು ಹಿರಿಮೆಯಾಗಿದೆ. ಪುರಾತನ ಕಾಲದಿಂದಲೂ ಯೋಗ ಪದ್ಧತಿಯನ್ನು ಅಳವಡಿಸಿಕೊಂಡು ಬಂದಿದ್ದೇವೆ. ಯೋಗ ಮಾಡುತ್ತಿದ್ದ ಋಷಿಮುನಿಗಳು ಶತಾಯುಷಿಗಳಾಗಿ ಬದುಕಿ ನಮಗೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಮತೇಶ ದಾನಮ್ಮನವರ ಹೇಳಿದರು.
    ನಗರದ ಡಾ.ಬಿ.ಎನ್.ಎಂ ಆಯುರ್ವೇದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮಹತ್ವದ ಕಾರ್ಯಕ್ರಮ ಯೋಗಥಾನ್-2022ಗೆ ಚಾಲನೆ ನೀಡಿ ಮಾತನಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗವನ್ನು ಹೆಚ್ಚು ಪ್ರಚಲಿತಗೊಳಿಸುವ ಪ್ರಯತ್ನ 2015ರಿಂದ ಆರಂಭಗೊಂಡಿತು. ನಮ್ಮ ದೇಶದ ಪ್ರಧಾನಮಂತ್ರಿಗಳ ಆಶಯದಂತೆ, ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಮಾಡುವ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಎಲ್ಲ ದೇಶಗಳು ಸಹಮತಿ ಸೂಚಿಸಿದ್ದರಿಂದ 2015ರಿಂದ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುತ್ತ ಬಂದಿದ್ದೇವೆ ಎಂದರು..

    ಯೋಗಥಾನ್ ಕಾರ್ಯಕ್ರಮವನ್ನು ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ನಡೆಸಲು ಕೇಂದ್ರ ಸರ್ಕಾರವು ನಿರ್ದೇಶನ ನೀಡಿತ್ತು. ಅಂತೆಯೇ ರಾಜ್ಯದ ನಾಲ್ಕು ಸ್ಥಳಗಳ ಪೈಕಿ ವಿಜಯಪುರ ಒಂದಾಗಿತ್ತು ಎಂಬುದು ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ. ಯೋಗದಲ್ಲಿ ಜನತೆಯನ್ನು ಸೇರಿಸಲು ಜಿಲ್ಲೆಗೆ ನಿಗದಿಪಡಿಸಿದ ಗುರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಸೇರಿಸಿ ಯಶಸ್ವಿಗೊಳಿಸಿದ್ದೇವೆ ಎಂದು ತಿಳಿಸಿದರು.

    ಆಗಸ್ಟ್ 27ರಂದು ಲಿಮ್ಕಾ ಬುಕ್ ಆ್ ರೆಕಾರ್ಡ್ ಮತ್ತು ಆಗಸ್ಟ್ 28ರಂದು ಗಿನ್ನಿಸ್ ಬುಕ್ ಆ್ ರೆಕಾರ್ಡ್ ಎರಡು ಬೃಹತ್ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರದ ಚಿಂತನೆಯ ಮೇರೆಗೆ ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಸಭೆ ನಡೆಸಿ ಸಿದ್ಧತೆ ನಡೆಸಿದ್ದೇವೆ. ಈಗಾಗಲೇ ಸೂಚನೆ ನೀಡಿದ್ದಂತೆ ಪ್ರತಿ ಭಾನುವಾರ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ನಾನಾ ಪ್ರಕಾರದ ಯೋಗಗಳ ಬಗ್ಗೆ ತಿಳಿಸುವ, ತರಬೇತಿಗಳು ನಡೆಯುತ್ತಿವೆ ಎಂದರು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಅನುರಾಧ ಎಲ್. ಚಂಚಲಕರ, ಸೈನಿಕ ಕಾಲೇಜಿನ ಪ್ರಾಚಾರ್ಯೆ ಕ್ಯಾಪ್ಟನ್ ಪ್ರತಿಭಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ, ಎನ್‌ಎಸ್‌ಎಸ್ ಅಧಿಕಾರಿ ಡಾ.ಬಿ.ಎಂ.ಕುರುಬು, ಶ್ರೀನಿವಾಸ ಗುರುಬಲ, ಯೋಗ ಶಿಕ್ಷಕಿ ಲಕ್ಷ್ಮಿ ತದಳಗಿ, ನಾಗೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಬಿ.ನಾಗೂರ (ಬಾಬು), ಪ್ರಾಧ್ಯಾಪಕ ಡಾ.ಶರಣಬಸವೇಶ್ವರ ನುಚ್ಚಿ ಸೇರಿದಂತೆ ಕಾರ್ಯಕ್ರಮದಲ್ಲಿ 800ಕ್ಕಿಂತ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts