More

    ಯೋಗರಾಜ್ ಭಟ್​ಗೆ ಸನ್ಮಾನ

    ಹಾನಗಲ್ಲ: ಮುಂಗಾರು ಮಳೆ ಖ್ಯಾತಿಯ ನಿರ್ದೇಶಕ ಯೋಗರಾಜ್ ಭಟ್ ಅವರನ್ನು ವಕೀಲರ ಸಂಘದಿಂದ ಪಟ್ಟಣದಲ್ಲಿ ಗುರುವಾರ ಸನ್ಮಾನಿಸಲಾಯಿತು.

    ಸ್ವಗ್ರಾಮ ತಾಲೂಕಿನ ತಿಳವಳ್ಳಿಗೆ ಭೇಟಿ ನೀಡಿದ್ದ ನಿರ್ದೇಶಕ ಯೋಗರಾಜ್ ಭಟ್, ಪಟ್ಟಣದ ನ್ಯಾಯಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗರಾಜ್ ಭಟ್, ಗ್ರಾಮೀಣ ಪ್ರದೇಶದ ಬದುಕಿನ ಅನುಭವಗಳು ಹಾಗೂ ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿಗಳನ್ನು ನನ್ನ ಸಾಹಿತ್ಯದಲ್ಲಿ ಬಳಸಿಕೊಂಡಿದ್ದು ಯಶಸ್ಸಿಗೆ ಕಾರಣವಾಯಿತು. ಇಲ್ಲಿನ ಭಾಷೆ ಒರಟಾಗಿದ್ದರೂ ಆತ್ಮೀಯತೆಯಿದೆ. ಇಲ್ಲಿನ ಜನರ ಸಂಬಂಧ-ಸಂಪರ್ಕಗಳು ಶಹರಗಳಲ್ಲಿ ಕಂಡುಬರುವುದಿಲ್ಲ. ಈ ಪರಿಸರದಲ್ಲಿ ನಾನು ಬೆಳೆದ ಕ್ಷಣಗಳನ್ನು ಸದಾ ಮೆಲುಕು ಹಾಕುತ್ತೇನೆ. ಅವುಗಳನ್ನೇ ಲೇಖನಿಯ ಮೂಲಕ ಹಾಡುಗಳಲ್ಲಿ, ಸಿನಿಮಾ ಸಾಹಿತ್ಯ ರಚನೆಯಲ್ಲಿ ಅಳವಡಿಸುತ್ತಿದ್ದೇನೆ. ಈ ಭಾಗದಲ್ಲಿ ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಲು ಆಸಕ್ತಿ ಹೊಂದಿದ್ದೇನೆ. ಹಲವು ಏಳು-ಬೀಳುಗಳ ನಂತರ ಚಲನಚಿತ್ರ ಕ್ಷೇತ್ರದಲ್ಲಿ ಕೈಗೊಂಡ ನನ್ನ ಸಾಧನೆ ಹಾಗೂ ಸಂದ ಗೌರವಗಳು ಈ ತಾಲೂಕಿನ ಜನತೆಗೆ ಸಲ್ಲುತ್ತದೆ ಎಂದರು.

    ವಕೀಲರ ಸಂಘದ ಅಧ್ಯಕ್ಷ ಸೋಮಶೇಖರ ಕೋತಂಬರಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಯೋಗರಾಜ್ ಭಟ್ ಅವರು ಇಂಥ ಪ್ರತಿಭೆ ಗುರುತಿಸಿ ತಮ್ಮ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

    ಹಿರಿಯ ವಕೀಲರಾದ ರವಿ ವಡೆಯರ, ಕೆ.ಬಿ. ದೊಡ್ಡಮನಿ, ಜಿ.ವಿ. ಕಂಬಾಳಿಮಠ, ರಾಜು ಗೌಳಿ, ಜಗದೀಶ ಕೊಂಡೋಜಿ, ವಿನಾಯಕ ಕುರುಬರ, ಎ.ವಿ. ವಿಭೂತಿ, ರವಿರಾಜ ಕಲಾಲ, ಪ್ರಶಾಂತ ಕಾಮನಹಳ್ಳಿ, ಸಂತೋಷ ಯತ್ನಳ್ಳಿ, ಗಿರೀಶ ಚಲುವಾದಿ, ಎಂ.ಎಸ್. ಕಾಳಂಗಿ, ಎಸ್.ಸಿ. ಬೈಲಣ್ಣನವರ, ಸಚಿನ್ ತಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts