More

    ಯತ್ನಾಳ್ ಕನಕಪುರ ಕೋರ್ಟ್‌ನಿಂದ ರಕ್ಷಣೆ ಕೋರಲಿ ಡಿ.ಕೆ.ಶಿ ಪರ ವಕೀಲರ ವಾದ

    ಬೆಂಗಳೂರು : ಬೆದರಿಕೆ ಇದ್ದಲ್ಲಿ ಕನಕಪುರ ನ್ಯಾಯಾಲಯದಲ್ಲಿಯೇ ಸೂಕ್ತ ರಕ್ಷಣೆ ಒದಗಿಸುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಬಹುದಿತ್ತು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪರ ವಕೀಲ ಉದಯ ಹೊಳ್ಳ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದು, ಬೆಂಗಳೂರಿಗೆ ಕೇಸ್ ವರ್ಗಾವಣೆ ಸಂಬಂಧ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

    ತಮ್ಮವಿರುದ್ಧ 204 ಕೋಟಿ ಪರಿಹಾರ ಕೋರಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೂಡಿರುವ ವ್ಯಾಜ್ಯವನ್ನು ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ಕೋರಿ ಯತ್ನಾಳ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸುನೀಲ್ ಕುಮಾರ್ ದತ್ತ ಯಾದವ ಅವರಿದ್ದ ಪೀಠ ವಿಚಾರಣೆ ನಡೆಸಿತು.

    ಈ ವೇಳೆ, ಡಿಕೆಶಿ ಪರ ವಕೀಲರು ಅರ್ಜಿದಾರರು ಬೆದರಿಕೆಯ ಕಾರಣವನ್ನು ನೀಡಿ ಪ್ರಕರಣವನ್ನು ಕನಕಪುರ ನ್ಯಾಯಾಲಯದಿಂದ ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿರುವುದು ಒಪ್ಪುವಂಥದ್ದಲ್ಲ. ಹಾಗೇನಾದರೂ ಪ್ರತಿವಾದಿಗಳಿಂದ ಬೆದರಿಕೆ ಇದ್ದಲ್ಲಿ ಸೂಕ್ತ ರಕ್ಷಣೆಯನ್ನು ಒದಗಿಸುವಂತೆ ಕನಕಪುರ ನ್ಯಾಯಾಲಯದಲ್ಲಿಯೇ ಮನವಿ ಮಾಡಬಹುದಿತ್ತು ಎಂದು ವಾದ ಮಂಡಿಸಿದರು.
    ನ್ಯಾಯಪೀಠ ವಿಚಾರಣೆಯನ್ನು 26ಕ್ಕೆ ಮುಂದೂಡಿದೆ.

    ಏನಿದು ಪ್ರಕರಣ?
    ಡಿ.ಕೆ. ಶಿವಕುಮಾರ್ ನಮ್ಮ (ಬಿಜೆಪಿ) ನಾಯಕರನ್ನು ಭೇಟಿ ಮಾಡಿ ತಮ್ಮ ವಿರುದ್ಧದ ಆದಾಯ ತೆರಿಗೆ ಇಲಾಖೆ ಪ್ರಕರಣಗಳಿಂದ ರಕ್ಷಣೆ ಕೊಡಿಸುವಂತೆ ಕೋರಿದ್ದಾರೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ್ದಾರೆ ಎಂಬುದು ನನಗೆ ತಿಳಿದಿದೆ ಎಂದು 2019ರ ಜೂ.23ರಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದರು.

    ತಮ್ಮ ವಿರುದ್ಧದ ಜಾರಿ ನಿರ್ದೇಶನಾಲಯದ ಪ್ರಕರಣಗಳನ್ನು ಮುಕ್ತಾಯಗೊಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚಿಸಲು ತಮ್ಮ ವಿರೋಧ ಇಲ್ಲ ಎಂದು ಡಿಕೆಶಿ ಹೇಳಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದನ್ನು ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡಿದ್ದವು. ಈ ಹೇಳಿಕೆಯನ್ನು ಆಧರಿಸಿ ಡಿಕೆಶಿಕನಕಪುರ ನ್ಯಾಯಾಲಯದಲ್ಲಿ ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ₹204 ಕೋಟಿ ರೂ. ಹಾನಿ ತುಂಬಿಕೊಡಲು ಯತ್ನಾಳ್‌ಗೆ ಆದೇಶಿಸಬೇಕು ಎಂದು ಕೋರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts