More

    ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ ಪಂಚಮಸಾಲಿ ಹೋರಾಟ; ಸಿಎಂ ಬೊಮ್ಮಾಯಿ ಮೋಸ ಮಾಡಿದ್ದಾರೆ ಎಂದು ಕಿಡಿ!

    ಬೆಂಗಳೂರು: ಇಂದು ಕೂಡ ಫ್ರೀಡಂ ಪಾರ್ಕ್​ನಲ್ಲಿ ಪಂಚಮಸಾಲಿ ಮೀಸಲಾತಿ ಕೂಗು ಕೇಳಿಬರುತ್ತಿದ್ದು ಮತ್ತೊಮ್ಮೆ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.

    ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಮುಂದುವರಿದ ಧರಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಸಮುದಾಯದ ಜನರು, ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಮೀಸಲಾತಿ ಸಿಗುವರೆಗೂ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಯತ್ನಾಳ್ ಎಚ್ಚರಿಕೆ ಕೂಡ ನೀಡಿದ್ದಾರೆ.

    ಇಂದಿನ ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಕೂಡ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು ಪಂಚಮಸಾಲಿ ಮೀಸಲಾತಿ ಹೋರಾಟದ ಮುಂದಾಳತ್ವವನ್ನು ಬಸವನಗೌಡ ಯತ್ನಾಳ ವಹಿಸಿಕೊಂಡಿದ್ದಾರೆ. ಎಲೆಕ್ಷನ್ ಕೂಡ ಹತ್ತಿರ ಆಗುತ್ತಿದ್ದು ಮೀಸಲಾತಿ ಹೋರಾಟದ ನಾಯಕತ್ವನ್ನು ಯತ್ನಾಳ್​ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಮುಖಂಡರ ಲೆಕ್ಕಾಚಾರ ಶುರು ಆಗಿದೆ. ಒಟ್ಟಿನಲ್ಲಿ ಮೀಸಲಾತಿ ಹೋರಾಟ ಸಿಎಂ ಬಸವರಾಜ ಬೊಮ್ಮಾಯಿ‌ಯನ್ನು ಇಕ್ಕಟ್ಟಿಗೆ ಸಿಲುಕಿದೆ..!

    ಪಂಚಮಸಾಲಿ ಸಮುದಾಯ ಕಳೆದ 27 ವರ್ಷದಿಂದ ಮೀಸಲಾತಿಗೆ ಹೋರಾಟ ನಡೆಸಿಕೊಂಡು ಬಂದಿದ್ದು ಮತ್ತೆ ಸರ್ಕಾರದ ವಿರುದ್ಧ ಪಂಚಮಸಾಲಿ ಸಮುದಾಯ ಗುಡುಗಿದೆ. ಈ ಸಂದರ್ಭ ಜನರು ‘ಸಿಎಂ ಬೊಮ್ಮಾಯಿ‌ ಕೂಡ ನಮ್ಮ ಸಮುದಾಯಕ್ಕೆ ಮೋಸ ಮಾಡಿದ್ದಾರೆ’ ಎಂದು ಕಿಡಿ ಕಾರುತ್ತಿದ್ದಾರೆ.

    ಪೂರ್ಣ ಚಿತ್ರಣ:
    ಕಳೆದ ಎರಡು ವರ್ಷದಿಂದ ಜಯಮೃತ್ಯುಂಜಯ ಸ್ವಾಮೀಜಿ ನಿರಂತರ ಹೋರಾಟ ನಡೆಸಿದರೂ ಪ್ರಯೋಜನ ಆಗಿಲ್ಲ. 3Bನಲ್ಲಿ ಇರುವ ಸದ್ಯ ಪಂಚಮಸಾಲಿ ಸಮುದಾಯಕ್ಕೆ 5% ಮಾತ್ರ ಮೀಸಲಾತಿ ಇದೆ. ಹೀಗಾಗಿ ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ಕೊಡಿ ಎಂದು ಆಗ್ರಹ ಅನೇಕ ಕಾಲದಿಂದ ವ್ಯಕ್ತವಾಗುತ್ತಿದೆ. 2A ಮೀಸಲಾತಿ ಕೊಟ್ಟರೆ 15% ಮೀಸಲಾತಿ ಪಂಚಮಸಾಲಿ ಸಮುದಾಯಕ್ಕೆ ಸಿಗಲಿದೆ. ಅದಲ್ಲದೇ 2007ರ ತನಕ ಈ‌ ಪಂಚಮಸಾಲಿ ಸಮುದಾಯದ ಜನರಲ್ ಕ್ಯಾಟಗಿರಿಯಲ್ಲಿತ್ತು ಆದರೆ 2008ರಲ್ಲಿ ಬಿ.ಎಸ್ ಯಡಿಯೂರಪ್ಪ ಸಿಎಂ ಆದಾಗ ಪಂಚಮಸಾಲಿ ಸಮುದಾಯವನ್ನ 3B ಮೀಸಲಾತಿ ಸೇರ್ಪಡೆ ಮಾಡಿದ್ದರು.

    ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ ಒಟ್ಟು 1 ಕೋಟಿ ಜನಸಂಖ್ಯೆ ಹೊಂದಿದ್ದು ಈ ಹಿಂದೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಂತರಾಜ್ ನಿಯೋಗವನ್ನು ಮಾಜಿ ಸಿಎಂ ಸಿದ್ದರಾಮಯ್ಯ ರಚನೆ ಮಾಡಿದ್ದರು. ನಂತರ 2016ರಲ್ಲಿ‌‌ ಕಾಂತರಾಜ್ ಆಯೋಗ ಸರ್ಕಾರಕ್ಕೆ ವರದಿ‌ ಸಲ್ಲಿಸಿತ್ತು. ಆದರೆ ಕಾಂತರಾಜ್ ವರದಿ ಅಂದಿನ ಸರ್ಕಾರ ಅಧಿವೇಶನದಲ್ಲಿ ಮಂಡನೆ ಆಗಿಲ್ಲ. ಬಳಿಕ ಜಯಪ್ರಕಾಶ್ ಹೆಗಡೆ, ಕುಲಶಾಸ್ತ್ರದ ಅಧ್ಯಯನದ ಮೂಲಕ ಬೆಳಗಾವಿ ಅಧಿವೇಶನದಲ್ಲಿ ಮಧ್ಯಂತರ ವರದಿ ನೀಡಿದ್ದರು. ಅದಾದ ಮೇಲೆ ಬೊಮ್ಮಾಯಿ‌ ಸರ್ಕಾರ ಕ್ಯಾಬಿನೆಟ್​ನಲ್ಲಿ 2c, 2d ಎಂಬ ಎರಡು ಎರಡು ಹೊಸ ಪ್ರವರ್ಗ ಸೃಷ್ಟಿ ಮಾಡಿತ್ತು. ಆದರೆ ಹೈಕೋರ್ಟ್ ಇದೀಗ ಹೊಸ ಪ್ರವರ್ಗ ಸೃಷ್ಟಿಗೆ ತಡೆಯಾಜ್ಞೆ ಒಡ್ಡಿದೆ. ಲಿಂಗಾಯತ ಸಮುದಾಯದಲ್ಲಿ 102 ಉಪಜಾತಿಗಳು ಇದ್ದು ಕೆಲ ಉಪಜಾತಿಗಳಿಗೆ 15% ಮೀಸಲಾತಿ ಸಿಕ್ಕಿದೆ. ಆದರೆ ಈಗ ಈ ಹೊಸ ಪ್ರವರ್ಗದ ಅಡಿಯಲ್ಲಿ ಮೀಸಲಾತಿ ಬೇಡ, ನಮಗೆ 2A ಮೀಸಲಾತಿ ಕೊಡಿ ಎಂದು ಪಂಚಮಸಾಲಿ ಸಮುದಾಯ ಬೇಡಿಕೆ ಇಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts