More

    IND vs ENG: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ ‘ಯಶಸ್ವಿ’ ಗೆಲುವು!

    ರಾಜ್​ಕೋಟ್: ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವಿನ ನಡೆದ ಐದು ಟೆಸ್ಟ್‌ಗಳ ಸರಣಿಯ 3ನೇ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಪೂರ್ಣ ಪ್ರಾಬಲ್ಯ ಮೆರೆದ ಭಾರತ ತಂಡ 434 ರನ್‌ಗಳ ಜಯ ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿದೆ.
    ರಾಜ್​ಕೋಟ್​ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​ ಅವರ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ತಂಡ ಅದ್ಧೂರಿ 557 ರನ್​ ಗಳಿಸುವ ಮೂಲಕ ಬೃಹತ್​ ಟಾರ್ಗೆಟ್ ನೀಡಿತು.

    ಇದನ್ನೂ ಓದಿ: ಸದ್ಯದಲ್ಲೇ ಬಿಬಿಎಂಪಿ ಬಜೆಟ್ ಮಂಡನೆ: ಉಪಮುಖ್ಯಮಂತ್ರಿ ಶಿವಕುಮಾರ್

    ಈ ಟಾರ್ಗೆಟ್​ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಭಾರತೀಯ ಬೌಲರ್​​ ಗಳ ಎದುರು ತರೆಗೆಲೆಗಳಂತೆ ಬ್ಯಾಕ್ ಟು ಬ್ಯಾಕ್​ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿತು. ಕೊನೆಗೆ ಆಂಗ್ಲರು 39.4 ಓವರ್​ಗೆ 10 ವಿಕೆಟ್ ಕಳೆದುಕೊಂಡು 122 ರನ್​ ಗಳಿಸುವ ಮೂಲಕ 434 ರನ್​ ಗಳಿಂದ ಸೋಲನ್ನಪ್ಪಿತು.
    ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಬೇಟೆಯಾಡಿದ ಬೌಲರ್‌: ಬ್ಯಾಝ್‌ಬಾಲ್‌ ಕ್ರಿಕೆಟ್‌ ಆಡಿ ವಿಶ್ವ ದಾಖಲೆಯ 557 ರನ್‌ ಗುರಿ ಮೆಟ್ಟನಿಲ್ಲುವ ಹಠದೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳನ್ನು ಭಾರತೀಯ ಬೌಲರ್‌ಗಳ ಅಕ್ಷರಶಃ ಬೇಟೆಯಾಡಿದರು. ನೋಡ ನೋಡುತ್ತಿದ್ದಂತೆಯೇ ಇಂಗ್ಲೆಂಡ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ಆರಂಭಿಸಿದ್ದರು. 39.4 ಓವರ್‌ಗಳಲ್ಲಿ ಇಂಗ್ಲೆಂಡ್‌ 122 ರನ್‌ಗಳಿಗೆ ಆಲ್ಔಟ್‌ ಆಯಿತು.

    ಬ್ಯಾಟಿಂಗ್​ ನಲ್ಲಿ ಎಡವಿದ ಆಂಗ್ಲರು: ಆರಂಭಿಕ ಆಟಗಾರ ಜಾಕ್ ಕ್ರೌಲಿ 11 ರನ್ ಗಳಿಸಿ ಔಟಾದರೆ, ಮೊದಲ ಇನ್ನಿಂಗ್ಸ್ ನಲ್ಲಿ 153 ರನ್ ಗಳಿಸಿದ್ದ ಬೆನ್ ಡಕೆಟ್ 2ನೇ ಇನಿಂಗ್ಸ್ ನಲ್ಲಿ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಓಲಿ ಪೋಪ್ 3 ರನ್ ಗಳಿಸಿದರೆ, ಜೋ ರೂಟ್ 7 ರನ್ ಗಳಿಸಿ ಔಟಾದರು. ಎರಡನೇ ಇನ್ನಿಂಗ್ಸ್‌ನಲ್ಲೂ ಜಾನಿ ಬೈರ್‌ಸ್ಟೋ ಅವರ ಕಳಪೆ ಫಾರ್ಮ್ ಮುಂದುವರೆದಿದೆ. ಬೈರ್‌ಸ್ಟೋವ್ ರವೀಂದ್ರ ಜಡೇಜಾ ಅವರ ವೈಯಕ್ತಿಕ ಸ್ಕೋರ್ 4ರಲ್ಲಿ ಎಲ್‌ಬಿಡಬ್ಲ್ಯೂ ಆಗಿ ಔಟಾದರು. ನಾಯಕ ಬೆನ್ ಸ್ಟೋಕ್ಸ್ 15 ರನ್ ಕೊಡುಗೆ ನೀಡಿದರು. ರೆಹಾನ್ ಅಹ್ಮದ್ ಗೆ ಕುಲದೀಪ್ ಯಾದವ್ ಖಾತೆಯನ್ನೂ ತೆರೆಯಲಿಲ್ಲ.

    ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಸ್ಪಿನ್ನರ್‌ ರವೀಂದ್ರ ಜಡೇಜಾ 5 ವಿಕೆಟ್‌ ಪಡೆದು ಮಿಂಚಿದರು. 2 ವಿಕೆಟ್‌ ಪಡೆದ ಕುಲ್ದೀಪ್‌ ಯಾದವ್‌ ಉತ್ತಮ ಸಾಥ್‌ ನೀಡಿದರೆ, ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಮತ್ತು ರವಿಚಂದ್ರನ್‌ ಅಶ್ವಿನ್‌ ತಲಾ ವಿಕೆಟ್‌ ಪಡೆದು ಎದುರಾಳಿ ಬ್ಯಾಟರ್‌ಗಳಿಗೆ ಖೆಡ್ಡ ತೋಡಿದರು.

    IND vs ENG: ಇಂಗ್ಲೆಂಡ್​ ವಿರುದ್ಧ ಭಾರತಕ್ಕೆ 'ಯಶಸ್ವಿ' ಗೆಲುವು!

    ಜೈಸ್ವಾಲ್​ ಭರ್ಜರಿ ದ್ವಿಶತಕ: ಯಶಸ್ವಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಅಬ್ಬರ ಸೃಷ್ಟಿಸಿದ್ದಾರೆ. ವಿಶಾಖಪಟ್ಟಣಂ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದರು. ಇದೀಗ ಈ ಬ್ಯಾಟ್ಸ್‌ಮನ್ ರಾಜ್‌ಕೋಟ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಅವರು 80 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು ಮತ್ತು ನಂತರ 122 ಎಸೆತಗಳನ್ನು ಎದುರಿಸಿದ ಅವರು 9 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

    ರಾಜ್‌ಕೋಟ್ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತಕ್ಕೆ ಶುಭಮನ್ ಗಿಲ್ ರೂಪದಲ್ಲಿ ಮೊದಲ ಹೊಡೆತ ಬಿದ್ದತು. ಇದಾದ ನಂತರ ಯಶಸ್ವಿ ಜೈಸ್ವಾಲ್ ಮತ್ತೆ ಮೈದಾನಕ್ಕೆ ಮರಳಿದ ಅವರು 192 ಎಸೆತಗಳಲ್ಲಿ 11 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳ ಸಹಾಯದಿಂದ ತಮ್ಮ 150 ರನ್‌ಗಳನ್ನು ಪೂರ್ಣಗೊಳಿಸಿದರು. ಇದಾದ ಬಳಿಕ ಸತತ ಎರಡನೇ ಪಂದ್ಯದಲ್ಲಿ ದ್ವಿಶತಕ ಬಾರಿಸಿದರು. ಅಂತಿಮವಾಗಿ 236 ಎಸೆತದಲ್ಲಿ 14 ಬೌಂಡರಿ ಮತ್ತು 12 ಸಿಕ್ಸ್ ಸಹಿತ 214 ರನ್ ಗಳಿಸಿ ಅಜೇಯರಾಗಿ ಉಳಿದರು.

    ಶುಭ್​ಮನ್ ಗಿಲ್​ ಸಹ ಭರ್ಜರಿ ಬ್ಯಾಟಿಂಗ್​ ಮಾಡಿದರು. ಶುಭ್​ಮನ್ ಗಿಲ್ 151 ಎಸೆತದಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್ ಮೂಲಕ 91 ರನ್ ಗಳಿಸಿ ಔಟ್ ಆದರು. ಚೊಚ್ಚಲ ಪಂದ್ಯವನ್ನಾಡುತ್ತಿರುವ ಸರ್ಫರಾಜ್​ ಖಾನ್​ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಸಿಡಿಸಿದರು. ಸರ್ಫರಾಜ್​ 68 ರನ್ ಗಳಿಸಿ ಅಜೇಯರಾಗಿ ಉಳಿದರು. ಉಳಿದಂತೆ ತಂಡದ ನಾಯಕ ರೋಹಿತ್ ಶರ್ಮಾ 19 ರನ್, ರಜತ್ ಪಾಟಿದಾರ್ 0, ಕುಲ್​ದೀಪ್ ಯಾದವ್ 27 ರನ್ ಸಿಡಿಸಿದರು.

    ಭಾರತ ಮತ್ತು ಇಂಗ್ಲೆಂಡ್​ ನಡುವಿನ ನಡೆದ ಐದು ಟೆಸ್ಟ್‌ಗಳ ಸರಣಿಯ 4ನೇ ಟೆಸ್ಟ್‌ ಪಂದ್ಯ ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಫೆ.23ರಂದು ಶುರುವಾಗಲಿದೆ.

    ಮಾಜಿ ಪ್ರಧಾನಿ ದೇವೇಗೌಡ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಬಿಡುಗಡೆ

    ಸದ್ಯದಲ್ಲೇ ಬಿಬಿಎಂಪಿ ಬಜೆಟ್ ಮಂಡನೆ: ಉಪಮುಖ್ಯಮಂತ್ರಿ ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts