More

    ಯತೀಂದ್ರ ಸಿದ್ದರಾಮಯ್ಯಗೆ ಬಹಿಷ್ಕಾರ ಹಾಕಿಲ್ಲ

    ತಿ.ನರಸೀಪುರ : ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮುದ್ದಬೀರನ ಹುಂಡಿ ಗ್ರಾಮದಲ್ಲಿ ಗ್ರಾಮಸ್ಥರು ಘೇರಾವ್ ಕೂಗಿ ಬಹಿಷ್ಕಾರ ಹಾಕಿದರು ಎಂಬುದು ಶುದ್ಧ ಸುಳ್ಳು ಎಂದು ಗ್ರಾಮದ ಮುಖಂಡ ಮರಿಸ್ವಾಮಿ ಸ್ಪಷ್ಟನೆ ನೀಡಿದರು.


    ಯತೀಂದ್ರ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮುದ್ದಬೀರನ ಹುಂಡಿ ಗ್ರಾಮದಲ್ಲಿ ಜನರಿಂದ ಅಹವಾಲು ಸ್ವೀಕರಿಸಲು ಹೋದ ವೇಳೆ ಗ್ರಾಮಸ್ಥರು, ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಅವರಿಗೆ ಘೇರಾವ್ ಹಾಕಿದರು. ಗ್ರಾಮಕ್ಕೆ ಬರದಂತೆ ತಡೆ ಒಡ್ಡಿದರು ಎಂದು ಗ್ರಾಮದ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.


    ಜನರಿಂದ ಅರ್ಜಿ ಸ್ವೀಕರಿಸಲು ಗ್ರಾಮಕ್ಕೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯ ಅವರನ್ನು ಆರತಿ ಬೆಳಗಿ ಸ್ವಾಗತಿಸಲಾಗಿದೆ. ಆದರೆ ಅವರಿಗೆ ಬಹಿಷ್ಕಾರ, ಘೇರಾವ್ ಹಾಕಿಲ್ಲ ಎಂದು ಮಾಹಿತಿ ನೀಡಿದರು.


    ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ತುಂಬ್ಲಾ ಬಾಬು ಮಾತನಾಡಿ, ಗ್ರಾಮದಲ್ಲಿ ಈ ಹಿಂದೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ನಡೆದ ವೈಯಕ್ತಿಕ ಗಲಾಟೆ ಪ್ರಕರಣದಲ್ಲಿ ಪೊಲೀಸರು ನಾಲ್ವರ ವಿರುದ್ಧ ಕೇಸ್ ದಾಖಲು ಮಾಡಿದ್ದರು.

    ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಜಾಮೀನಿನ ಮೇಲೆ ಹೊರ ಬಂದಿದ್ದು, ಇನ್ನು ಮೂವರು ಕಸ್ಟಡಿಯಲ್ಲೇ ಇದ್ದಾರೆ. ಕಸ್ಟಡಿಯಲ್ಲಿರುವ ತಮ ್ಮಮಕ್ಕಳನ್ನು ಬಿಡಿಸಿಕೊಡಿ ಎಂದು ಮಕ್ಕಳ ಪಾಲಕರು ಯತೀಂದ್ರ ಅವರನ್ನು ಕೇಳಿದ್ದಾರೆ.

    ನೀವು ಹೇಳಿದ್ದರೆ ಕೇಸ್ ಆಗುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಆದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಆರೋಪಿತರನ್ನು ಬಿಡಿಸಲು ಸಾಧ್ಯವಿಲ್ಲ ಎಂಬುದನ್ನು ಯತೀಂದ್ರ ಹೇಳಿದ ವೇಳೆ ಪಾಲಕರು ಅಸಮಾಧಾನ ತೋಡಿಕೊಂಡಿದ್ದಾರೆ. ಇಷ್ಟೇ ಆಗಿರುವುದು ಎಂದರು.


    ಪುರಸಭೆ ಮಾಜಿ ಅಧ್ಯಕ್ಷ ಎನ್.ಸೋಮು ಮಾತನಾಡಿದರು. ಮುದ್ದು ಬೀರನಹುಂಡಿ ಗ್ರಾಮಸ್ಥರಾದ ಶ್ರೀಕಂಠ, ಮಹದೇವ, ಗುರುಸ್ವಾಮಿ, ರಾಜು, ಮಹೇಶ್, ಬಸವರಾಜು, ಶಿವಮಾದ, ರಾಜು, ಮಾದೇಗೌಡ, ಶಿವಣ್ಣ, ರಾಜು, ಅಶ್ವಥ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts