More

    ಒತ್ತಡ ನಿವಾರಣೆಗೆ ಯೋಗ ಸಹಕಾರಿ

    ಸಾಗರ: ಯೋಗ ಬರೇ ವ್ಯಾಯಾಮವಲ್ಲ ಅದು ಮಾನಸಿಕ ನೆಮ್ಮದಿ ನೀಡುತ್ತದೆ. ಪ್ರತಿಯೊಬ್ಬರೂ ಯೋಗ್ಯಾಭ್ಯಾಸ ಮಾಡಿ ಯೋಗದಲ್ಲಿ ಸಾಧನೆ ಮಾಡಿ ಎಂದು ಆಯುಷ್ ಆರೋಗ್ಯ ಕೇಂದ್ರದ ವೈದ್ಯಾಽಕಾರಿ ಡಾ.ಪತಂಜಲಿ ಹೇಳಿದರು.

    ಸೋಮವಾರ ಸಾಗರದ ಲಯನ್ಸ್ ಸೇವಾ ಮಂದಿರದಲ್ಲಿ ಜೈ ಗುರುದೇವ ಯೋಗ ಕೇಂದ್ರದ ೨೦ನೇ ವಾರ್ಷಿಕೋತ್ಸವದಲ್ಲಿ ಯೋಗ ಕೇಂದ್ರ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ದೈಹಿಕ, ಶ್ರಮದ ಕೆಲಸ ಮಾಡುವವರು ಯೋಗ ಮತ್ತು ಪ್ರಾಣಾಯಾಮ ಮಾಡಬೇಕು. ೫೦ ವರ್ಷ ಮೇಲ್ಪಟ್ಟವರು ಯೋಗದ ಜತೆಗೆ ನಡೆಯಬೇಕು. ದಣಿದ ದೇಹಕ್ಕೆ ವಿಶ್ರಾಂತಿ ಬೇಕು. ಸಣ್ಣ ವಯಸ್ಸಿನವರಿಗೆ ಜಿಮ್, ಹೆಣ್ಣು ಮಕ್ಕಳಿಗೆ ನೃತ್ಯ, ಭರತನಾಟ್ಯಕ್ಕೆ ಕಳಿಸಿದರೆ ಮಾಂಸಖAಡಗಳಿಗೆ ಶಕ್ತಿ ತುಂಬಿ ದೇಹದ ಬೆಳವಣಿಗೆಯಾಗುತ್ತದೆ. ಈ ವಯಸ್ಸಿನಲ್ಲಿ ಸೊಂಟದ ಮೂಳೆಗಳು ಗಟ್ಟಿಯಾಗಬೇಕು. ಏಕೆಂದರೆ ಹೊಸ ಜೀವಕೋಶಗಳು ಹುಟ್ಟುವುದು ಈ ವಯಸ್ಸಿನಲ್ಲಿ ಮಾತ್ರ. ಜತೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ರಿಲೆಕ್ಸೇಷನ್ ವ್ಯಾಯಾಮ ಹೇಳಿಕೊಡಬೇಕು. ಇದು ಅವರನ್ನು ಒತ್ತಡದಿಂದ ದೂರಮಾಡುತ್ತದೆ. ಇವರಿಗೆ ಯೋಗ ಮತ್ತು ಪ್ರಾಣಾಯಾಮ ಮಾಡಿಸಬೇಕು ಎಂದು ಕಿವಿಮಾತು ಹೇಳಿದರು.
    ಲಯನ್ಸ್ ಅಧ್ಯಕ್ಷೆ ಪ್ರಭಾವತಿ ಶ್ರೀಧರ್ ಮಾತನಾಡಿ, ಜೈ ಗುರುದೇವ್ ಯೋಗ ಕೇಂದ್ರದ ಚಟುವಟಿಕೆಗಳು ವಿಭಿನ್ನವಾಗಿವೆ. ೨೦ರಿಂದ ೭೦ ವರ್ಷದವರಿಗೂ ಯೋಗ ತರಬೇತಿ ನೀಡಿ ಅವರನ್ನು ಕ್ರಿಯಾಶೀಲವಾಗಿ, ಆರೋಗ್ಯವಂತರನ್ನಾಗಿಡಲು ನೆರವಾಗಿದ್ದಾರೆ. ಯೋಗ ಕೇಂದ್ರದ ತರಬೇತಿಯನ್ನು ಲಯನ್ಸ್ ಸೇವಾ ಮಂದಿರದಲ್ಲೇ ನಡೆಸುತ್ತಿದ್ದು, ಲಯನ್ಸ್ ಸಂಸ್ಥೆಗೂ ಇದು ಹೆಮ್ಮೆಯಾಗಿದೆ ಎಂದರು.
    ಪತ್ರಕರ್ತ ಗಣಪತಿ ಶಿರಳಗಿ, ಮಾಜಿ ಸೈನಿಕ ಬಿ.ಟಿ.ಸೋಮಣ್ಣ ಬೇಳೂರು, ಸುಭಾಷ್ ಕೌತಳ್ಳಿ, ದೈವಜ್ಞ ಸಮಾಜದ ಉಪಾಧ್ಯಕ್ಷ ಹನುಮಂತ ವಿ.ಶೇಟ್ ಮಾತನಾಡಿದರು. ಜೈ ಗುರುದೇವ್ ಯೋಗ ಕೇಂದ್ರದ ಸಂಚಾಲಕ ಜಿ.ಕೆ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಯೋಗ ಕೇಂದ್ರದಿAದ ನಡೆಸಲಾದ ವಿವಿಧ ಆಟೋಟ ಸ್ಪರ್ಧೆ ಹಾಗೂ ಯೋಗ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರದ ಸದಸ್ಯರು ವಿವಿಧ ಮನರಂಜನಾ ಕಾರ್ಯಕ್ರಮ ನೀಡಿ ರಂಜಿಸಿದರು. ಯೋಗ ಕೇಂದ್ರದ ಶಿಕ್ಷಕ ಎನ್.ಎಚ್.ತಿಮ್ಮಪ್ಪ, ಪ್ರವೀಣ್ ರಾಯ್ಕರ್, ಜಿ.ಕೆ.ಕೃಷ್ಣಮೂರ್ತಿ, ಎನ್.ಎಚ್.ತಿಮ್ಮಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts