More

    ಬೃಹತ್ ಯೋಗ ಶಿಬಿರಕ್ಕೆ ಸಜ್ಜಾಗುತ್ತಿದೆ ವಾಣಿಜ್ಯ ನಗರಿ

    ಬೃಹತ್ ಯೋಗ ಶಿಬಿರಕ್ಕೆ ಸಜ್ಜಾಗುತ್ತಿದೆ ವಾಣಿಜ್ಯ ನಗರಿಹುಬ್ಬಳ್ಳಿ: ಬೃಹತ್ ಯೋಗಶಿಬಿರಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸಜ್ಜಾಗುತ್ತಿದ್ದು, ಖ್ಯಾತ ಯೋಗ ಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ನಡೆಯುವ ಶಿಬಿರಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

    ಜ.30ರಿಂದ ಫೆ.3ರವರೆಗೆ ಕೇಶ್ವಾಪುರದ ರೈಲ್ವೆ ಮೈದಾನದಲ್ಲಿ ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ಉಚಿತವಾಗಿ ಬೃಹತ್ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರ ನಡೆಯಲಿದೆ.

    ದಶಕದ ಹಿಂದೆ ವಿಆರ್​ಎಲ್ ಸಮೂಹ ಸಂಸ್ಥೆ ರಾಜ್ಯದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಬಾಬಾ ರಾಮದೇವ್ ಅವರ ಯೋಗ ಶಿಬಿರ ಏರ್ಪಡಿಸಿದ್ದಾಗ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು. ನಿತ್ಯ 10 ಸಾವಿರಕ್ಕೂ ಅಧಿಕ ಜನ ಭಾಗವಹಿಸುವುದರೊಂದಿಗೆ ಶಿಬಿರ ಯಶಸ್ಸು ಕಂಡಿತ್ತು. ಈಗ ಮತ್ತೊಮ್ಮೆ ಅಂಥ ಸದವಕಾಶ ಯೋಗಾಸಕ್ತರಿಗೆ ಲಭಿಸಿದೆ.

    ಯೋಗ ಗುರುಗಳು ತರಬೇತಿ ನೀಡುವ ಬೇಸಿಕ್ ಯೋಗ, ಉನ್ನತ ಯೋಗ ತರಬೇತಿ, ಆಯುರ್ವೆದ, ಮನೆ ಮದ್ದು, ಔಷಧಗಳು, ಅತ್ಯುತ್ತಮ ದೇಸೀ ಆಹಾರ ಪದ್ಧತಿ, ಅಕ್ಯುಪ್ರೆಷರ್, ಬೊಜ್ಜು ನಿವಾರಣೆ, ಸಹಜ ಸಮಾಧಿ ಸ್ಥಿತಿ, ಕುಂಡಲಿನಿ ಜಾಗರಣ, ಅಷ್ಟಾಂಗ ಯೋಗ, ಕ್ರಿಯಾ ಯೋಗಗಳು ಶಿಬಿರಾರ್ಥಿಗಳಿಗೆಲ್ಲ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗಲಿವೆ. ಮಧುಮೇಹ, ರಕ್ತದೊತ್ತಡ ಮೊದಲಾದ ಸಮಸ್ಯೆ ಇದ್ದವರಿಗೆ, ಮನೋದೈಹಿಕ ಕಾಯಿಲೆ ಬಂದಿರುವವರಿಗೆ ರೋಗವನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಂಡು ಶಾರೀರಿಕ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳಲು ಪೂರಕವಾಗಿವೆ. ವಿದೇಶಿ ಯೋಗ ಶಿಕ್ಷಕರು, ಯೋಗಾಸಕ್ತರು ಸಹ ಭಾಗವಹಿಸಲಿದ್ದಾರೆ.

    ಯೋಗ ಶಿಬಿರದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ತುಂಬೆಲ್ಲ ಈಗಾಗಲೆ ಪ್ರಚಾರ ಜಾಥಾ, ಪೂರ್ವಭಾವಿಯಾಗಿ ಯೋಗ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಈಗಾಗಲೆ ಹುಬ್ಬಳ್ಳಿಗೆ ಬಂದಿರುವ ನೂರಾರು ಯೋಗ ಶಿಕ್ಷಕರು ಸ್ಥಳೀಯರೊಂದಿಗೆ ಸೇರಿ ಶಿಬಿರದ ಯಶಸ್ಸಿಗಾಗಿ ಹಗಲಿರುಳೂ ದುಡಿಯುತ್ತಿದ್ದಾರೆ. ಪತಂಜಲಿ ಕರ್ನಾಟಕ ಉಸ್ತುವಾರಿ ಭವರಲಾಲ್ ಆರ್ಯ ನೇತೃತ್ವದಲ್ಲಿ ವಿವಿಧೆಡೆ ಪ್ರಾಥಮಿಕ ಶಿಬಿರ ನಡೆಸಿ, ಯೋಗದ ಮಹತ್ವ ತಿಳಿಸಿಕೊಟ್ಟು ಹೆಚ್ಚು ಜನರು ಬೃಹತ್ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದಾರೆ. ನೈಋತ್ಯ ರೈಲ್ವೆ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪ್ರಮುಖ ಜನಪ್ರತಿನಿಧಿಗಳು, ಸಮಾಜದ ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಸೇರಿ ಹಲವರನ್ನು ಖá-ದ್ದು ಭೇಟಿಯಾಗಿ ಮಾಹಿತಿ ನೀಡಿ ಆಹ್ವಾನಿಸುತ್ತಿದ್ದಾರೆ.

    ನಿತ್ಯವೂ ಬೆಳಗ್ಗೆ ಅವಳಿ ನಗರದ ಒಂದಲ್ಲ ಒಂದು ಉದ್ಯಾನಕ್ಕೆ ತೆರಳುವ ಪತಂಜಲಿ ಕಾರ್ಯಕರ್ತರು, ವಾಯು ವಿಹಾರಕ್ಕೆ ಬರುವವರನ್ನು ಭೇಟಿಯಾಗಿ ಶಿಬಿರಕ್ಕೆ ಆಮಂತ್ರಿಸುತ್ತಿದ್ದಾರೆ.

    ವಿಆರ್​ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್, ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’, ‘ದಿಗ್ವಿಜಯ 247 ನ್ಯೂಸ್ ಚಾನೆಲ್’, ‘ಪವರ್ ನ್ಯೂಸ್ ಆಪ್’ ಈ ಶಿಬಿರದ ಸಹಭಾಗಿತ್ವ ವಹಿಸಿವೆ. ಆಸಕ್ತರು ಹೆಚ್ಚಿನ ಮಾಹಿತಿ ಹಾಗೂ ಹೆಸರು ನೋಂದಣಿಗಾಗಿ ಪತಂಜಲಿ ರಾಜ್ಯ ಕಚೇರಿ, 6/22 ಆಜಾದ್ ಕಾಲನಿ, ಕೇಶ್ವಾಪುರ ಹಬ್ಬಳ್ಳಿ-580023 ಅಥವಾ ದೂ.ಸಂ. 0836-2254414, ಮೊಬೈಲ್ ಸಂ. 9008100879/80/99/96ಗೆ ಸಂರ್ಪಸಬಹುದು.

    ದಿಗ್ವಿಜಯದಲ್ಲಿ ನೇರ ಪ್ರಸಾರ

    ಯೋಗ ಗುರು ರಾಮದೇವ್ ಶಿಬಿರದ ಕ್ಷಣಗಳನ್ನು ದಿಗ್ವಿಜಯ ನ್ಯೂಸ್ ಚಾನಲ್ ನೇರ ಪ್ರಸಾರ ಮಾಡಲಿದೆ. ಜ.30 ರಿಂದ ಫೆ.3ರವರೆಗೆ ಬೆಳಗ್ಗೆ 5 ಗಂಟೆಯಿಂದ 7.30ರವರೆಗೆ ದಿಗ್ವಿಜಯದಲ್ಲಿ ನೇರ ಪ್ರಸಾರವಾಗಲಿದೆ. ರೈಲ್ವೆ ಮೈದಾನದಲ್ಲಿ ಹತ್ತು ಸಾವಿರಕ್ಕೂ ಅಧಿಕ ಯೋಗಾಸಕ್ತರು ಯೋಗದ ವಿವಿಧ ಆಸನಗಳನ್ನು ಮಾಡಲಿದ್ದಾರೆ. ಬಾಬಾ ರಾಮದೇವ್ ಮಾರ್ಗದರ್ಶನ ನೀಡುವರು.

    ನೇತೃತ್ವ: ಬಾಬಾ ರಾಮದೇವ್

    ಶಿಬಿರ ಸ್ಥಳ: ರೈಲ್ವೆ ಮೈದಾನ, ಕೇಶ್ವಾಪುರ, ಹುಬ್ಬಳ್ಳಿ

    ಯಾವಾಗ: ಜ. 30ರಿಂದ ಫೆ. 3ರವರೆಗೆ

    ಸಮಯ: ಬೆಳಗಿನ ಜಾವ 5 ಗಂಟೆಯಿಂದ 7.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts